ಪ್ರತಿನಿಧಿಯನ್ನು ನೇಮಿಸಿ ವಿವಾದ ಸೃಷ್ಟಿಸಿದ ಬಿಜೆಪಿ ಸಂಸದ ಸನ್ನಿ ಡಿಯೋಲ್

ನವದೆಹಲಿ, ಜುಲೈ 2: ಪಂಜಾಬ್‌ನ ಗುರುದಾಸ್‌ಪುರ ಕ್ಷೇತ್ರದಿಂದ ಮೊದಲ ಬಾರಿಗೆ ಸ್ಪರ್ಧಿಸಿ ಲೋಕಸಭೆಗೆ ಆಯ್ಕೆಯಾಗಿರುವ ಬಾಲಿವುಡ್ ನಟ, ಬಿಜೆಪಿ ಸಂಸದ ವಿವಾದ ಸೃಷ್ಟಿಸಿದ್ದಾರೆ.

ತಾವು ಪ್ರತಿನಿಧಿಸುವ ಕ್ಷೇತ್ರದಲ್ಲಿ ಸನ್ನಿ ಡಿಯೋಲ್ ಪ್ರತಿನಿಧಿಯೊಬ್ಬರನ್ನು ನೇಮಿಸಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ.

ತಮ್ಮ ಲೆಟರ್‌ಹೆಡ್‌ನಲ್ಲಿ ಹೇಳಿಕೆ ಹೊರಡಿಸಿರುವ ಸನ್ನಿ ಡಿಯೋಲ್, ಸಿನಿಮಾ ಚಿತ್ರಕಥೆಗಾರನಾಗಿರುವ ಗುರುಪ್ರೀತ್ ಸಿಂಗ್ ಪಲ್ಹೇರಿ ಅವರನ್ನು ತಮ್ಮ ಪ್ರತಿನಿಧಿಯನ್ನಾಗಿ ನೇಮಿಸಿದ್ದಾರೆ. 'ಗುರುಪ್ರೀತ್ ಅವರು ನನ್ನ ಸಂಸದೀಯ ಕ್ಷೇತ್ರದಲ್ಲಿ ಸಭೆಗಳಲ್ಲಿ ಭಾಗವಹಿಸಲಿದ್ದು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಹತ್ವದ ಸಂಗತಿಗಳ ಕುರಿತು ಗಮನ ಹರಿಸಲಿದ್ದಾರೆ' ಎಂದು ಸನ್ನಿ ಹೇಳಿದ್ದರು.

ಸನ್ನಿ ಅವರ ನಡೆ ಅವರಿಗೆ ಹೆಚ್ಚಿನ ಮತ ನೀಡಿ ಗೆಲ್ಲಿಸಿದ ಮತದಾರರಿಗೆ ಮಾಡಿರುವ ದ್ರೋಹ ಎಂದು ಕಾಂಗ್ರೆಸ್ ಟೀಕಿಸಿದೆ.

bjp mp sunny deol appointed representative gurdaspur

ಸಂಸದನೊಬ್ಬ ತನ್ನ ಪ್ರತಿನಿಧಿಯನ್ನು ನೇಮಿಸಲು ಹೇಗೆ ಸಾಧ್ಯ? ಮತದಾರರು ಸನ್ನಿ ಡಿಯೋಲ್ ಅವರನ್ನು ಸಂಸದರನ್ನಾಗಿ ಆಯ್ಕೆ ಮಾಡಿದ್ದಾರೆ. ಅವರ ಪ್ರತಿನಿಧಿಯನ್ನಲ್ಲ. ತನ್ನ ಪ್ರತಿನಿಧಿಯನ್ನು ಆಯ್ಕೆ ಮಾಡುವ ಮೂಲಕ ಸನ್ನಿ ಡಿಯೋಲ್ ಗುರುದಾಸಪುರ ಕ್ಷೇತ್ರದ ಮತದಾರರಿಗೆ ದ್ರೋಹ ಎಸಗಿದ್ದಾರೆ ಎಂದು ಪಂಜಾಬ್ ಸಚಿವ ಸುಖ್ಜಿಂದರ್ ಸಿಂಗ್ ರಾಂಧವ ಟೀಕಿಸಿದ್ದಾರೆ.

ಏನೂ ಇಲ್ಲದೆ ಇದ್ದರೂ ವಿನಾಕಾರಣ ವಿವಾದ ಸೃಷ್ಟಿಸಲಾಗಿದೆ ಎಂದು ಸನ್ನಿ ಡಿಯೋಲ್ ಹೇಳಿದ್ದಾರೆ.

'ಗುರುದಾಸಪುರದಲ್ಲಿ ನನ್ನ ಕಚೇರಿಯನ್ನು ಪ್ರತಿನಿಧಿಸಲು ಆಪ್ತ ಸಹಾಯಕನನ್ನು ನೇಮಿಸಿದ್ದೇನೆ. ಸಂಸತ್ ಕಲಾಪದಲ್ಲಿ ಭಾಗವಹಿಸಲು ಅಥವಾ ಕೆಲಸ ಮೇಲೆ ಗುರುದಾಸಪುರದಿಂದ ಹೊರಕ್ಕೆ ನಾನು ತೆರಳಿದ್ದಾಗ ಕಾರ್ಯಗಳು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವ ಸಲುವಾಗಿ ಈ ನೇಮಕ ಮಾಡಿದ್ದೇನೆ' ಎಂದು ಸನ್ನಿ ಸ್ಪಷ್ಟೀಕರಣ ನೀಡಿದ್ದಾರೆ.

ತಾವು ಸನ್ನಿ ಅವರ ಬದಲು ಕಾರ್ಯನಿರ್ವಹಿಸುವುದಿಲ್ಲ. ಅವರ ಆಪ್ತ ಸಹಾಯಕನಾಗಿರುವುದಾಗಿ ಗುರುಪ್ರೀತ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. 'ಸಂಸದರ ಅನುಪಸ್ಥಿತಿಯಲ್ಲಿ ಬಿಜೆಪಿಯ ಇತರೆ ಮುಖಂಡರೊಂದಿಗೆ ಅಧಿಕೃತ ಸಭೆಗಳಿಗೆ ಹಾಜರಾಗುತ್ತೇನೆ ಅಷ್ಟೇ. ಗುರುದಾಸಪುರದ ಸಮಸ್ಯೆಗಳ ಕುರಿತು ಗಮನ ಹರಿಸುವ ಸಲುವಾಗಿ ನನ್ನ ಸಿನಿಮಾ ವೃತ್ತಿಯಿಂದ ವಿರಾಮ ತೆಗೆದುಕೊಳ್ಳುತ್ತಿದ್ದೇನೆ' ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+