ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರ್ಗರೇಟ್ ಆಳ್ವಾ ಫೋನ್ ಟ್ಯಾಪ್ ಆರೋಪಕ್ಕೆ ಜೋಶಿ ತಿರುಗೇಟು

|
Google Oneindia Kannada News

ನವದೆಹಲಿ, ಜುಲೈ 26: ಉಪರಾಷ್ಟ್ರಪತಿ ಚುನಾವಣೆಯಲ್ಲಿ ಯುಪಿಎ ಅಭ್ಯರ್ಥಿಯಾಗಿರುವ ಮಾರ್ಗರೇಟ್ ಆಳ್ವಾ ತಮ್ಮ ಫೋನ್ ಟ್ಯಾಪ್ ಆಗಿದೆ ಎಂದು ಆರೋಪಿಸಿದ್ದಾರೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಈ ಆರೋಪವನ್ನು ಅಲ್ಲಗೆಳೆದು, ಬಾಲಿಶ ಹೇಳಿಕೆ ನೀಡಬೇಡಿ ಎಂದಿದ್ದಾರೆ.

''ಮಾರ್ಗರೇಟ್ ಆಳ್ವಾ ಅವರ ಫೋನ್ ಅನ್ನು ಯಾರು ಏಕೆ ಟ್ಯಾಪ್ ಮಾಡಬೇಕು..? ಉಪರಾಷ್ಟ್ರಪತಿ ಚುನಾವಣೆಯಲ್ಲಿ ಫಲಿತಾಂಶ ಏನು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.. ಹೀಗಿರುವಾಗ ಆಳ್ವಾ ಅವರ ಫೋನನ್ನು ಟ್ಯಾಪ್ ಮಾಡುವ ಅಗತ್ಯ ನಮಗಿಲ್ಲ.. ಅಂಥ ಕೀಳು ಮಟ್ಟದ ರಾಜಕಾರಣವನ್ನ ಬಿಜೆಪಿ ಮಾಡುವುದಿಲ್ಲ'' ಎಂದು ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ಉಪರಾಷ್ಟ್ರಪತಿ ಅಭ್ಯರ್ಥಿಯಾದ ಬಳಿಕ ಮಾರ್ಗರೇಟ್ ಆಳ್ವಾ ಅವರು ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸುದ್ದಿಯಲ್ಲಿದ್ದಾರೆ. ಇಂದು ನನ್ನ ಫೋನ್ ಟ್ಯಾಪ್ ಮಾಡಲಾಗಿದೆ ಎಂದು ಆಳ್ವಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಆದರೆ, ಇದೆಲ್ಲವೂ ಸತ್ಯಕ್ಕೆ ದೂರವಾಗಿದೆ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.

BJP leader Prahalad Joshi reacts to Margaret Alvas Snooping Allegations, terms it as childish

ಇಂದು ಬಿಜೆಪಿಯ ಕೆಲವು ಸ್ನೇಹಿತರೊಂದಿಗೆ ಮಾತನಾಡಿದೆ. ಆ ನಂತರ ನನ್ನ ಮೊಬೈಲ್‌ಗೆ ಎಲ್ಲಾ ಕರೆಗಳನ್ನು ಡೈವರ್ಟ್ ಮಾಡಲಾಗುತ್ತಿದೆ ಎಂದು ಮಾರ್ಗರೇಟ್ ಆಳ್ವಾ ಅವರು ಆರೋಪಿಸಿದ್ದರು. ನನ್ನ ಫೋನ್ ಟ್ಯಾಪ್ ಆಗಿದ್ದು, ನನಗೆ ಕರೆ ಮಾಡಲು ಅಥವಾ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ನನ್ನ ಫೋನ್ ಸರಿಮಾಡಿದರೆ, ಇಂದು ರಾತ್ರಿ ಬಿಜೆಪಿ, ಟಿಎಂಸಿ ಅಥವಾ ಬಿಜೆಡಿಯಿಂದ ಯಾವುದೇ ಸಂಸದರನ್ನು ಕರೆಯುವುದಿಲ್ಲ‌ ಎಂಬ ಭರವಸೆ ನೀಡುತ್ತೇನೆ ಎಂದು ಬಿಜೆಪಿಯನ್ನು ಗುರಿಯಾಗಿಸಿ ಟ್ವೀಟ್ ಮಾಡಿದ್ದರು.

ಆಳ್ವಾ ಅವರ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಇದೊಂದು ಬಾಲಿಶ ಹೇಳಿಕೆ ಅಂತಾ ಲೇವಡಿ ಮಾಡಿದ್ದಾರೆ.. ಉಪರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ.. ಅದು ಎಲ್ಲರಿಗೂ ಈಗಾಗಲೇ ಗೊತ್ತಿರುವಂತದ್ದು.. ಹೀಗಿರುವಾಗ ಯಾರಾದರೂ ಆಳ್ವಾ ಅವರ ಫೋನ್ ಅನ್ನು ಏಕೆ ಟ್ಯಾಪ್ ಮಾಡ್ತಾರೆ ಎಂದು ಪ್ರಶ್ನಿಸಿದ್ದಾರೆ..

ಇಂದಿರಾ ಗಾಂಧಿ ನಂಬಿಕಸ್ಥೆ ಮಾರ್ಗರೇಟ್ ಆಳ್ವ ರಾಜಕೀಯ ಜೀವನದ ಹಾದಿಇಂದಿರಾ ಗಾಂಧಿ ನಂಬಿಕಸ್ಥೆ ಮಾರ್ಗರೇಟ್ ಆಳ್ವ ರಾಜಕೀಯ ಜೀವನದ ಹಾದಿ

''ಮಾರ್ಗರೇಟ್ ಆಳ್ವಾ ಅವರು ಹಿರಿಯ ನಾಯಕಿ.. ಈ ರೀತಿಯ ಹೇಳಿಕೆಗಳು ಚೈಲ್ಡಿಶ್ ಮನೋಭಾವವನ್ನು ತೋರಿಸುತ್ತವೆ.. ಇಂಥ ಹೇಳಿಕೆಗಳು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವಂತದ್ದಲ್ಲ. ಆರೋಪಗಳನ್ನು ಮಾಡುವಾಗ ಕನಿಷ್ಠ ಆಲೋಚನೆ ಮಾಡಿ ಆರೋಪಿಸಲಿ. ಹುರುಳಿಲ್ಲದ, ಆಧಾರವಿಲ್ಲದ ಆರೋಪಗಳಿಗೆ ಅರ್ಥವಿಲ್ಲ'' ಎಂದು ಪ್ರಲ್ಹಾದ್ ಜೋಶಿ ಆಳ್ವಾ ಅವರಿಗೆ ತಿರುಗೇಟು ನೀಡಿದ್ದಾರೆ.

ಆಗಸ್ಟ್ 6 ರಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಆಡಳಿತಾರೂಢ ಬಿಜೆಪಿಯ ಅಭ್ಯರ್ಥಿಯಾಗಿ ಬಂಗಾಳದ ರಾಜ್ಯಪಾಲ ಜಗದೀಪ್ ಧನಕರ್, ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ಹಿರಿಯ ನಾಯಕಿ ಮಾರ್ಗರೇಟ್ ಆಳ್ವಾ ಸ್ಪರ್ಧಿಸಿದ್ದಾರೆ.

ರಾಷ್ಟ್ರಪತಿ ಪದಗ್ರಹಣ ಸಮಾರಂಭದಲ್ಲಿ ಖರ್ಗೆಗೆ ಅಪಮಾನವಾಗಿಲ್ಲ: ಜೋಶಿರಾಷ್ಟ್ರಪತಿ ಪದಗ್ರಹಣ ಸಮಾರಂಭದಲ್ಲಿ ಖರ್ಗೆಗೆ ಅಪಮಾನವಾಗಿಲ್ಲ: ಜೋಶಿ

ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇತ್ತೀಚೆಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಜಗದೀಪ್ ಧನಕರ್ ಅವರ ನಡುವೆ ಡಾರ್ಜಿಲಿಂಗ್‌ನಲ್ಲಿ ಸಭೆ ನಡೆದಿತ್ತು. ತಮ್ಮನ್ನು ಬೆಂಬಲಿಸುವಂತೆ ಜಗದೀಪ್ ಧನಕರ್ ಮಮತಾ ಬ್ಯಾನರ್ಜಿ ಅವರನ್ನು ಕೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದಾದ ಬಳಿಕ ತೃಣಮೂಲ ಕಾಂಗ್ರೆಸ್ ಪಕ್ಷವು ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನದಿಂದ ದೂರವಿರುವುದಾಗಿ ಹೇಳಿದೆ.

ಇದಕ್ಕೆ ಪ್ರತಿಕ್ರಿಯಿಸಿದ್ದ ಆಳ್ವಾ, "ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನದಿಂದ ದೂರವಿರುವ ಟಿಎಂಸಿ ನಿರ್ಧಾರ ನಿರಾಶಾದಾಯಕವಾಗಿದೆ. ಇದು 'ಅಹಂಕಾರ', ಅಹಂ ಅಥವಾ ಕೋಪದ ಸಮಯವಲ್ಲ. ಇದು ಧೈರ್ಯ, ನಾಯಕತ್ವ ಮತ್ತು ಏಕತೆಯ ಸಮಯ' ಎಂದಿದ್ದರು.

ಭಾರತ ಗಣರಾಜ್ಯದ ಉಪರಾಷ್ಟ್ರಪತಿ ಹುದ್ದೆಗೆ ಜಂಟಿ ವಿರೋಧ ಪಕ್ಷದ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಂಡಿರುವುದು ಒಂದು ವಿಶೇಷ ಮತ್ತು ಗೌರವವಾಗಿದೆ. ನಾನು ಈ ನಾಮನಿರ್ದೇಶನವನ್ನು ಅತ್ಯಂತ ನಮ್ರತೆಯಿಂದ ಸ್ವೀಕರಿಸುತ್ತೇನೆ. ವಿರೋಧ ಪಕ್ಷದ ನಾಯಕರಲ್ಲಿ ಅವರು ಇಟ್ಟಿರುವ ನಂಬಿಕೆಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಆಳ್ವ ನಾಮಪತ್ರ ಸಲ್ಲಿಸಿದ ನಂತರ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

Recommended Video

ಮಗಳನ್ನು ಮುಂದಿಟ್ಟುಕೊಂಡು ಹಣ ಸಂಪಾದಿಸುತ್ತಿದ್ದೀರಾ ಎಂದಿದ್ದಕ್ಕೆ ವಂಶಿಕಾ ಬಗ್ಗೆ ಮಾ.ಆನಂದ್ ಹೇಳಿದ್ದೇನು?| OneIndia

English summary
BJP leader, Union Minister Prahalad Joshi reacted to UPA's Vice president candidate Margaret Alva's Snooping or phone block Allegations, terms it as childish.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X