ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭದ್ರತಾ ಸೆಸ್ ನಿಂದಾಗಿ ಸದ್ಯದಲ್ಲೇ ಏರಲಿದೆ ರೈಲ್ವೆ ಟಿಕೇಟ್ ದರ

ಇನ್ನು ಮೇಲೆ ಪ್ರತಿ ರೈಲು ಟಿಕೇಟ್ ಮೇಲೆ ಭದ್ರತಾ ಸೆಸ್ ಅನ್ನು ವಿಧಿಸಲಿರುವ ಕೇಂದ್ರ ರೈಲ್ವೆ ಇಲಾಖೆ ಇದರಿಂದ ಸಂಗ್ರಹವಾಗುವ ಹಣವನ್ನು ರೈಲ್ವೆ ಭದ್ರತಾ ವೆಚ್ಚಕ್ಕಾಗಿ ಉಪಯೋಗಿಸಲಿದೆ.

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ನವದೆಹಲಿ, ಮೇ 19: ಇನ್ನು ಕೆಲವೇ ದಿನಗಳಲ್ಲಿ ರೈಲ್ವೆ ಟಿಕೇಟ್ ದರ ಹೆಚ್ಚಾಗಲಿದೆ. ಪ್ರತಿ ಟಿಕೇಟ್ ಮೇಲೆ ಭದ್ರತಾ ಸೆಸ್ ಅನ್ನು ವಿಧಿಸಲಿರುವ ಕೇಂದ್ರ ರೈಲ್ವೆ ಇಲಾಖೆ ಇದರಿಂದ ಸಂಗ್ರಹವಾಗುವ ಹಣವನ್ನು ರೈಲ್ವೆ ಭದ್ರತಾ ವೆಚ್ಚಕ್ಕಾಗಿ ಉಪಯೋಗಿಸಲಿದೆ.

ಈಗಾಗಲೇ ರೈಲು ಅಪಘಾತಗಳು ಹೆಚ್ಚುತ್ತಿರುವ ನಿಟ್ಟಿನಲ್ಲಿ, ರೈಲ್ವೆ ಭದ್ರತೆಯ ಕುರಿತು ಕೇಂದ್ರ ರೈಲ್ವೆ ಸಚಿವಾಲಯ ಗಂಭೀರವಾಗಿ ಯೋಚಿಸುತ್ತಿದೆ. ರೈಲ್ವೆ ಭದ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳುವುದಕ್ಕಾಗಿ ಇಲಾಖೆಗೆ ಪ್ರತಿ ವರ್ಷ ಸುಮಾರು 20,000 ಸಾವಿರ ಕೋಟಿ ರೂ.ಗಳ ಅಗತ್ಯವಿದೆ ಎಂದು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಹೇಳಿದ್ದಾರೆ.[ಸ್ವಚ್ಛತೆಯಲ್ಲಿ ಬೆಂಗ್ಳೂರು ನಗರ ರೈಲ್ವೆ ನಿಲ್ದಾಣಕ್ಕೆ 10ನೇ ಸ್ಥಾನ]

Becuase of saftey cess, Indian railway ticket price will be hiked soon

ಅದಕ್ಕಾಗಿ ರೈಲ್ವೆ ಇಲಾಖೆ ಸಾರ್ವಜನಿಕರ ಸಹಕಾರವನ್ನು ಬಯಸಿದ್ದು, ಭದ್ರತಾ ಸೆಸ್ ಮೂಲಕ ಇಲಾಖೆಗೆ ಹಣ ಸಂಗ್ರಹವಾಗುವಂತೆ ಮಾಡಲಾಗುತ್ತದೆ. ಆದ್ದರಿಂದ ಪ್ರತಿ ಟಿಕೇಟ್ ದರ ಹೆಚ್ಚಾಗಲಿದ್ದು, ಪ್ರಯಾಣಿಕರ ಮೇಲೆ ಈ ಹೊರೆ ಬೀಳಲಿದೆ.[ನಿಮ್ಮ ಮನೆಗೆ ಟ್ರೈನ್ ಟಿಕೆಟ್ ತಲುಪಿಸುತ್ತೇವೆ : ಐಆರ್ ಸಿಟಿಸಿ]

ರೈಲ್ವೆ ಟ್ರ್ಯಾಕ್ ಗಳ ಉನ್ನತೀಕರಣ, ಸಿಗ್ನಲ್ ಮತ್ತು ಕ್ರಾಸಿಂಗ್ ಗಳನ್ನು ಗೊಂದಲಮುಕ್ತವಾಗಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಇಲಾಖೆ ತೆಗೆದುಕೊಳ್ಳಲಿದೆ. ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ರೈಲ್ವೆ ಇಲಾಖೆ, ಡಿಜಿಟಲ್ ಪೇಮೆಂಟ್ ಮೂಲಕ ಟಿಕೇಟ್ ಬುಕಿಂಗ್ ಮಾಡುವವರಿಗೆ ಸೇವಾ ತೆರಿಗೆ ವಿನಾಯಿತಿ ನೀಡಿತ್ತು.

ಕ್ಯಾಶ್ ಲೆಸ್ ಪದ್ಧತಿಗೆ ಉತ್ತೇಜನ ನೀಡುವ ಸಲುವಾಗಿ ತೆಗೆದುಕೊಂಡಿದ್ದ ಈ ಕ್ರಮದಿಂದ ರೈಲ್ವೆ ಇಲಾಖೆಗೆ ತೀವ್ರ ನಷ್ಟ ಉಂಟಾಗಿದ್ದ ಹಿನ್ನೆಲೆಯಲ್ಲಿ ಇದೀಗ ಸೇವಾ ತೆರಿಗೆಯನ್ನೂ ಮತ್ತೆ ಹೇರುವ ಬಗ್ಗೆ ಚಿಂತನೆ ನಡೆಯುತ್ತಿದ್ದು, ಇದರೊಂದಿಗೆ ಭದ್ರತಾ ಸೆಸ್ ಸಹ ಸೇರಿ, ಟಿಕೇಟ್ ಬೆಲೆ ಏರಿಕೆಯ ಹೊರೆಯನ್ನು ಜನಸಾಮಾನ್ಯ ಎದುರಿಸಬೇಕಿದೆ.

{promotion-urls}

English summary
The Indian Railway is going to impose saftey cess soon. To prevent train accidents and to upgrade tracks, and signals the department needs support of the people. So railway department is imposing saftey cess soon, because of this reason railway ticket price will be hiked soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X