ಬಿಜೆಪಿಗೆ ಯಾವೆಲ್ಲಾ ಪಕ್ಷಗಳು ಸಾಥ್ ನೀಡಿವೆ ನೋಡಿ

ನವದೆಹಲಿ, ಏ. 9: ಬಿಜೆಪಿ ಮತ್ತು ಆ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು 16ನೇ ಲೋಕಸಭೆಯತ್ತ ದಾಪುಗಾಲು ಹಾಕುತ್ತಿದ್ದಾರೆ. ಬಿಜೆಪಿ ನೇತೃತ್ವದಲ್ಲಿ ಎನ್ ಡಿಎ ಮೈತ್ರಿಕೂಟ ಅಬಾಧಿತವಾಗಿದೆಯಾದರೂ ಭಾರಿ ಬಹುಮತ/ ಸರಳ ಬಹುಮತ ಎಂಬುದು ಹೇಗೋ ಏನೋ ಎಂಬ ಚಿಂತೆ ಸಹಜವಾಗಿಯೇ ಕಾಡಿದ್ದು, ಟು ಬಿ ಆನ್ ಸೇಫರ್ ಸೈಡ್ ಎಂದು ಪಕ್ಷವು ಒಟ್ಟು 28 ಪಕ್ಷಗಳ ಜತೆ ಕೈಜೋಡಿಸಿದೆ.

ಅಂದಹಾಗೆ, ಈ ಬಾರಿ ಬಿಜೆಪಿ ತನ್ನದೇ 415 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಆಂಧ್ರ ಪ್ರದೇಶದಲ್ಲಿ ಇನ್ನೂ 13 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಿದೆ. ಇದರ ಹೊರತಾಗಿ ಉಳಿದ ಕ್ಷೇತ್ರಗಳಲ್ಲಿ ಮೈತ್ರಿಕೂಟದ 28 ಪಕ್ಷಗಳ ಅ ಅಭ್ಯರ್ಥಿಗಳನ್ನೂ ಕಣಕ್ಕಿಳಿಸುತ್ತಿದ್ದು, ಒಟ್ಟಾರೆಯಾಗಿ ಎಲ್ಲ 543 ಕ್ಷೇತ್ರಗಳಲ್ಲೂ ತನ್ನ ಪ್ರಾಬಲ್ಯ ಮೆರೆದಿದೆ.

BJP in grand alliance with 28 Parties to reach the 272 magic mark
'ತನ್ನ ಪ್ರಗತಿಪರ ಮನೋಭಾವದೊಂದಿಗೆ ಬಿಜೆಪಿಯು ಪ್ರಾದೇಶಿಕ ಅಗತ್ಯಗಳಿಗೆ ಪ್ರಾಮುಖ್ಯತೆ ನೀಡಿದೆ. ಹಾಗಾಗಿ ಅನೇಕ ಚಿಕ್ಕ ಚಿಕ್ಕ ಪಕ್ಷಗಳು ಮತ್ತು ದೊಡ್ಡ ಪಕ್ಷಗಳೂ ಸಹ ಬಿಜೆಪಿ ಜತೆ ಸಾಗಲು ಮುಂದಾಗಿವೆ' ಎಂದು ಬಿಜೆಪಿ ಮುಖಂಡ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.

ಸರಳ ಬಹುಮತಕ್ಕೆ ಅಗತ್ಯವಾದ ಮ್ಯಾಜಿಕ್ ನಂಬರ್ 272ರ ಗಡಿ ದಾಟದಿದ್ದರೆ ಮುಂದೇನು ಎಂಬುದು ಫಲಿತಾಂಶದ ನಂತರ ಪಕ್ಷವನ್ನು ಮುಜುಗರಕ್ಕೀಡು ಮಾಡುವುದರ ಜತೆಗೆ ಸತ್ವಪರೀಕ್ಷೆಗೂ ಒಡ್ಡಲಿದೆ. ಆಗ AIADMK, TMC ಮತ್ತು BJD ಪಕ್ಷಗಳತ್ತ ಮುಖ ಮಾಡುವುದು ಅನಿವಾರ್ಯವಾಗಲಿದೆ.

ಬಿಜೆಪಿ ಬತ್ತಳಿಕೆಯಲ್ಲಿ ಈಗಾಗಲೇ ಶಿರೋಮಣಿ ಅಕಾಲಿದಳ ಮತ್ತು ಶಿವಸೇನೆ ಭದ್ರವಾಗಿವೆ. ಜತೆಗೆ ನೂತನ ಮೈತ್ರಿಯಾಗಿ ಟಿಡಿಪಿ, ಆರ್ ಪಿಐ, ಎಲ್ ಜೆಪಿ, ರಾಷ್ಟ್ರೀಯ ಲೋಕ ಸಮತಾ ಪಾರ್ಟಿ, ಎಂಡಿಎಂಕೆ, ಪಿಎಂಕೆ, ಡಿಎಂಡಿಕೆ, ರಾಷ್ಟ್ರೀಯ ಸಮಾಜ ಪಕ್ಷ (ಮಹಾರಾಷ್ಟ್ರ), ಸ್ವಾಭಿಮಾನ್ ಪಕ್ಷ (ಮಹಾರಾಷ್ಟ್ರ), ಕೆಎಂಡಿಕೆ, ಐಜೆಕೆ, ಆಲ್ ಇಂಡಿಯಾ ಎನ್ ಆರ್ ಕಾಂಗ್ರೆಸ್, ಜನ ಸೇನಾ ಪಾರ್ಟಿ, ಹರಿಯಾಣ ಜನಹಿತ ಕಾಂಗ್ರೆಸ್, ಅಪ್ನಾ ದಳ, ನ್ಯಾಷನಲ್ ಪೀಪಲ್ಸ್ ಪಾರ್ಟಿ (ಮೇಘಾಲಯ), ನಾಗಾ ಪೀಪಲ್ಸ್ ಫ್ರಂಟ್, ಯುನೈಟೆಡ್ ಡೆಮಾಕ್ರೆಟಿಕ್ ಫ್ರಾಂಟ್ (ಮಿಜೋರಾಂ), ಗೂರ್ಖಾ ಜನ ಮುಕ್ತಿ ಮೋರ್ಚಾ, ಮಹಾರಾಷ್ಟ್ರ ಗೋಮಂತಕ್ ಪಾರ್ಟಿ, ನ್ಯೂ ಜಸ್ಟೀಸ್ ಪಾರ್ಟಿ, ನಾರ್ತ್ ಈಸ್ಟ್ ರೀಜನಲ್ ಪೊಲಿಟಿಕಲ್ ಫ್ರಂಟ್ ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿ ಗಳ ಜತೆ ಬಿಜೆಪಿ ಕೈಜೋಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+