ಪ್ರದರ್ಶನವಿಲ್ಲದೆ ಪ್ರಮೋಶನ್ ಪಡೆದ ರಾಹುಲ್: ಬಿಜೆಪಿ ಲೇವಡಿ
ನವದೆಹಲಿ, ಡಿಸೆಂಬರ್ 04: ರಾಹುಲ್ ಗಾಂಧಿಯವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಇಂದು(ಡಿ.04) ನಾಮಪತ್ರ ಸಲ್ಲಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಬಿಜೆಪಿ, 'ಉತ್ತಮ ಪ್ರದರ್ಶನ ತೋರದಿದ್ದರೂ ಪ್ರಮೋಶನ್ ಗಳಿಸಿದ ರಾಹುಲ್ ಗಾಂಧಿಯವರಿಗೆ ಅಭಿನಂದನೆಗಳು' ಎಂದು ವ್ಯಂಗ್ಯವಾಗಿ ಹೇಳಿದೆ.
ಪತ್ರಕರ್ತರೊಂದಿಗೆ ನವದೆಹಲಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, 'ಯಾವ ಉತ್ತಮ ಪ್ರದರ್ಶನವನ್ನೂ ತೋರದೆ ಪ್ರಮೋಶನ್ ಪಡೆದ ರಾಹುಲ್ ಗಾಂಧಿಯವರಿಗೆ ನಮ್ಮ ಅಭಿನಂದನೆಗಳು. ಬಹುಶಃ ಇವೆಲ್ಲ ಸಾಧ್ಯವಿರುವುದು ಕಾಂಗ್ರೆಸ್ ನಲ್ಲಿ ಮಾತ್ರ. ಎಲ್ಲಾ ಪರೀಕ್ಷೆಗಳಲ್ಲೂ ಫೇಲಾದರೂ ರಾಹುಲ್ ಗಾಂಧಿಯವರಿಗೆ ಈ ಸ್ಥಾನ ಸಿಕ್ಕಿದ್ದು ಹೇಗೆ ಎಂಬುದೇ ಸೋಜಿಗ' ಎಂದವರು ಟ್ವೀಟ್ ಮಾಡಿದ್ದಾರೆ.

ಇಂದು(ಡಿ.4) ಬೆಳಿಗ್ಗೆ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಸೇರಿದಂತೆ ಕಾಂಗ್ರೆಸ್ ನ ಗಣ್ಯರಾದ ಶೀಲಾ ದೀಕ್ಷಿತ್, ಮಲ್ಲಿಕಾರ್ಜುನ ಖರ್ಗೆ ಮುಂತಾದವರ ಉಪಸ್ಥಿತಿಯಲ್ಲಿ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು.












Click it and Unblock the Notifications