ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಜ್ರಿವಾಲ್ ಆಯ್ತು, ಈಗ ನರೇಂದ್ರ ಮೋದಿ ಜತೆ ಊಟ!

By Srinath
|
Google Oneindia Kannada News

ನವದೆಹಲಿ, ಮಾರ್ಚ್ 15: ಇಂದು ರಾತ್ರಿ ಬೆಂಗಳೂರಿಗರು ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಜತೆ ಕುಳಿತು ಪುಷ್ಕಳ ಊಟ ಮಾಡಲು ತಯಾರಿ ನಡೆಸುತ್ತಿರಬಹುದು. ಅದಾಗಲೇ ಕೇಜ್ರಿವಾಲ್ ಸಹ ನಿನ್ನೆ ರಾತ್ರಿಯೇ ಬೆಂಗಳೂರಿಗೆ ಬಂದಿಳಿದಾಗಿದೆ.

ಈ ಮಧ್ಯೆ ಏನಾಯಿತೆಂದರೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಇದ್ದಾರಲ್ಲಾ ಅವರ 'ಚಾಯ್ ಪೆ ಚರ್ಚಾ' ನಡೆಸಿದ್ದಕ್ಕೆ ಚುನಾವಣಾ ಆಯೋಗವು ಗರಂ ಆಗಿ ಚಹಾ ಉಚಿತವಾಗಿ ಮಾರಾಟ ಮಾಡುವಂತಿಲ್ಲ. ಅದರಿಂದ ಮತದಾರರನ್ನು ಪ್ರಲೋಭೆಗೆ ಒಡ್ಡಿದಂತಾಗುತ್ತದೆ. ಲೋಟಾಗೆ ಇಂತಿಷ್ಟು ಅಂತ ದುಡ್ಡು ಫಿಕ್ಸ್ ಮಾಡ್ತೇವೆ ಎಂದು ಹೇಳಿದು. ಜತೆಗೆ, 'ಚಾಯ್ ಪೆ ಚರ್ಚಾ' ಜಾಯಿಂಟ್ಸ್ ಮೇಲೆ ದಾಳಿ ನಡೆಸಿ, ಅಲ್ಲಿದ್ದ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿತ್ತು.

ಇದೇ ವೇಳೆ ಬೆಂಗಳೂರಿನಲ್ಲಿ ಕೇಜ್ರಿವಾಲ್ ಊಟಕ್ಕೆ 20 ಸಾವಿರ ರೂ ನಿಗದಿ ಪಡಿಸಿ, ಆಮ್ ಆದ್ಮಿ ಪಕ್ಷ ನೂತನ ಪ್ರಚಾರ ತಂತ್ರ ಅಳವಡಿಸಿಕೊಂಡಿತು. ಇದು ಬೆಂಗಳೂರಿಗೆ ಬಂದಿದ್ದ ಬಿಜೆಪಿಯ ವಕ್ತಾರೆ ಮೀಲಾಕ್ಷಿ ಲೇಖಿ ಅವರ ಕಿವಿಗೆ ಬಿದ್ದು, ಅವರು ಆಯೋಗದ ಗಮನ ಸೆಳೆದರು. 'ಮೋದಿಯ ಚಹಾ ನಿಮ್ಮ ಕಣ್ಣಿಗೆ ಬೀಳುತ್ತದೆ. ಆಮ್ ಆದ್ಮಿಯ 20 ಸಾವಿರ ರೂ ಊಟದ ವಿಷಯ ಹೇಗೆ? ಅದು ಕೊನೆಗೆ party fundಗೆ ಹೋಗುತ್ತದೆ. ಹಾಗಾಗಿ ಅದಕ್ಕೂ ತೆರಿಗೆ ಕಟ್ಟಲಿ' ಎಂದು ಗುಡುಗಿದರು.

ತಕ್ಷಣ ಎಚ್ಚೆತ್ತ ಆಯೋಗವು ತಮ್ಮಿಂದ ಎಡವಟ್ಟಾಗಿದೆ. ಮೋದಿ ಚಹಾ ಉಚಿತವಾಗಿ ಸರಬರಾಜು ಮಾಡಬಹುದು. ಅದಕ್ಕೆ ಆಯೋಗದ ಅಭ್ಯಂತವೇನೂ ಇಲ್ಲ' ಎಂದು ಘೋಷಿಸಿತು. (ಬೆಂಗಳೂರಿನಲ್ಲಿ ಕೇಜ್ರಿವಾಲ್ ಊಟಕ್ಕೆ 20 ಸಾವಿರ ರೂ!)

ತಾಜಾ ಬೆಳವಣಿಗೆ ಏನೆಂದರೆ ಇದೀಗ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಜತೆ ನೀವೂ ಊಟ ಮಾಡುವ ಸುಯೋಗ ಒದಗಿದೆ. ಆದರೆ ಇದಕ್ಕೆ ನೀವು ತೆರಬೇಕಾಗಿರುವುದು 20 ಸಾವಿರ ರೂ ಅಲ್ಲ. ಬದಲಿಗೆ ಒಂದು ಊಟಕ್ಕೆ 1 ಲಕ್ಷ ರೂ. ನಿಂದ 25 ಲಕ್ಷ ರೂ. ನೀಡಬೇಕಾಗುತ್ತದೆ. ಅಂದಹಾಗೆ, ಅಮೆರಿಕದ ಅಧ್ಯಕ್ಷೀಯ ಚುನಾವಣೆ ಸಂದರ್ಭಗಳಲ್ಲೂ ಇಂತಹ fund-raising ವಿದ್ಯಮಾನ ಕಂಡುಬರುತ್ತದೆ.

ಲಕ್ಕಿ ಡಿಪ್ ಗೆದ್ದರೆ ಭಾವಿ ಪ್ರಧಾನ ಮಂತ್ರಿ ಜತೆ ಮತ್ತೊಮ್ಮೆ ಊಟ

ಲಕ್ಕಿ ಡಿಪ್ ಗೆದ್ದರೆ ಭಾವಿ ಪ್ರಧಾನ ಮಂತ್ರಿ ಜತೆ ಮತ್ತೊಮ್ಮೆ ಊಟ

ಮೋದಿ ಊಟದ ಕಾರ್ಯಕ್ರಮದಲ್ಲಿ 'ಲಕ್ಕಿ ಡಿಪ್' ಸಹ ಇರುತ್ತದೆ. ಜಯಶಾಲಿಯೊಬ್ಬರು ಭಾವಿ ಪ್ರಧಾನ ಮಂತ್ರಿ ಜತೆ ಏಕಾಂತದಲ್ಲಿ ಕುಳಿತು ಮತ್ತೊಮ್ಮೆ ಊಟ ಮಾಡಬಹುದು.

ಮೋದಿ ಜತೆ ಊಟ ದೆಹಲಿಯ ಅಶೋಕಾ ಹೋಟೆಲಿನಲ್ಲಿ ಮಾರ್ಚ್ 26

ಮೋದಿ ಜತೆ ಊಟ ದೆಹಲಿಯ ಅಶೋಕಾ ಹೋಟೆಲಿನಲ್ಲಿ ಮಾರ್ಚ್ 26

ಮೋದಿ ಊಟವನ್ನು ನವದೆಹಲಿಯ ಅಶೋಕಾ ಹೋಟೆಲಿನಲ್ಲಿ ಮಾರ್ಚ್ 26 (ಬುಧವಾರ)ರಂದು ಆಯೋಜಿಸಲಾಗಿದೆ. ನೀವು ಎಷ್ಟು ಹಣ ಕೊಡಬಲ್ಲಿರಿ ಎಂಬುದನ್ನು ಆಧರಿಸಿ, ಊಟದ ಟೇಬಲ್ ನಿಗದಿಪಡಿಸಲಾಗುತ್ತದೆ. ಜಾಸ್ತಿ ದುಡ್ಡು ಕೊಟ್ಟರೆ ಅಂದರೆ 2.5 ಲಕ್ಷ ರೂ ನೀಡಿದರೆ ಮೋದಿಗೆ ಹತ್ತಿರವಾಗಿ ಮೊದಲ ಸಾಲಿನಲ್ಲೇ ಕುಳಿತು ಊಟ ಮಾಡಬಹುದು. ಸ್ವಲ್ಪ ಕಡಿಮೆ ಅಂದರೆ ಲಕ್ಷಗಳಲ್ಲಿ ಹಣ ನೀಡಿದರೆ ಹಿಂದಿನ ಸಾಲಿನಲ್ಲಿ ಕುಳಿತು ಊಟ ಮಾಡಬಹುದು, ಅಷ್ಟೇ ವ್ಯತ್ಯಾಸ.

corporate sponsor ಗಳಿಗೆ ಬೇರೆಯದೇ ವ್ಯವಸ್ಥೆ

corporate sponsor ಗಳಿಗೆ ಬೇರೆಯದೇ ವ್ಯವಸ್ಥೆ

ಇಷ್ಟೇ ಅಲ್ಲಾ, ಇನ್ನೂ ಜಾಸ್ತಿ ಕೊಡ್ತೀನಿ ಅಂತ 25 ಲಕ್ಷ ರೂ ಕೊಡುವಂತಾದರೆ ಮೋದಿ ಟೇಬಲಿನಲ್ಲಿಯೇ ಕುಳಿತು ಊಟ ಮಾಡಬಹುದು. ಇನ್ನೂ ಒಂದು ವರ್ಗವಿದೆ. corporate sponsor ಗಳಿಗೆ ಬೇರೆಯದೇ ವ್ಯವಸ್ಥೆಯಿದೆ. ಆದರೆ ಅದಕ್ಕೆ 60 ಲಕ್ಷ ರೂ. ನಿಂದ 2.4 ಕೋಟಿ ರೂ. ನೀಡುವಂತಿರಬೇಕು.

ಊಟದ ಮನೆ ತುಂಬಿದರೆ 15 ಕೋಟಿ ರೂ. ಪಕ್ಷಕ್ಕೆ

ಊಟದ ಮನೆ ತುಂಬಿದರೆ 15 ಕೋಟಿ ರೂ. ಪಕ್ಷಕ್ಕೆ

Citizens for Accountable Governance ಎಂಬ NGO ಸಂಸ್ಥೆ ಈ ಊಟದ ವ್ಯವಸ್ಥೆ ಮಾಡಿದೆ. ನಿರೀಕ್ಷೆಯಂತೆ ಊಟದ ಮನೆ ತುಂಬಿದರೆ 15 ಕೋಟಿ ರೂ. ಪಕ್ಷಕ್ಕೆ ಚುನಾವಣಾ ನಿಧಿ ಸಂಗ್ರಹವಾಗುವ ಅಂದಾಜಿದೆ. ಕಳೆದ ಜನವರಿಯಲ್ಲಿ ಅಸ್ತಿತ್ವಕ್ಕೆ ಬಂದಿರುವ Modi for PM fundಗೆ ಈ ಹಣ ಸಂದಾಯವಾಗಲಿದೆ.

ಸುಮ್ಮನೆ ಹಾಗೆ ಹೋಲಿಕೆ ಮಾಡಬಹುದಾದರೆ

ಸುಮ್ಮನೆ ಹಾಗೆ ಹೋಲಿಕೆ ಮಾಡಬಹುದಾದರೆ

ಸುಮ್ಮನೆ ಹಾಗೆ ಹೋಲಿಕೆ ಮಾಡಬಹುದಾದರೆ
* ಮೋದಿ ಊಟದ ಬೆಲೆ 1 ಲಕ್ಷ ರೂ ನಿಂದ 25 ಲಕ್ಷ ರೂ.
* ಅರವಿಂದ್ ಕೇಜ್ರಿವಾಲ್ ಊಟದ ಬೆಲೆ ಹತ್ತಿಪ್ಪತ್ತು ಸಾವಿರ ರೂ.
* ಒಬಾಮಾ ಜತೆಗಿನ ಊಟದ ಬೆಲೆ $35-40,000.

English summary
After Rs 20k per mouth dinner date with Aam Aadmi chief Arvind Kejriwal in Bangalore on March 15, now BJP PM candidate Narendra Modi fund-raising dinner in Ashoka Hotel Delhi is arranged on March 26. Emulating a regular fund-raising feature of American presidential-style contests, Modi will attend a fund-raising dinner on March 26 at the capital's Ashoka Hotel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X