• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಡ್ವಾಣಿಯವರೇ, ನಿಮ್ಗೆ ವಯಸ್ಸಾಯ್ತು! ಆಕ್ರೋಶ ಹುಟ್ಟಿಸಿದ ಬಿಜೆಪಿ ನಡೆ

|
   Lok Sabha Elections 2019 : ಎಲ್ ಕೆ ಅಡ್ವಾಣಿಗೆ ಟಿಕೆಟ್ ಕೊಡದ ಬಿಜೆಪಿ | ಟ್ವಿಟ್ಟರ್ ಪ್ರತ್ಕ್ರಿಯೆಗಳು ಹೀಗಿವೆ

   ನವದೆಹಲಿ, ಮಾರ್ಚ್ 22: ಲೋಕಸಭಾ ಚುನಾವಣೆಗೆ ಬಿಜೆಪಿಯ ಬಹುನಿರೀಕ್ಷಿತ ಅಭ್ಯರ್ಥಿಗಳ ಪಟ್ಟಿ ಗುರುವಾರ ಹೊರಬಿದ್ದಿದೆ. ಈ ಪಟ್ಟಿಯಲ್ಲಿ ಬಿಜೆಪಿಯ ಹಿರಿಯ ಮುಖಂಡ, ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಅವರ ಹೆಸರಿಲ್ಲದಿರುವುದು ಅವರ ಅಭಿಮಾನಿಗಳಲ್ಲಿ ಆಕ್ರೋಶ ಹುಟ್ಟಿಸಿದೆ.

   ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

   ವಿಪಕ್ಷಗಳಿಗೂ ಟೀಕೆಗೆ ಇಷ್ಟೇ ಸಾಕು. ಗುಜರಾತಿನ ಗಾಂಧಿನಗರ ಕ್ಷೇತ್ರದಿಂದ ಆರು ಬಾರಿ ಸ್ಪರ್ಧಿಸಿ ಗೆದ್ದಿದ್ದ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಬಿಜೆಪಿ ಟಿಕೆಟ್ ನೀಡದೆ ಇರುವುದಕ್ಕೆ 'ವಯಸ್ಸು' ಮಾತ್ರ ಕಾರಣವೇ? ಟಿಕೆಟ್ ಹಂಚಿಕೆಯ ವಿಷಯದಲ್ಲಿ ಬಿಜೆಪಿ ವಯಸ್ಸಿನ ಮಿತಿಯನ್ನು ಪರಿಗಣಿಸುವುದಿಲ್ಲ ಎಂದು ಇತ್ತೀಚೆಗಷ್ಟೇ ಬಿಜೆಪಿ ಮೂಲಗಳೇ ತಿಳಿಸಿದ್ದವು. ಆದರೆ ಅಡ್ವಾಣಿ ಅವರ ವಿಷಯದಲ್ಲಿ ಮಾತ್ರ ವಯೋಮಿತಿಯ ಪ್ರಶ್ನೆ ಬರುತ್ತದೆಯೇ?

   ಕರ್ನಾಟಕ ಲೋಕಸಭಾ ಕ್ಷೇತ್ರಗಳ 'ಎ ಟು ಜೆಡ್' ಮಾಹಿತಿ

   ಅಷ್ಟಕ್ಕೂ ಟಿಕೆಟ್ ಹಂಚಿಕೆಗೂ ಮುನ್ನ ಅಡ್ವಾಣಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿತ್ತೆ? ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಬೆಳೆಸಿದ, ನೈಜ ರಾಷ್ಟ್ರೀವಾದಿ ನಾಯಕರನ್ನು ರಾಜಕೀಯ ಬದುಕಿನ ಮುಸ್ಸಂಜೆಯ ಹೊತ್ತಲ್ಲಿ ಹೀಗೆಲ್ಲ ನಡೆಸಿಕೊಳ್ಳೋದು ಸರೀನಾ? ಎಂದು ಟ್ವೀಟ್ಟರ್ ನಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

   ಬಿಜೆಪಿ ಅಭ್ಯರ್ಥಿ ಪಟ್ಟಿ ಪ್ರಕಟ: ಬಿಜೆಪಿ ಭೀಷ್ಮ ಅಡ್ವಾಣಿಗೆ ಟಿಕೆಟ್ ಇಲ್ಲ

   ಅಡ್ವಾಣಿ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರೋ, ಇಲ್ಲವೋ, ಸ್ಪರ್ಧಿಸುವ ಇಚ್ಛೆ ಅವರಿಗಿದೆಯೋ, ಇಲ್ಲವೋ ಎಂಬ ಬಗ್ಗೆ ಪಕ್ಷದ ವರಿಷ್ಠರು ಅವರೊಂದಿಗೆ ಮಾತುಕತೆ ನಡೆಸಿರುವುದೂ ಅನುಮಾನ. ಹಾಗೆಯೇ ಅಡ್ವಾಣಿ ಅವರೂ ಈ ಬಗ್ಗೆ ಪಕ್ಷದ ಮುಖಂಡರೊಂದಿಗೆ ಮಾತುಕತೆ ನಡೆಸಿಲ್ಲ. ಒಟ್ಟಿನಲ್ಲಿ ಅಡ್ವಾಣಿ ಅವರು ಅಭ್ಯರ್ಥಿಗಳ ಪಟ್ಟಿಯಿಂದ ಹೊರಗಿರುವುದು ನಾನಾ ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿರುವುದಂತೂ ಸತ್ಯ.

   ಅಡ್ವಾಣಿ ಇಲ್ಲದಿದ್ದರೆ ಬಿಜೆಪಿ ಇರುತ್ತಿರಲಿಲ್ಲ!

   ಅಮಿತ್ ಶಾ ಅವರು ಗಾಂಧಿ ನಗರದಿಂದ ಚುನಾವಣೆಗೆ ಸ್ಪರ್ಧಿಸುವ ಮೂಲಕ ಎಲ್ ಕೆ ಅಡ್ವಾಣಿ ಅವರ ಅಮೂಲ್ಯ ರಾಜಕೀಯ ಯಾತ್ರೆಗೆ ಮಂಗಳ ಹಾಡಿದ್ದಾರೆ. ಬಿಜೆಪಿಯನ್ನು ಒಂದು ಬಿಂದುವಾಗಿದ್ದಾಗಿನಿಂದ ಬೆಳೆಸಿದವರು ಅಡ್ವಾಣಿ. 1990 ರಲ್ಲಿ ಅವರು ರಥಯಾತ್ರೆ ಮಾಡದೆ ಇದ್ದಿದ್ದರೆ ಬಿಜೆಪಿ ರಾಷ್ಟ್ರೀಯ ಪಕ್ಷವಾಗಿ ಎಂದಿಗೂ ಈ ರೀತಿ ಬೆಳೆಯಲು ಸಾಧ್ಯವೇ ಇರಲಿಲ್ಲ -ಆದಿತ್ಯ ಕುಲಕರ್ಣಿ

   ಲೋಕಸಭೆ ಚುನಾವಣೆ 2019: ಬಿಜೆಪಿಯ ಮೊದಲ ಪಟ್ಟಿಯಲ್ಲಿ ಅಚ್ಚರಿ

   ನಿಜಕ್ಕೂ ಬೇಸರದ ಸಂಗತಿ

   ಬಿಜೆಪಿಯ ಚುನಾವಣಾ ಯಾತ್ರೆ ಈ ರೀತಿ ಆರಂಭವಾಗುತ್ತದೆ ಎದುಕೊಂಡಿರಲಿಲ್ಲ. ನಿಜಕ್ಕೂ ಬೇಸರವಾಗುತ್ತದೆ. ಗಾಂಧಿನಗರದಲ್ಲಿ ಅಡ್ವಾಣಿ ಸ್ಪರ್ಧಿಸೋಲ್ಲ, ಬದಲಾಗಿ ಅಮಿತ್ ಶಾ ಸ್ಪರ್ಧಿಸುತ್ತಾರೆ ಎಂಬುದು ಬಿಜೆಪಿ ತನ್ನ ಮಾರ್ಗದರ್ಶಕರಿಗೆ ಹೇಗೆ ಆಚೆ ಹೋಗುವ ಬಾಗಿಲು ತೋರಿಸುತ್ತಿದೆ ಎಂಬುದಕ್ಕೆ ಸಾಕ್ಷಿ -ಚಿರಂಜೀವ್ ರಾವ್

   ಬಿಜೆಪಿ 250 ಅಭ್ಯರ್ಥಿಗಳ ಹೆಸರು ಅಂತಿಮ: ಅಡ್ವಾಣಿ, ಜೋಶಿ ಸ್ಪರ್ಧೆ ಇಲ್ಲ?

   ಅವರ ವಯಸ್ಸು 91, ಗಲೂ ಸ್ಪರ್ಧೆ ಬೇಕಾ?

   ಎಲ್ ಅಡ್ವಾಣಿ ಅವರ ಕ್ಷೇತ್ರದ ಬಗ್ಗೆಯೇ ಮಾಧ್ಯಮಗಳೇಕೆ ಕೂಗಾಟ ನಡೆಸುತ್ತಿವೆ? ಅವರಿಗೆ ಈಗ ವಯಸ್ಸು 91. ಈ ವಯಸ್ಸಿನಲ್ಲಿ ಅವರು ಚುನಾವಣೆ ಎದುರಿಸಬೇಕೆ ಎಂದು ನಿಖಿಲ್ ಎಂಬುವವರು ಟ್ವೀಟ್ ಮಾಡಿದ್ದಾರೆ.

   ಕರ್ನಾಟಕದ ಯಾವ ಸಂಸದ ಎಷ್ಟು ವಿದ್ಯಾಭ್ಯಾಸ ಮಾಡಿದ್ದಾರೆ?

   ತಂದೆಗೂ ಗೌರವವಿಲ್ಲ

   ತಂದೆಗೂ ಗೌರವವಿಲ್ಲ

   ಎಲ್ ಕೆ ಅಡ್ವಾಣಿ ಅವರು ಬಿಜೆಪಿಗೆ ರಾಜೀನಾಮೆ ನೀಡಬೇಕು. ಈ ಪಕ್ಷಕ್ಕೆ ತಮ್ಮ ಪಕ್ಷಕ್ಕೆ ತಂದೆಯ ಸ್ಥಾನದಲ್ಲಿರುವವರನ್ನು ಗೌರವಿಸುವ ಕನಿಷ್ಠ ಸೌಜನ್ಯವೂ ಇಲ್ಲ ಎಂದು ಎಸ್ ಎಸ್ ಪೋಖ್ರಿಯಾಲ್ ಟ್ವೀಟ್ ಮಾಡಿದ್ದಾರೆ.

   ಕರ್ನಾಟಕ ಸಂಸದರಿಗೆ ಅನುದಾನ ಸಿಕ್ಕಿದ್ದೆಷ್ಟು, ಅವರು ಕ್ಷೇತ್ರದಲ್ಲಿ ಖರ್ಚು ಮಾಡಿದ್ದೆಷ್ಟು, ಉಳಿಸಿಕೊಂಡಿದ್ದೆಷ್ಟು?

   English summary
   BJP denied ticket to senior leader of the party and former deputy PM, LK Advani in its list, ehich releases on Thursday. Here are people's reaction,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more