ದೆಹಲಿಯಲ್ಲಿ 1 ಲಕ್ಷ ದಾಟಿದ ಸೋಂಕಿತರ ಸಂಖ್ಯೆ; ಆತಂಕ ಬೇಡ

ನವದೆಹಲಿ, ಜುಲೈ 06 : "ನವದೆಹಲಿಯಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 1 ಲಕ್ಷದ ಗಡಿ ದಾಟಿದೆ. ಆದರೆ, ಆತಂಕಗೊಳ್ಳುವ ಅಗತ್ಯವಿಲ್ಲ 72,000 ಜನರು ಗುಣಮುಖರಾಗಿದ್ದಾರೆ" ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದರು.

Recommended Video

      Bubonic Plague Says Hello China:ಚೀನಾದಲ್ಲಿ 'ಬುಬೊನಿಕ್ ಪ್ಲೇಗ್' ಮಾರಣಾಂತಿಕ ರೋಗ ಪತ್ತೆ| Oneindia Kannada

      ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, "ರಾಜ್ಯದಲ್ಲಿನ 25 ಸಾವಿರ ಸಕ್ರಿಯ ಪ್ರಕರಣಗಳಲ್ಲಿ 15 ಸಾವಿರ ಜನರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಸಾವಿನ ಸಂಖ್ಯೆಯೂ ಕಡಿಮೆಯಾಗಿದೆ" ಎಂದು ಅರವಿಂದ ಕೇಜ್ರಿವಾಲ್ ತಿಳಿಸಿದರು.

      "ದೇಶದಲ್ಲೇ ಮೊದಲ ಬಾರಿಗೆ ನಾವು ಪ್ಲಾಸ್ಮಾ ಬ್ಯಾಂಕ್ ಸ್ಥಾಪನೆ ಮಾಡಿದ್ದೇವೆ. ನಮ್ಮ ಪರೀಕ್ಷಾ ವರದಿಗಳು ಪ್ಲಾಸ್ಮಾ ಥೆರೆಪಿ ರೋಗಿಗಳ ಆರೋಗ್ಯ ಸುಧಾರಿಸಲಿವೆ ಎಂದು ಹೇಳಿವೆ" ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿವರಣೆ ನೀಡಿದರು.

      Arvind Kejriwal Urge The People To Donate Plasma

      "ಪ್ಮಾಸ್ಮಾ ಅಗತ್ಯ ಇರುವ ಜನರಿಗಿಂತ ಕಡಿಮೆ ಜನರು ದಾನ ಮಾಡಲು ಮುಂದೆ ಬರುತ್ತಿದ್ದಾರೆ. ಜನರು ಸ್ವಯಂ ಪ್ರೇರಿತವಾಗಿ ಪ್ಲಾಸ್ಮಾ ದಾನ ಮಾಡಬೇಕು. ಇದರಿಂದಾಗಿ ಯಾವುದೇ ನೋವು, ನಿಶ್ಯಕ್ತಿ ಕಾಡುವುದಿಲ್ಲ, ಸಮಾಜಕ್ಕೆ ಇದು ನಮ್ಮ ಕೊಡುಗೆಯಾಗಿದೆ" ಎಂದು ಅರವಿಂದ್ ಕೇಜ್ರಿವಾಲ್ ಜನರಲ್ಲಿ ಮನವಿ ಮಾಡಿದರು.

      "ನಮ್ಮ ವೈದ್ಯಕೀಯ ತಂಡ ಜನರಿಗೆ ಪ್ಮಾಸ್ಮಾ ದಾನ ಮಾಡುವಂತೆ ಮನವಿ ಮಾಡುತ್ತಿದೆ. ಇಂತಹ ಕರೆ ನಿಮಗೆ ಬಂದರೆ ನಿರಾಕರಿಸಬೇಡಿ. ಆಸ್ಪತ್ರೆಗಳು ಕೊರೊನಾ ವೈರಸ್ ಸೋಂಕಿನಿಂದ ಗುಣಮುಖಗೊಂಡವರಿಗೆ ಪ್ಲಾಸ್ಮಾ ದಾನ ಮಾಡುವಂತೆ ಮನವಿ ಮಾಡುತ್ತಿದೆ" ಎಂದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+