ಅರವಿಂದ್ ಕೇಜ್ರಿವಾಲ್ ಪ್ರಮಾಣ ವಚನ ಸಮಾರಂಭ
ನವದೆಹಲಿ, ಫೆ.14 : ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಜಯಸಾಧಿಸಿರುವ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಶನಿವಾರ ದೆಹಲಿಯ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 2014ರ ಫೆ.14ರಂದು ರಾಜೀನಾಮೆ ನೀಡಿದ್ದ ಕೇಜ್ರಿವಾಲ್ 2015ರ ಫೆ.14ರಂದು ಪುನಃ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ನವದೆಹಲಿಯ ಐತಿಹಾಸಿಕ ರಾಮ್‌ಲೀಲಾ ಮೈದಾನದಲ್ಲಿ ಅರವಿಂದ್ ಕೇಜ್ರಿವಾಲ್ ಪ್ರಮಾಣ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 6 ಶಾಸಕರು ಕೇಜ್ರಿವಾಲ್ ಅವರೊಂದಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಮಾಣ ವಚನ ಸಮಾರಂಭದ ಮಾಹಿತಿ ಇಲ್ಲಿದೆ. [ಕೇಜ್ರಿವಾಲ್ ಪ್ರಮಾಣ ವಚನಕ್ಕೆ ಮೋದಿ ಗೈರು]

ಕೇಜ್ರಿವಾಲ್ ಸಂಪುಟದ ಸಚಿವರ ಖಾತೆಗಳು
* ಅರವಿಂದ್ ಕೇಜ್ರಿವಾಲ್ - ಮುಖ್ಯಮಂತ್ರಿ [ಯಾವುದೇ ಖಾತೆ ಇಲ್ಲ]
* ಮನೀಷ್ ಸಿಸೋಡಿಯಾ - ಉಪ ಮುಖ್ಯಮಂತ್ರಿ, ಹಣಕಾಸು, ಶಿಕ್ಷಣ, ನಗರಾಭಿವೃದ್ಧಿ, ಗುಪ್ತಚರ
* ಜಿತೇಂದ್ರ ಸಿಂಗ್ ತೋಮರ್ - ಕಾನೂನು ಮತ್ತು ಪ್ರವಾಸೋದ್ಯಮ
* ಸತ್ಯೇಂದ್ರ ಜೈನ್ - ಆರೋಗ್ಯ, ಇಂಧನ, ಲೋಕೋಪಯೋಗಿ
* ಸಂದೀಪ್ ಕುಮಾರ್ - ಮಹಿಳಾ ಮತ್ತು ಮಕ್ಕಳ ಕಲ್ಯಾಣ
* ಗೋಪಾಲ್ ರಾಯ್ - ಸಾರಿಗೆ ಮತ್ತು ಕಾರ್ಮಿಕ ಅಭಿವೃದ್ಧಿ
* ಆಸಿಮ್ ಅಹ್ಮದ್ ಖಾನ್ - ಆಹಾರ, ನಾಗರಿಕ ಪೂರೈಕೆ, ಪರಿಸರ ಮತ್ತು ಅರಣ್ಯ
ಸಮಯ 2.24 : ದೆಹಲಿಯ ನೂತನ ಸಿಎಂ ಅರವಿಂದ್ ಕೇಜ್ರಿವಾಲ್ ಸಂಜೆ 4.30ಕ್ಕೆ ಮೊದಲ ಸಚಿವ ಸಂಪುಟ ಸಭೆ ನಡೆಸಬೇಕಿತ್ತು. ಆದರೆ, ಅವರು ತೀವ್ರ ಜ್ವರದಿಂದ ಬಳಲುತ್ತಿರುವ ಹಿನ್ನಲೆಯಲ್ಲಿ ಸಭೆಯನ್ನು ರದ್ದುಗೊಳಿಸಲಾಗಿದೆ.
ಸಮಯ 01.05 : ಭಾಷಣದ ಮುಗಿಸಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಾಡನ್ನು ಹಾಡಿದರು.
ಸಮಯ 01.02 : ಮುಖ್ಯಮಂತ್ರಿಗಳು, ಸಚಿವರು, ಅಧಿಕಾರಿಗಳು ಕೆಂಪು ದೀಪದ ಕಾರು ಬಳಸುವುದಿಲ್ಲ ಎಂದು ಕೇಜ್ರಿವಾಲ್ ಹೇಳಿದರು. ಆಪ್ ಟೋಪಿ ಧರಿಸಿ ಗೂಂಡಾಗಿರಿ ಮಾಡಿದವರನ್ನು ಜೈಲಿಗೆ ಕಳುಹಿಸಿ ಎಂದು ನಾನು ಪೊಲೀಸರಿಗೆ ಆದೇಶಿಸುತ್ತಿದ್ದೇನೆ ಎಂದರು.
ಸಮಯ 1 ಗಂಟೆ : ದೆಹಲಿಯ ವ್ಯಾಪಾರಿಗಳು ತೆರಿಗೆ ಕಟ್ಟಿ ಒಂದು ರೂ. ತೆರಿಗೆಯೂ ಪೋಲಾಗದಂತೆ ನಾನು ಎಚ್ಚರ ವಹಿಸುತ್ತೇನೆ ಎಂದು ಕೇಜ್ರಿವಾಲ್ ಜನರಿಗೆ ಭರವಸೆ ನೀಡಿದರು. ತೆರಿಗೆ ಹಣದಿಂದ ದೆಹಲಿಯನ್ನು ಅಭಿವೃದ್ಧಿ ಪಡಿಸುವೆ ಎಂದರು.
ಸಮಯ 12.55 : ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿದಾಗ ದೆಹಲಿಯನ್ನು ಸಂಪೂರ್ಣರಾಜ್ಯವಾಗಿ ಘೋಷಿಸಬೇಕೆಂದು ಮನವಿ ಮಾಡಿದ್ದೇನೆ. ದೆಹಲಿಯಲ್ಲಿ ನಮ್ಮ ಬಹುಮತದ ಸರ್ಕಾರವಿದೆ. ದೆಹಲಿಯಲ್ಲಿ ಬಿಜೆಪಿಯ ಬಹುಮತದ ಸರ್ಕಾರವಿದೆ. ನೀವು ದೇಶವನ್ನು ನೋಡಿಕೊಳ್ಳಿ, ನಾವು ದೆಹಲಿಯನ್ನು ನೋಡಿಕೊಳ್ಳಲಿದ್ದೇವೆ ಎಂದು ಹೇಳಿದ್ದೇನೆ ಎಂದು ಕೇಜ್ರಿವಾಲ್ ತಿಳಿಸಿದರು.
ಸಮಯ 12.50 : ಭ್ರಷ್ಟಚಾರ ನಿರ್ಮೂಲನೆಯಾಗಬೇಕು, ಲೋಕಪಾಲ್ ಮಸೂದೆ ಜಾರಿಗೆ ಬರಬೇಕು ಎಂದು ಹೇಳಿದ ಕೇಜ್ರಿವಾಲ್ ಮುಂದಿನ ಐದು ವರ್ಷ ದೆಹಲಿ ಜನರ ಸೇವೆ ಮಾಡುತ್ತೇನೆ ಎಂದು ಹೇಳಿದರು. ನಮ್ಮ ಪಕ್ಷಕ್ಕೆ ಬಹುಮತ ಬಂದಿದೆ ನಾವು ಅಹಂಕಾರ ಪಟ್ಟುಕೊಳ್ಳಬಾರದು ಎಂದು ದೆಹಲಿ ಸಿಎಂ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಸಮಯ 12.43 : ಈ ಬಾರಿ ಸಂಪೂರ್ಣ ಬಹುಮತದ ಮೂಲಕ ಸರ್ಕಾರ ರಚನೆ ಮಾಡಿದ್ದೇವೆ. ಈ ಪ್ರಮಾಣದ ಜನಬೆಂಬಲವನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ಎಲ್ಲಾ ವರ್ಗದವರು ಆಪ್ ಪಕ್ಷಕ್ಕೆ ಬೆಂಬಲ ನೀಡಿದ್ದೀರಿ ಎಂದು ಹೇಳಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್.
ಸಮಯ 12 42 : ಆಮ್ ಆದ್ಮಿ ಪಕ್ಷಕ್ಕೆ ಮತ ನೀಡಿದ ದೆಹಲಿ ಜನರಿಗೆ ಅರವಿಂದ್ ಕೇಜ್ರಿವಾಲ್ ಧನ್ಯವಾದ ಸಲ್ಲಿಸಿದ್ದಾರೆ. ದೆಹಲಿಯ ಜನರು ಆಪ್ ಪಕ್ಷದ ಮೇಲೆ ಪ್ರೀತಿಯ ಮಳೆ ಸುರಿಸಿದ್ದಾರೆ ಎಂದು ಕೇಜ್ರಿವಾಲ್ ಹೇಳಿದರು.ಒಂದು ವರ್ಷದ ಹಿಂದೆ ನಾನು ಸಿಎಂ ಸ್ಥಾನ ತ್ಯಜಿಸಿದ್ದೇ. ಅದೇ ದಿನದಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ.
ಸಮಯ 12.40 : ಪ್ರಮಾಣ ವಚನ ಸಮಾರಂಭದ ಬಳಿಕ ಅರವಿಂದ್ ಕೇಜ್ರಿವಾಲ್ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ.
Delhi Chief Minister Arvind Kejriwal raises slogan of "Vande Mataram" after taking oath pic.twitter.com/Ouo7NYP3gk
— ANI (@ANI_news) February 14, 2015 ಸಮಯ 12.37 : ಜೀತೆಂದರ್ ಸಿಂಗ್, ಗೋಪಾಲ್ ರಾಯ್, ಸತ್ಯೇಂದ್ರ ಜೈನ್, ಸಂದೀಪ್ ಕುಮಾರ್, ಹಸೀಂ ಅಹಮದ್ ಖಾನ್, ಮನೀಷ್ ಸಿಸೋಡಿಯಾ ಕೇಜ್ರಿವಾಲ್ ಸಂಪುಟ ಸೇರಿದ್ದಾರೆ.
ಸಮಯ 12.35 : ಪ್ರಮಾಣ ವಚನ ಸ್ವೀಕಾರ ಸಮಾರಂಭ ಮುಕ್ತಾಯ 6 ಸಚಿವರು ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಸಮಯ 12.31 : ಜಿತೇಂದರ್ ಸಿಂಗ್ ತೋಮರ್ ಪ್ರಮಾಣ ವಚನ ಸ್ವೀಕಾರ
ಸಮಯ 12.28 : ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಗೋಪಾಲ್ ರಾಯ್
ಸಮಯ 12.25 : ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸತ್ಯೇಂದ್ರ ಜೈನ್, ಪ್ರತಿಜ್ಞಾವಿಧಿ ಬೋಧಿಸಿದ ನಜೀಬ್ ಜಂಗ್
ಸಮಯ 12.23 : ಸಚಿವರಾಗಿ ಸಂದೀಪ್ ಕುಮಾರ್ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ
ಸಮಯ 12.20 : ಸಚಿವರಾಗಿ ಹಸೀಂ ಅಹಮದ್ ಖಾನ್ ಪ್ರಮಾಣ ವಚನ ಸ್ವೀಕಾರ
ಸಮಯ 12.18 : ಸಚಿವರಾಗಿ ದೇವರ ಹೆಸರಿಯಲ್ಲಿ ಮನೀಷ್ ಸಿಸೋಡಿಯಾ ಪ್ರಮಾಣ ವಚನ ಸ್ವೀಕಾರ
Manish Sisodia takes oath as a Cabinet minister at Ramleela Maidaan pic.twitter.com/680oM19ikV
— ANI (@ANI_news) February 14, 2015 ಸಮಯ 12.15 : ದೇವರ ಹೆಸರಿನಲ್ಲಿ ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಸಮಯ 12.09 : ವೇದಿಕೆಗೆ ಆಗಮಿಸಿದ ದೆಹಲಿ ಲೆಫ್ಟಿನಂಟ್ ಗವರ್ನರ್ ನಜೀಬ್ ಜಂಗ್, ಅರವಿಂದ್ ಕೇಜ್ರಿವಾಲ್
National Anthem plays before swearing in ceremony of Delhi cabinet pic.twitter.com/xzlDAA917v
— ANI (@ANI_news) February 14, 2015 ಸಮಯ 12.03 : ರಾಮ್‌ಲೀಲಾ ಮೈದಾನಕ್ಕೆ ನಜೀಬ್ ಜಂಗ್ ಆಗಮನ. ದೆಹಲಿ ಲೆಫ್ಟಿನಂಟ್ ಗವರ್ನರ್ ನಜೀಬ್ ಜಂಗ್ ಕೇಜ್ರಿವಾಲ್ ಅವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.
Arvind Kejriwal with cabinet Ministers, Kumar Vishwas also present pic.twitter.com/c0udXNRnCn
— ANI (@ANI_news) February 14, 2015 ಸಮಯ 11.50 : ರಾಮ್‌ಲೀಲಾ ಮೈದಾನಕ್ಕೆ ಆಗಮಿಸಿದ ಅರವಿಂದ್ ಕೇಜ್ರಿವಾಲ್
Arvind Kejriwal reaches Ramlila ground for the swearing-in ceremony pic.twitter.com/zVj5uFdJv8
— ANI (@ANI_news) February 14, 2015 ಸಮಯ 11.23 : ದೆಹಲಿಯ 8ನೇ ಮುಖ್ಯಮಂತ್ರಿಯಾಗಿ ಅರವಿಂದ್ ಕೇಜ್ರಿವಾಲ್ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಸಮಯ 11.18 : ಪ್ರಮಾಣ ವಚನ ಸಮಾರಂಭಕ್ಕೆ ಆಗಮಿಸುವ ಮುನ್ನ ಅರವಿಂದ್ ಕೇಜ್ರಿವಾಲ್ ತಾಯಿಯ ಆಶೀರ್ವಾದ ಪಡೆದಿದ್ದಾರೆ.

ಸಮಯ 11.04 : ಈ ಬಾರಿ ಮೆಟ್ರೋದಲ್ಲಿ ಅರವಿಂದ್ ಕೇಜ್ರಿವಾಲ್ ಆಗಮಿಸುತ್ತಿಲ್ಲ, ಕಾರಿನಲ್ಲೇ ಮೈದಾನಕ್ಕೆ ಆಗಮಿಸುತ್ತಿದ್ದಾರೆ.
Pictures from inside Arvind Kejriwal's residence pic.twitter.com/L4v3bMaLVR
— ANI (@ANI_news) February 14, 2015 ಸಮಯ 11.03 : ರಾಮ್‌ಲೀಲಾ ಮೈದಾನದತ್ತ ಹೊರಟ ದೆಹಲಿ ನಿಯೋಜಿತ ಸಿಎಂ ಆರವಿಂದ್ ಕೇಜ್ರಿವಾಲ್
ಸಮಯ 11 ಗಂಟೆ : ಅರವಿಂದ್ ಕೇಜ್ರಿವಾಲ್ ಅವರ ಜೊತೆ 6 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಸಮಯ 10.45 : 'ಪಾಂಚ್ ಸಾಲ್ ಕೇಜ್ರಿವಾಲ್' ರಾಮ್‌ಲೀಲಾ ಮೈದಾನದಲ್ಲಿ ಸಾವಿರಾರು ಆಪ್ ಕಾರ್ಯಕರ್ತರ ಘೋಷಣೆ.

70 ಜನ ಸದಸ್ಯ ಬಲದ ದೆಹಲಿ ವಿಧಾನಸಭೆಯಲ್ಲಿ 67 ಜನ ಆಮ್ ಆದ್ಮಿ ಪಕ್ಷದ ಶಾಸಕರಿದ್ದಾರೆ. ಇವರಲ್ಲಿ ಶೇ 15ರಷ್ಟು ಜನ ಸಚಿವ ಸ್ಥಾನ ಪಡೆದುಕೊಳ್ಳಬಹುದು ಎಂಬುದು ನಿಯಮ. ವಿಪಕ್ಷ ಸ್ಥಾನ ಪಡೆಯಲು ಬೇಕಿದ್ದ 7 ಸ್ಥಾನವನ್ನು ಗಳಿಸಲು ವಿಫಲವಾದ ಬಿಜೆಪಿ 3 ಶಾಸಕರೊಂದಿಗೆ ವಿಧಾನಸಭೆ ಪ್ರವೇಶಿಸಲಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ್ದೂ ಶೂನ್ಯ ಸಂಪಾದನೆ. [ಪ್ರತಿಕ್ರಿಯೆ: ಆಮ್ ಆದ್ಮಿ ಪಕ್ಷಕ್ಕೆ ಜಯ, ಭ್ರಷ್ಟತೆ ಇನ್ನು ಮಾಯ]
ಅರವಿಂದ್ ಕೇಜ್ರಿವಾಲ್ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಬರುವಂತೆ ಜನರಿಗೆ ಕರೆ ನೀಡಿದ್ದಾರೆ.
Do hear this clip. My invitation to one and all for oath ceremony. Sat,14th Feb, 11 am, Ramlila maidan. Be on timehttp://t.co/CFDQjWDmX5
— Arvind Kejriwal (@ArvindKejriwal) February 12, 2015 











Click it and Unblock the Notifications