• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಟ್ ಕಾಯಿನ್ ಹಗರಣ: ನ.15ರಂದು ಹಣಕಾಸು ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿ ಸಭೆ

|
Google Oneindia Kannada News

ನವದೆಹಲಿ, ನವೆಂಬರ್ 15: ಕರ್ನಾಟಕದಲ್ಲಿ ಬಿಟ್ ಕಾಯಿನ್ ಹಗರಣ ಭಾರೀ ಸದ್ದು ಮಾಡುತ್ತಿದ್ದು, ಇದ್ದು ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇದೇ ವಿಷಯವನ್ನಿಟ್ಟುಕೊಂಡು ಪ್ರತಿಪಕ್ಷ ಕಾಂಗ್ರೆಸ್ ಮತ್ತು ಆಡಳಿತಾರೂಢ ಬಿಜೆಪಿ ಸರ್ಕಾರದ ಮೇಲೆ ಮುಗಿಬೀಳುತ್ತಿದೆ.

ಬಸವರಾಜ ಬೊಮ್ಮಾಯಿಯವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ವಿರೋಧ ಪಕ್ಷ ಮತ್ತು ಆಡಳಿತ ಪಕ್ಷದ ಕೆಲ ನಾಯಕರು ಪ್ರಯತ್ನಿಸುತ್ತಿದ್ದಾರೆ ಎಂದು ಗುಸುಗುಸು ಕೇಳಿಬಂದಿದೆ.

ಬಿಟ್ ಕಾಯಿನ್ ಹಗರಣ ಹೊರ ಬಂದ ಬಳಿಕ ಬೊಮ್ಮಾಯಿ 'ಮಂದಹಾಸ' ಮರೆ ಆಯಿತೇ?ಬಿಟ್ ಕಾಯಿನ್ ಹಗರಣ ಹೊರ ಬಂದ ಬಳಿಕ ಬೊಮ್ಮಾಯಿ 'ಮಂದಹಾಸ' ಮರೆ ಆಯಿತೇ?

ಇದಲ್ಲದೆ ದೇಶದಾದ್ಯಂತ ಬಿಟ್ ಕಾಯಿನ್ ಅವ್ಯವಹಾರ ನಡೆಯುತ್ತಿದೆ. ಬಿಟ್ ಕಾಯಿನ್ ವ್ಯಾಲೆಟ್‌ಗಳನ್ನು ಹ್ಯಾಕ್ ಮಾಡಿ ಕ್ರಿಪ್ಟೋ ಕರೆನ್ಸಿ ಒಬ್ಬರಿಂದ ಇನ್ನೊಬ್ಬರಿಗೆ ವರ್ಗಾಯಿಸಲಾಗುತ್ತಿದೆ. ಕೆಲವು ಅಂತಾರಾಷ್ಟ್ರೀಯ ಸಂಘ- ಸಂಸ್ಥೆಗಳು ಮತ್ತು ವಿದೇಶಿ ಸರ್ಕಾರಗಳ ಬೊಕ್ಕಸಕ್ಕೂ ಕನ್ನ ಹಾಕಲಾಗಿದೆ ಎಂಬೆಲ್ಲಾ ದೂರುಗಳು ಕೇಳಿಬರುತ್ತಿವೆ. ಈ‌ ಹಿನ್ನೆಲೆಯಲ್ಲಿ ಸೋಮವಾರ ಕೇಂದ್ರ ಹಣಕಾಸು ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿಯ ಮಹತ್ವದ ಸಭೆ ನಡೆಯಲಿದೆ.

ಸೋಮವಾರ ಮಧ್ಯಾಹ್ನ 3 ಗಂಟೆಗೆ ನಡೆಯುವ ಸಭೆಯಲ್ಲಿ ಇತ್ತೀಚೆಗೆ ಚರ್ಚೆ ಆಗುತ್ತಿರುವ ಬಿಟ್ ಕಾಯಿನ್ ಹಗರಣದ ಬಗ್ಗೆ, ಬಿಟ್ ಕಾಯಿನ್ ಚಲಾವಣೆ ಬಗ್ಗೆ ಹಣಕಾಸು ಕ್ಷೇತ್ರದ ತಜ್ಞರು ಮತ್ತು ಬಿಟ್ ಕಾಯನ್ ಮಾರುಕಟ್ಟೆ ಸಂಸ್ಥೆಗಳಿಂದ ಮಾಹಿತಿ ಸಂಗ್ರಹ ಮಾಡಲಾಗುತ್ತದೆ ಎನ್ನಲಾಗಿದೆ.

ಆ ಸಂದರ್ಭದಲ್ಲಿ ಕ್ರಿಪ್ಟೋ ಕರೆನ್ಸಿಯ ಆನ್‌ಲೈನ್ ವಹಿವಾಟಿಗೆ ಅವಕಾಶವನ್ನು ಮಾಡಿಕೊಡಲಾಗಿತ್ತು. ಇದಾದ ಮೇಲೆ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ರೂಪಿಸಿ ಕ್ರಿಪ್ಟೋಕರೆನ್ಸಿ ಮೂಲಕ ಗಳಿಸಿದ ಹಣ ಅಥವಾ ಆಗಿರುವ ನಷ್ಟದ ಬಗ್ಗೆ ಮಾಹಿತಿ ನೀಡುವುದು ಕಡ್ಡಾಯ ಎಂದು ಹೇಳಿತ್ತು.

ಕಂಪನಿಗಳು ತಮ್ಮ ಬ್ಯಾಲೆನ್ಸ್‌ಶೀಟ್‌ನಲ್ಲಿ ಕ್ರಿಪ್ಟೋ ವ್ಯವಹಾರದ ಬಗ್ಗೆ ನಮೂದಿಸಬೇಕೆಂದು ಹೇಳಿತ್ತು ಹೀಗೆ ಕ್ರಿಪ್ಟೋ ಕರೆನ್ಸಿ ವ್ಯವಹಾರ ಅಸ್ಪಷ್ಟತೆಯಿಂದ ಕೂಡಿದ್ದು ಅದರ ಬಗ್ಗೆ ತಜ್ಞರಿಂದ ಇಂದಿನ ಸ್ಥಾಯಿ ಸಮಿತಿ ಸಭೆ ಮಾಹಿತಿ‌ ಸಂಗ್ರಹಿಸಲಿದೆ ಎನ್ನಲಾಗುತ್ತಿದೆ.

Bitcoin Scam: Parliamentary Standing Committee on Finance Meeting with cryptocurrency industry players on November 15

"ಬಿಟ್‌ಕಾಯಿನ್ ಹಗರಣ ದೊಡ್ಡದಾಗಿದ್ದು, ಅದಕ್ಕಿಂತ ಮುಚ್ಚಿಡುತ್ತಿರುವುದು ಇನ್ನೂ ದೊಡ್ಡ ಅಪರಾಧವಾಗುತ್ತಿದೆ. ಏಕೆಂದರೆ ಅದು ಯಾರದೋ ಹುಸಿ ವರ್ಚಸ್ಸನ್ನು ಮುಚ್ಚಿಡುವಂಥದ್ದು,'' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಒಗಟಿನ ರೂಪದಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಅವರು ಯಾರ ಹೆಸರನ್ನೂ ಹೇಳದೆ ಪರೋಕ್ಷವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಆರೋಪ ಮಾಡಿದ್ದಾರೆ. ಬಿಟ್ ಕಾಯಿನ್ ಹಗರಣ ಬಯಲಾದರೆ ಅವರ ವರ್ಚಸ್ಸಿಗೆ ಧಕ್ಕೆ ಆಗಲಿದೆ, ಅದೇ ಕಾರಣಕ್ಕೆ ಮುಚ್ಚಿಡುತ್ತಿದ್ದಾರೆ," ಎಂದು ಹೇಳಿದ್ದಾರೆ.

ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಮಾತನಾಡಿ, ಬಿಟ್ ಕಾಯಿನ್ ಹಗರಣದ ಬಗ್ಗೆ ಸುಪ್ರೀಂ ಕೋರ್ಟ್ ಹಾಲಿ ನ್ಯಾಯಮೂರ್ತಿಗಳ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡ ಮೂಲಕ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

ಒಂದು ಬಿಟ್ ಕಾಯಿನ್ 51 ಲಕ್ಷ ರೂಪಾಯಿ
ಅಲ್ಲದೆ ಬಿಟ್ ಕಾಯಿನ್ ಹಗರಣ ಅತ್ಯಂತ ದೊಡ್ಡ ಹಗರಣ. ಈ‌ ಹಗರಣದ ನಾಯಕ ಮತ್ತು ಖಳನಾಯಕ ಇಬ್ಬರೂ ಬಿಜೆಪಿಯವರೇ. ಭಾರತದ ರೂಪಾಯಿ ಪ್ರಕಾರ ಒಂದು ಬಿಟ್ ಕಾಯಿನ್ 51 ಲಕ್ಷ ರೂಪಾಯಿ. ಯಾಕೆ ಈ ಹಗರಣದ ಬಗ್ಗೆ ಜಾರಿ‌ ನಿರ್ದೇಶನಾಲಯ, ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಇಂಟರ್‌ಪೋಲ್ ಸುಮ್ಮನಿವೆ? ಎಂದು ಪ್ರಶ್ನಿಸಿದ್ದಾರೆ.

ಸರ್ಕಾರ ಬಿಟ್ ಕಾಯಿನ್ ಹಗರಣದಲ್ಲಿ ಶಾಮೀಲು
ಕರ್ನಾಟಕ ಬಿಜೆಪಿ ಸರ್ಕಾರ ಬಿಟ್ ಕಾಯಿನ್ ಹಗರಣದಲ್ಲಿ ಶಾಮೀಲಾಗಿದೆ. ಇದು ಅತ್ಯಂತ ಷಡ್ಯಂತ್ರ ರೂಪಿಸಿ ಮಾಡಿರುವ ಹಗರಣ. ತನಿಖಾ ಸಂಸ್ಥೆಗಳ ದಿಕ್ಕು ತಪ್ಪಿಸಿ ಮಾಡಿರುವ ಹಗರಣ. ತನಿಖೆಯನ್ನು ದಿಕ್ಕು ತಪ್ಪಿಸುವ ಉದ್ದೇಶದಿಂದಲೇ ಜಾರಿ‌ ನಿರ್ದೇಶನಾಲಯ, ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಇಂಟರ್‌ಪೋಲ್‌ಗಳಿಗೆ ತಿಳಿಸಿಲ್ಲ.

ಬಿಟ್ ಕಾಯಿನ್ ಹಗರಣದ ವಿಚಾರಣೆಗೆಂದು 2019ರ ನವೆಂಬರ್ 14ರಂದು ಶ್ರೀಕಿಯನ್ನು ಬಂಧಿಸಲಾಗಿದೆ. ಆತ 120 ದಿನ ಕಸ್ಟಡಿಯಲ್ಲಿ ಇದ್ದ. ಅವನ ವಿರುದ್ಧ 5 ದೂರು ದಾಖಲಿಸಲಾಗಿದೆ. ಒಂದು ಕೇಸಿನಲ್ಲಿ ಕಸ್ಟಡಿ ಮುಗಿಯುತ್ತಿದ್ದಂತೆ ಇನ್ನೊಂದು ಕೇಸ್ ಮೇಲೆ ಬಂಧಿಸಲಾಗಿದೆ.

English summary
A major meeting called of the Central Finance Department's Parliamentary Standing Committee on Monday, following The bitcoin scandal is making a huge noise in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X