ಸೋಲಿನ ಆಘಾತ: ಸರಣಿ ಸಭೆಯ ಮೊರೆಹೋದ ಬಿಜೆಪಿ
ನವದೆಹಲಿ, ಡಿಸೆಂಬರ್ 14: ತಾನು ಅಧಿಕಾರದಲ್ಲಿದ್ದ ಮೂರು ರಾಜ್ಯಗಳಲ್ಲಿ ಅಚ್ಚರಿಯ ಸೋಲುಕಂಡ ಬಿಜೆಪಿ ಇದೀಗ 2019 ರ ಲೋಕಸಭಾ ಚುನಾವಣೆಯಲ್ಲಿ ಕಾರ್ಯತಂತ್ರ ಬದಲಿಸುವ ಅಗತ್ಯವನ್ನು ಅರಿತುಕೊಂಡಂತಿದೆ.
ಅದಕ್ಕೆಂದೇ ಜನವರಿ 11 ಮತ್ತು 12 ರಂದು ಬಿಜೆಪಿ ಕಾರ್ಯಕಾರಿಣಿ ಸಭೆ ಸೇರಿದಂತೆ ಒಂದಿಲ್ಲೊಂದು ಸಭೆಯನ್ನು ನಡೆಸುತ್ತಲೇ ಇರಲು ಬಿಜೆಪಿ ನಿರ್ಧರಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನಿ ಕಾರ್ಯದರ್ಶಿ ಭುಪೇಂದರ್ ಯಾದವ್ ಹೇಳಿದ್ದಾರೆ.
2019 ರ ಲೋಕಸಭಾ ಚುನಾವಣೆಯನ್ನು ಗೆಲ್ಲಲು ಬಿಜೆಪಿ ಸಮಾಜದ ವಿವಿಧ ವಿಭಾಗಗಳ ಮೇಲೆ ಗಮನ ಹರಿಸಲಿದೆ. ಕಾರ್ಯತಂತ್ರವನ್ನು ಬದಲಿಸಲಿದೆ ಎಂದು ಯಾದವ್ ಹೇಳಿದ್ದಾರೆ.ಡಿಸೆಂಬರ್ 15-16 ರಂದು ದೆಹಲಿಯಲ್ಲಿ ಬಿಜೆಪಿ ಯುವ ಮೋರ್ಚಾ ಸಭೆ ನಡೆಯಲಿದೆ. ಅದರ ಹಿಂದೆಯೇ ಡಿಸೆಂಬರ್ 21-22 ರಂದು ಮಹಿಳಾ ಮೋರ್ಚಾ ಸಭೆ ಅಹ್ಮದಾಬಾದಿನಲ್ಲಿ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿಯವರೇ ಸಭೆಯಲ್ಲಿ ಮಾತನಾಡಲಿದ್ದಾರೆ.

ನಂತರ ಜನವರಿ 19-20 ರಂದು ಪರಿಶಿಷ್ಟ ಜಾತಿ ಮೋರ್ಚಾ ಸಭೆ ನಾಗ್ಪುರದಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವ ನಿತಿನ್ ಗಡ್ಕರಿ ಭಾಗವಹಿಸಲಿದ್ದಾರೆ.












Click it and Unblock the Notifications