• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಂಸದ ಗಂಭೀರ್ ಕ್ಯಾಂಟೀನ್ ವಿಸ್ತರಣೆ, ಇನ್ನಷ್ಟು ಬಡವರಿಗೆ ಊಟ

|

ನವದೆಹಲಿ, ಫೆಬ್ರವರಿ 10: ಟೀಂ ಇಂಡಿಯಾದ ಒಂದು ಕಾಲದ ಭರವಸೆಯ ಆಟಗಾರ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಜಿ ನಾಯಕ, ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು ಬಡವರಿಗೆ ಉಚಿತವಾಗಿ ಆಹಾರ ನೀಡುವ ಕಾಯಕವನ್ನು ವಿಸ್ತರಿಸಿದ್ದಾರೆ. ಪೂರ್ವ ದೆಹಲಿಯಲ್ಲಿ ಜನ್ ರಸೋಯಿ ಆರಂಭಿಸಿದ್ದಾರೆ. ಬಡವರು ಹಾಗೂ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಪರಿಶುದ್ಧ ಆಹಾರ ಹಾಗೂ ಹೋಲ್ ಸೆಲ್ ದರದಲ್ಲಿ 1 ರುಗೆ ಊಟ ನೀಡುವುದು ಜನ್ ರಸೊಯಿ ಉದ್ದೇಶವಾಗಿದೆ.

ಮೊದಲ ಜನ್ ರಸೊಯಿಯನ್ನು ಪೂರ್ವ ದೆಹಲಿ ಕ್ಷೇತ್ರದ ಗಾಂಧಿ ನಗರ ಮಾರುಕಟ್ಟೆ ಪ್ರದೇಶದಲ್ಲಿ ಕಳೆದ ಡಿಸೆಂಬರ್ ತಿಂಗಳಲ್ಲಿ ಆರಂಭಿಸಿದ್ದರು. ಸುಮಾರು 50, 000 ಮಂದಿಗೆ ಊಟ ಒದಗಿಸಲಾಗಿದೆ ಎಂದು ಬಿಜೆಪಿ ಸಂಸದರ ಕಚೇರಿ ಹೇಳಿದೆ. 365 ದಿನಗಳ ಕಾಲ ಗಂಭೀರ್ ಫೌಂಡೇಶನ್ ಬಡವರಿಗೆ ಉಚಿತವಾಗಿ ಆಹಾರ ಪೂರೈಸಲಾಗುತ್ತಿದೆ.

ಅಶೋಕ್ ನಗರದಲ್ಲಿ ಆರಂಭವಾದ ಹೊಸ ಕ್ಯಾಂಟೀನ್ ಒಮ್ಮೆಗೆ 50 ವ್ಯಕ್ತಿಗಳಿಗೆ ಊಟ ಒದಗಿಸಬಹುದಾಗಿದೆ ಎಂದು ಬಿಜೆಪಿ ಉಪಾಧ್ಯಕ್ಷ ಬೈಜಯಂತ್ ಪಾಂಡಾ ಹೇಳಿದರು. ಜನ್ ರಸೊಯಿ ಎಂಬುದು ಸಬ್ಸಿಡಿ ದರದ ಕ್ಯಾಂಟೀನ್ ಅಲ್ಲ ಇದೊಂದು ಅಭಿಯಾನ, ನಾನು ಡ್ರಾಮಾ, ಧರಣಿಯಲ್ಲಿ ತೊಡಗಿಕೊಳ್ಳಲು ರಾಜಕೀಯಕ್ಕೆ ಬಂದಿಲ್ಲ, ನೈಜ ಬದಲಾವಣೆ ನಮ್ಮಿಂದಲೇ ಆರಂಭವಾಗಬೇಕು, ನಿರ್ಗತಿಕರಿಗೆ ಆಹಾರ ಒದಗಿಸುವುದು ಆದ್ಯ ಕರ್ತವ್ಯವಾಗಿದೆ ಎಂದು ಗಂಭೀರ್ ಹೇಳಿದ್ದಾರೆ.

English summary
Former India batsman, BJP MP Gautam Gambhir launched second Jan Rasoi in Delhi to Feed Poor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X