Get Updates
Get notified of breaking news, exclusive insights, and must-see stories!

50 ಸಾವಿರ ಕೋಟಿ ನೆರವು ನೀಡಿದ್ರಾ ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್‌ಜಿ?

ದೆಹಲಿ, ಮಾರ್ಚ್ 27: ಪ್ರಕೃತಿ ವಿಪತ್ತು, ದೇಶಕ್ಕೆ ಆರ್ಥಿಕ ಸಂಕಷ್ಟ ಎದುರಾದ ಸಮಯದಲ್ಲಿ ವಿಪ್ರೋ ಮಾಲೀಕ ಅಜೀ ಪ್ರೇಮ್‌ಜಿ ಬಹಳ ದೊಡ್ಡ ಮಟ್ಟದ ಸಹಾಯ ಮಾಡಿರುವ ಉದಾಹರಣೆಗಳಿವೆ. ಇದೀಗ, ಕೊರೊನಾದಿಂದ ದೇಶದಲ್ಲಿ ಆರ್ಥಿಕ ಕುಸಿತ ಕಾಣುತ್ತಿದೆ.

Recommended Video

      Kannadiga Deeksha talks about Corona from Dubai | Dubai Deeksha | Oneindia kannada

      ಸಾರ್ವಜನಿಕರ ದೈನಂದಿನ ಜೀವನದಲ್ಲಿ ಮೇಲೆ ಕೊರೊನಾ ವೈರಸ್‌ ಭಾರಿ ಪರಿಣಾಮ ಬೀರಿರುವ ಸಂದರ್ಭದಲ್ಲಿ, ಅಜೀಂ ಪ್ರೇಮ್‌ ಜೀ 50 ಸಾವಿರ ಕೋಟಿಯನ್ನು ಚಾರಿಟಿ ಮೂಲಕ ದೇಣಿಗೆ ನೀಡಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಇದು ದೇಶದ ಬೆಳವಣಿಗೆಗೆ ಹಾಗೂ ಸದ್ಯದ ಪರಿಸ್ಥಿತಿಯ ವಿರುದ್ಧ ಹೋರಾಡಲು ಸಹಾಯವಾಗಲಿದೆ ಎಂಬ ಅಭಿಪ್ರಾಯ ಮೂಡಿದೆ. ಆದರೆ, ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ. ಮೂಲಗಳ ಪ್ರಕಾರ ಇದು ಕೇವಲ ವದಂತಿ ಅಷ್ಟೇ ಎನ್ನಲಾಗಿದೆ.

      ಕೊರೊನಾ ವಿರುದ್ಧ ಹೋರಾಡಲು 100 ಕೋಟಿ ಘೋಷಿಸಿದ ವೇದಾಂತ್ ಫೌಂಡೇಶನ್

      ಕೊರೊನಾ ವಿರುದ್ಧ ಹೋರಾಡಲು 100 ಕೋಟಿ ಘೋಷಿಸಿದ ವೇದಾಂತ್ ಫೌಂಡೇಶನ್

      ಇತ್ತೀಚಿಗಷ್ಟೆ ವೇದಾಂತ ಲಿಮಿಟೆಡ್ ಸಂಸ್ಥಾಪಕ ಅನಿಲ್ ಅಗರ್ವಾಲ್ 100 ಕೋಟಿ ನೀಡುವುದಾಗಿ ಘೋಷಿಸಿದ್ದರು. ಈ ಹಣದಿಂದ ದಿನಗೂಲಿ ಕಾರ್ಮಿಕರು, ನಿರ್ಮಾಣ ಕಾರ್ಮಿಕರು, ಕಂಪನಿಗಳಲ್ಲಿ ದುಡಿಯುವ ಕೆಲಸಗಾರರಿಗೆ ಬಳಸಬಹುದು ಎಂದು ತಮ್ಮ ಟ್ವಿಟ್ಟರ್ ನಲ್ಲಿ ಸಲಹೆ ನೀಡಿದ್ದರು.

      ಮಹೀಂದ್ರಾ ಗ್ರೂಪ್ ಮಾಲೀಕ ಆನಂದ್ ಮಹೀಂದ್ರಾ

      ಮಹೀಂದ್ರಾ ಗ್ರೂಪ್ ಮಾಲೀಕ ಆನಂದ್ ಮಹೀಂದ್ರಾ

      ಮಹೀಂದ್ರಾ ಗ್ರೂಪ್ ಮಾಲೀಕ ಆನಂದ್ ಮಹೀಂದ್ರಾ ಕಾರು ತಯಾರಿಸುವುದನ್ನು ನಿಲ್ಲಿಸಿ ವೆಂಟಿಲೇರ್ಸ್ ತಯಾರಿಸಲು ಮುಂದಾಗಿರುವ ಬಗ್ಗೆ ಮಾಹಿತಿ ನೀಡಿದರು. ತನ್ನ ರೆಸಾರ್ಟ್‌ ಒಂದನ್ನು ಸೋಂಕಿತರ ಚಿಕಿತ್ಸೆಗಾಗಿ ನೀಡಲು ನಿರ್ಧರಿಸಿರುವುದಾಗಿ ಆನಂದ್ ಮಹೀಂದ್ರಾ ತಿಳಿಸಿದ್ದರು.

      ಅಲಿಬಾಬಾ ಸಂಸ್ಥಾಪಕ ಜ್ಯಾಕ್ ಮಾ

      ಅಲಿಬಾಬಾ ಸಂಸ್ಥಾಪಕ ಜ್ಯಾಕ್ ಮಾ

      ಈ ಹಿಂದೆ ಜನವರಿಯಲ್ಲಿ, ಅಲಿಬಾಬಾ ಸಂಸ್ಥಾಪಕ ಜ್ಯಾಕ್ ಮಾ ತಮ್ಮ 'ಜಾಕ್ ಮಾ ಫೌಂಡೇಶನ್ ಮೂಲಕ ಯುಎಸ್‌, ಏಷ್ಯಾನ್, ಆಫ್ರಿಕನ್ ದೇಶಗಳ ಚಿಕಿತ್ಸೆಗಾಗಿ 14.4 ಮಿಲಿಯನ್ ದೇಣಿಗೆ ನೀಡಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿತ್ತು. ಫೆಬ್ರವರಿಯಲ್ಲಿ, ಬಿಲ್ ಗೇಟ್ಸ್ ಮತ್ತು ಅವರ ಪತ್ನಿ ಮೆಲಿಂಡಾ ಗೇಟ್ಸ್ ಆಫ್ರಿಕಾ ಮತ್ತು ದಕ್ಷಿಣ ಏಷ್ಯಾ ದೇಶಗಳಿಗೆ ಪ್ರತ್ಯೇಕ ಕೊಠಡಿ ಮತ್ತು ಚಿಕಿತ್ಸೆಯ ಪ್ರಯತ್ನಗಳನ್ನು ಸುಧಾರಿಸಲು 100 ಮಿಲಿಯನ್ ಘೋಷಿಸಿದ್ದರು.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+