ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

#asksundar ಎಂದ್ರೇ, ಕಟ್ಟಪ್ಪ, ಸಲ್ಮಾನ್ ಬಗ್ಗೆ ಪ್ರಶ್ನೆ ಕೇಳೋದಾ?

By Mahesh
|
Google Oneindia Kannada News

ನವದೆಹಲಿ, ಡಿ. 17: ಗೂಗಲ್ ಸಂಸ್ಥೆ ಸಿಇಒ ಸುಂದರ್ ಪಿಚೈ ಅವರು ಗುರುವಾರದಂದು ದೆಹಲಿ ವಿಶ್ವವಿದ್ಯಾಲಯ ಶ್ರೀರಾಮ ಕಾಲೇಜ್ ಆಫ್ ಕಾಮರ್ಸ್ ನ 2000ಕ್ಕೂ ಅಧಿಕ ವಿದ್ಯಾರ್ಥಿಗಳ ಜೊತೆ ನಡೆಸಿದ ಸಂವಾದ ರಸಮಯವಾಗಿತ್ತು. ಇದಕ್ಕಿಂತಲೂ ಸ್ವಾರಸ್ಯಕರವಾಗಿ ಟ್ವಿಟ್ಟರ್ ನಲ್ಲಿ #asksundar ಎಂಬ ಟ್ಯಾಗ್ ನೊಂದಿಗೆ ಬಂದ ಪ್ರಶ್ನೆಗಳು ಹುಬ್ಬೇರಿಸುವಂತೆ ಇತ್ತು.

ಗೂಗಲ್ ಸಿಇಒ ಸುಂದರ್ ಪಿಚೈ ಅವರಿಗೆ ಗುರುವಾರ ಮಧ್ಯಾಹ್ನ 1 ಗಂಟೆಯೊಳಗೆ #asksundar ಎಂಬ ಹ್ಯಾಶ್ ಟ್ಯಾಗ್ ಹಾಕಿ ಸಾಧ್ಯವಾದಷ್ಟು ಪ್ರಶ್ನೆಗಳು ಕೇಳಿ ಎಂದಿದ್ದೇ ತಡ. ಮನಸ್ಸಿಗೆ ಹೊಳೆದ ಪ್ರಶ್ನೆಗಳೆಲ್ಲವೂ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ತುಂಬಿ ತುಳುಕಿತು. [ಕ್ರಿಕೆಟರ್ ಆಗಬೇಕಿತ್ತು, ಕೋಡರ್ ಆದೆ ಎಂದ ಸುಂದರ್ ಪಿಚೈ]

ನೀವು 12ನೇ ತರಗತಿಯಲ್ಲಿ ಎಷ್ಟು ಅಂಕ ಗಳಿಸಿದ್ರಿ? ನಿಮ್ಮ ನೆಚ್ಚಿನ ಕ್ರೀಡೆ ಯಾವುದು? ಆಂಡ್ರಾಯ್ಡ್ ಓಎಸ್ ಗೆ ಭಾರತೀಯ ಟಚ್ ಯಾವಾಗ ನೀಡುತ್ತೀರಿ? ನಿಮ್ಮ ಹೆಸರು ನಿಮಗೆ ವಿರೋಧಾಭಾಸ ಎನಿಸುತ್ತಿಲ್ಲವೇ? ನಿಮ್ಮ ನೆಚ್ಚಿನ ನಟ ಯಾರು? ಅಷ್ಟೇ ಏಕೆ ಬಾಹುಬಲಿಯನ್ನು ಕಟ್ಟಪ್ಪ ಕೊಂದಿದ್ದು ಏಕೆ? ಇಂದ್ರಾಣಿ ಮುಖರ್ಜಿಗೆ ನಿಜವಾಗಿಯೂ ಎಷ್ಟು ಜನ ಗಂಡಂದಿರು? ಸಲ್ಮಾನ್ ಖಾನ್ ಕಾರು ಓಡಿಸುತ್ತಿದ್ದದ್ದು ಯಾರು? ಎಂಬ ಪ್ರಶ್ನೆಗಳು ಕೇಳಿ ಬಂದಿವೆ. [ಪಿಚೈ ಹಂಚಿಕೊಂಡ ಕನಸುಗಳೇನು?]

ಭಾರತದ ಲಕ್ಷಾಂತರ ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕಾಗಿ ಗೂಗಲ್ ಹಮ್ಮಿಕೊಂಡಿರುವ ಇಂಟರ್ನೆಟ್ ಸಾಥಿ ಯೋಜನೆಗೆ ನೆರವು ನೀಡಲು ನಾನು ಸಿದ್ಧ ಎಂದು ಇನ್ನು ಕೆಲವರು ಟ್ವೀಟ್ ಮಾಡಿದ್ದಾರೆ.

#asksundar ಹುಬ್ಬೇರಿಸುವಂಥ ಪ್ರಶ್ನೆಗಳು

#asksundar ಹುಬ್ಬೇರಿಸುವಂಥ ಪ್ರಶ್ನೆಗಳು

#asksundar ಎಂಬ ಹ್ಯಾಶ್ ಟ್ಯಾಗ್ ಹಾಕಿ ಸಾಧ್ಯವಾದಷ್ಟು ಪ್ರಶ್ನೆಗಳು ಕೇಳಿ ಎಂದಿದ್ದೇ ತಡ. ಮನಸ್ಸಿಗೆ ಹೊಳೆದ ಪ್ರಶ್ನೆಗಳೆಲ್ಲವೂ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ತುಂಬಿ ತುಳುಕಿತು.ಟ್ವಿಟ್ಟರ್ ನಲ್ಲಿ ಬಂದ ಕೆಲ ಪ್ರಶ್ನೆಗಳನ್ನು ನಿರೂಪಕ ಹರ್ಷ ಭೋಗ್ಲೆ ಅವರು ಕೇಳಿದರು.

ಆಂಡ್ರಾಯ್ಡ್ ಓಎಸ್ ಗೆ ಭಾರತೀಯ ಹೆಸರು ಏಕಿಲ್ಲ?

ಆಂಡ್ರಾಯ್ಡ್ ಓಎಸ್ ಗೆ ಭಾರತೀಯ ಹೆಸರು ಏಕಿಲ್ಲ? P for ಪಾಯಸಂ, ಪೇಡಾ ಅಂಥಾ ಏಕೆ ಬಿಡಬಾರದು.

ಪಾಯಸ, ಪೇಡಾ ಏಕೆ ಬೇರೆ ಹೆಸರಿಡಿ

ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಗಳಿಗೆ ಕ್ಯಾಂಡಿ ಹೆಸರು ಇಟ್ಟು ಆಗಿದೆ ಈಗ ಆಂಡ್ರಾಯ್ಡ್ ರಸಗುಲ್ಲಾ, ಆಂಡ್ರಾಯ್ಡ್ ಜಿಲೇಬಿ ಎಂದು ಹೆಸರಿಡಿ.

12ನೇ ಕ್ಲಾಸ್ ಮಾರ್ಕ್ಸ್ ಸೂಪರ್ ಉತ್ತರ

12ನೇ ಕ್ಲಾಸ್ ಮಾರ್ಕ್ಸ್ ಸೂಪರ್ ಉತ್ತರ ಕೊಟ್ಟಿದ್ದೀರಿ ಬಿಡಿ, ಶ್ರೀರಾಮ ಕಾಲೇಜ್ ಸೇರೋಕೆ ಆಗದಷ್ಟು ಮಾರ್ಕ್ಸ್!

ಕಾರ್ಯಕ್ರಮದ ಕೊನೆಯಲ್ಲಿ ಸಕತ್ ಸೆಲ್ಫಿ

ಕಾರ್ಯಕ್ರಮದ ಕೊನೆಯಲ್ಲಿ ಹರ್ಷ ಭೋಗ್ಲೆ ಅವರು ತೆಗೆದ 360 ಡಿಗ್ರಿಯ ಸಕತ್ ಸೆಲ್ಫಿ ಚೆನ್ನಾಗಿತ್ತು.

ಸರ್ಚ್ ಇಂಜಿನ್ ನಿಂದ ನಾಪತ್ತೆಯಾದ ಎಮ್ಮೆ ಹುಡುಕಿ

ನಿಮ್ಮ ಸರ್ಚ್ ಇಂಜಿನ್ ನಿಂದ ನಾಪತ್ತೆಯಾದ ಅಜಂ ಖಾನ್ ಎಮ್ಮೆ ಹುಡುಕಿ ನೋಡೋಣ

ದಯವಿಟ್ಟು ಈ ಪ್ರಶ್ನೆಗಳಿಗೆ ಉತ್ತರಿಸಿ ಸುಂದರ್

ದಯವಿಟ್ಟು ಈ ಪ್ರಶ್ನೆಗಳಿಗೆ ಉತ್ತರಿಸಿ ಸುಂದರ್, ಬಾಹುಬಲಿಯನ್ನು ಕಟ್ಟಪ್ಪ ಕೊಂದಿದ್ದು ಏಕೆ? ಸಲ್ಮಾನ್ ಕಾರು ಓಡಿಸುತ್ತಿದ್ದದ್ದು ಯಾರು?

ಟ್ವಿಟ್ಟರ್ ಯಲ್ಲಿ ಯಾರನ್ನು ಫಾಲೋ ಮಾಡ್ತಾ ಇದ್ದೀರಾ?

ಟ್ವಿಟ್ಟರ್ ಯಲ್ಲಿ ಯಾರನ್ನು ಫಾಲೋ ಮಾಡ್ತಾ ಇದ್ದೀರಾ? ಸಚಿನ್ ತೆಂಡೂಲ್ಕರ್ ಮಾತ್ರ ಕಾಣಿಸುತ್ತಿದ್ದಾರೆ ಬೇರೆಯವರು ಏಕಿಲ್ಲ?

360 ಡಿಗ್ರಿ ಸಕತ್ ಸೆಲ್ಫಿ ಮತ್ತೊಂದು ಫೋಟೊ

ಸುಂದರ್ ಜೊತೆ 360 ಡಿಗ್ರಿ ಸಕತ್ ಸೆಲ್ಫಿ ಮತ್ತೊಂದು ಫೋಟೊ

English summary
Sundar Pichai had a interactive session at Delhi University's Shri Ram College of Commerce. Here are the collected tweets under #asksundar. The session hosted by Harsha Bhogle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X