ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಸ್ವಯಂ ಕ್ವಾರಂಟೈನ್‌

|
Google Oneindia Kannada News

ನವದೆಹಲಿ, ಸೆ. 7: ಭಾರತದ ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅವರು ಸ್ವಯಂ ಕ್ವಾರಂಟೈನ್‌ಗೆ ಒಳಪಟ್ಟಿದ್ದಾರೆ ಎಂದು ಸುಪ್ರೀಂಕೋರ್ಟಿಗೆ ಇಂದು(ಸೆ.7) ತಿಳಿಸಲಾಯಿತು.

Recommended Video

Corona ಅಂಕಿ ಅಂಶಗಳಲ್ಲಿ ಕಂಡ ಏಕೈಕ ಪಾಸಿಟಿವ್ ಸುದ್ದಿ | Oneindia Kannada

ಹೀಗಾಗಿ, ವಿವಿಧ ನ್ಯಾಯಾಧಿಕರಣಗಳ ನೇಮಕಾತಿಗೆ ಸಂಬಂಧಿಸಿದ ಸೋಮವಾರ ನಡೆದಿದ್ದ ಪ್ರಕರಣದ ವಿಚಾರಣೆಯನ್ನು ಮುಂದೂಡುವಂತೆ ಕೋರಲಾಗಿದ್ದು, ಈ ಬಗ್ಗೆ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು ಮಾಹಿತಿ ನೀಡಿದರು.

ಜಸ್ಟೀಸ್ ಎಲ್ ನಾಗೇಶ್ವರ್ ರಾವ್ ಹಾಗೂ ಹೇಮಂತ್ ಗುಪ್ತಾ ಅವರಿದ್ದ ನ್ಯಾಯಪೀಠವು ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು ಮನವಿಯನ್ನು ಪುರಸ್ಕರಿಸಿದರು. ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 15ಕ್ಕೆ ಮುಂದೂಡಿದೆ.

Attorney General K K Venugopal in self-quarantine, SC informed

ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅವರ ಕಚೇರಿ ಸಿಬ್ಬಂದಿಯೊಬ್ಬರಿಗೆ ಕೊರೊನಾವೈರಸ್ ಸೋಂಕು ತಗುಲಿದ ಹಿನ್ನೆಲೆಯಲ್ಲಿ ವೇಣುಗೋಪಲ್ ಅವರು ಸ್ವಯಂ ಆಗಿ ಕ್ವಾರಂಟೈನ್ ನಲ್ಲಿರಲು ಬಯಸಿದ್ದಾರೆ.

ಸಿಎಟಿ, ಸಶಸ್ತ್ರ ಬಲ ನ್ಯಾಯಾಧಿಕರಣಗಳ ನೇಮಕಾತಿ ಕುರಿತಂತೆ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಸರ್ಕಾರದ ಪ್ರತಿನಿಧಿಯಾಗಿ ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅವರು ಹಾಜರಿರಬೇಕಾಗಿತ್ತು. ಆದರೆ, ಸಾಧ್ಯವಾಗದ ಕಾರಣ ವಿಚಾರಣೆಗಳು ಮುಂದೂಡಲ್ಪಟ್ಟಿವೆ.

English summary
The Supreme Court was informed on Monday that Attorney General KK Venugopal is in self-quarantine. A bench of Justices L Nageswara Rao and Hemant Gupta was requested by Additional Solicitor General S V Raju that a short adjournment be granted in the case as the AG, who is appearing in the matter, is in self-quarantine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X