ಬಿಗ್ ಬಜಾರ್ ಕ್ಲೋಸ್: ವೋಚರ್ ಹೊಂದಿರುವ ಗ್ರಾಹಕರು ಕಂಗಾಲು
ಹೊಸದಿಲ್ಲಿ ಮೇ 9: ರಿಲಯನ್ಸ್ ಇಂಡಸ್ಟ್ರೀಸ್ ಹೈಪರ್‌ಮಾರ್ಕೆಟ್ ಸರಣಿಯ ಮೂಲ ಕಂಪನಿ ಫ್ಯೂಚರ್ ರಿಟೇಲ್ (ಎಫ್‌ಆರ್‌ಎಲ್)ನ ಒಂದು ಭಾಗವನ್ನು ಖರೀದಿಸಿದ ನಂತರ ಬಿಗ್ ಬಜಾರ್ ವೋಚರ್‌ಗಳನ್ನು ಹೊಂದಿರುವ ಗ್ರಾಹಕರು ಕಂಗಾಲಾಗಿದ್ದಾರೆ.
ಕಿಶೋರ್ ಬಿಯಾನಿ ಒಡೆತನದ ಬಹುತೇಕ ಬಿಗ್ ಬಜಾರ್ ಮಳಿಗೆಗಳು ಮುಚ್ಚಿದ್ದು, 30 ಮಳಿಗೆಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಆ ವೋಚರ್‌ಗಳನ್ನು ರಿಡೀಮ್ ಮಾಡಲು ಸಾಧ್ಯವಾಗದ ಕಾರಣ ವರ್ಷಗಳಿಂದ ಬಿಗ್ ಬಜಾರ್ ಗ್ರಾಹಕರಾಗಿರುವ ಜನರ ಸಂಕಟವನ್ನು ಇದು ಇನ್ನಷ್ಟು ಹೆಚ್ಚಿಸಿದೆ.

ಬಿಗ್ ಬಜಾರ್ ಬ್ರ್ಯಾಂಡೆಡ್ ಸ್ಟೋರ್‌ಗಳು ಹೆಚ್ಚಿನ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿರುವುದರಿಂದ, ಹಲವಾರು ಬಿಗ್ ಬಜಾರ್ ಗ್ರಾಹಕರು ತಮ್ಮ ವೋಚರ್‌ಗಳನ್ನು ರಿಡೀಮ್ ಮಾಡಿಕೊಳ್ಳಲು ದಾರಿಯಿಲ್ಲದೆ ಪರಿತಪಿಸುತ್ತಿದ್ದಾರೆ. ಫ್ಯೂಚರ್ ರಿಟೇಲ್‌ನ ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡಲಾಗಿದೆ ಮತ್ತು ಕಂಪನಿಯು ದಿವಾಳಿತನದ ಪ್ರಕ್ರಿಯೆಗಳನ್ನು ನಡೆಸುತ್ತಿರುವುದರಿಂದ ಗ್ರಾಹಕರ ದೂರುಗಳನ್ನು ಪರಿಹರಿಸಲು ಬಿಗ್ ಬಜಾರ್ ಕಾರ್ಯನಿರ್ವಾಹಕರಿಗೆ ಸಾಧ್ಯವಾಗುತ್ತಿಲ್ಲ.

ಮೂಲಗಳ ಪ್ರಕಾರ, ಕಂಪನಿಯು ತನ್ನ ಗ್ರಾಹಕರ ನಷ್ಟದಿಂದ ತೀವ್ರ ಒತ್ತಡದಲ್ಲಿದೆ ಎಂದು ಹೇಳಲಾಗುತ್ತದೆ. ಅದು ಪರಿಹಾರವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದೆ ಮತ್ತು ಶೀಘ್ರದಲ್ಲೇ ಈ ಬಗ್ಗೆ ಘೋಷಣೆ ಮಾಡಲಿದೆ ಎನ್ನಲಾಗುತ್ತಿದೆ.












Click it and Unblock the Notifications