• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿಗೆ ಕ್ಷೇತ್ರ ಯಾವುದು?

By Srinath
|

ನವದೆಹಲಿ, ಮಾರ್ಚ್ 15- ನರೇಂದ್ರ ಮೋದಿ ಅವರು ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಸುಮಾರು ಕಾಲವಾಯಿತು. ಆದರೆ ತಾವು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದು ಅವರಿಗಿನ್ನೂ ಕಗ್ಗಂಟಾಗಿ ಪರಿಣಮಿಸಿದೆ.

ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯು ಇಂದು ಶನಿವಾರ ಸಭೆ ಸೇರಿದ್ದು, ಇಂದು ಸಂಜೆಯ ವೇಳೆಗೆ ಪಕ್ಷದ ವತಿಯಿಂದ ಮತ್ತೊಂದು ಕಂತಿನಲ್ಲಿ ಅಭ್ಯರ್ಥಿಗಳ ಹೆಸರಗಳನ್ನು ಅಖೈರು ಮಾಡಲಿದೆ. (ಕೇಜ್ರಿವಾಲ್ ಆಯ್ತು, ಈಗ ನರೇಂದ್ರ ಮೋದಿ ಜತೆ ಊಟ!)

ತನ್ಮೂಲಕ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಎದ್ದಿರುವ ಗೊಂದಲಗಳಿಗೂ ತೆರೆ ಬೀಳುವ ಸಾಧ್ಯತೆಯಿದೆ. ಮುಖ್ಯವಾಗಿ ನರೇಂದ್ರ ಮೋದಿ ಸ್ಪರ್ಧಿಸುವ ಕ್ಷೇತ್ರ ಯಾವುದು ಎಂಬುದು ಬಹಿರಂಗವಾಗಲಿದೆ. ಅಂದಹಾಗೆ ಬಿಜೆಪಿ ಈಗಾಗಲೇ 203 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿದೆ. ಇಂದು ನಾಲ್ಕನೆಯ ಪಟ್ಟಿಯಲ್ಲಿ ಇನ್ನೂ 125 ಹೆಸರುಗಳನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ.

ಪಕ್ಷದ ನಾಯಕರು ನಾಲ್ಕನೆಯ ಪಟ್ಟಿಯನ್ನು ಬಿಡುಗಡೆ ಮಾಡುವುದರಲ್ಲಿ ತಲ್ಲೀನರಾಗಿದ್ದು, ಉತ್ತರಪ್ರದೇಶದ ವಾರಣಾಸಿಯಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಆದರೆ ಕ್ಷೇತ್ರದ ಹಾಲಿ ಸಂಸದ, ಪಕ್ಷದ ಹಿರಿಯ ನಾಯಕ ಮುರಳಿ ಮನೋಹರ ಜೋಶಿ ಅವರು ಕ್ಷೇತ್ರವನ್ನು ನರೇಂದ್ರ ಮೋದಿಗೆ ಬಿಟ್ಟುಕೊಡಲು ಸುತರಾಂ ಇಚ್ಛಿಸುತ್ತಿಲ್ಲ.

ಹಾಗಾಗಿ ಮೋದಿ ಮತ್ತು ಅರುಣ್ ಜೇಟ್ಲಿ ಅವರುಗಳು ವಾರಣಾಸಿ ಮತ್ತು ಅಮೃತಸರ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ. ಇನ್ನು ಪಂಜಾಬಿನ ಅಮೃತಸರದಲ್ಲಿ ಹಾಲಿ ಸಂಸದ/ ಕ್ರಿಕೆಟ್ಟಿಗ ನವಜೀತ್ ಸಿಂಗ್ ಸಿದ್ದು ಅವರು ಈ ಬಾರಿಯೂ ತಾವೇ ಸ್ಪರ್ಧಿಸಬೇಕೆಂದು ನಿರ್ಧರಿಸಿದ್ದಾರೆ.

ಇನ್ನು ಲಖ್ನೋದಲ್ಲಿಯೂ ಇದೇ ಪರಿಸ್ಥಿತಿ ಇದೆ. ಆದರೆ ಅಲ್ಲಿನ ಹಾಲಿ ಸಂಸದ ಲಾಲ್ಜಿ ಟಂಡನ್ ಅವರು ಮೋದಿಗೆ ಬೇಕಾದ್ರೆ ಸ್ಥಾನ ಬಿಟ್ಟುಕೊಡುವೆ ಎಂದಿದ್ದಾರೆ. ಆದರೆ ಪಕ್ಷದ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರು ಇಲ್ಲಿಂದ ತಾವೇ ಸ್ಪರ್ಧಿಸ ಬಯಸಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಇಲ್ಲಿಂದ ಸಂಸದರಾಗಿದ್ದರು.

English summary
Lok Sabha Election 2014: BJP Prime Minister candidate Narendra Modi constituency may be decided today March 15. All eyes were set on the BJP's central election committee meeting which was underway in New Delhi on Saturday morning. The party is likely to settle all confusion and curiosity over the seats of some of its heavyweight candidates, including prime ministerial candidate Narendra Modi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X