• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೆಹಲಿಯ ಪ್ರಮುಖ ಮಾರುಕಟ್ಟೆಗಳನ್ನು ಮುಚ್ಚಲು ಅನುಮತಿ ನೀಡಿ: ಕೇಜ್ರಿವಾಲ್

|

ನವದೆಹಲಿ, ನವೆಂಬರ್ 17: ದೆಹಲಿಯಲ್ಲಿ ಕೊರೊನಾ ಸೋಂಕು ಮಿತಿ ಮೀರುತ್ತಿದ್ದು, ಪ್ರಮುಖ ಮಾರುಕಟ್ಟೆಗಳನ್ನು ಮುಚ್ಚಲು ಅನುಮತಿ ನೀಡುವಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೊರೊನಾ ಹೆಚ್ಚಾಗಿರುವ ಕಾರಣ ಮತ್ತೊಂದು ಲಾಕ್‌ಡೌನ್ ಮಾಡುವುದಿಲ್ಲ ಬದಲಾಗಿ ಕೆಲವು ಮಾರುಕಟ್ಟೆಗಳನ್ನು ಬಂದ್ ಮಾಡಲಿದ್ದೇವೆ ಎಂದರು.

ನ.15 ರಂದು ಅಮಿತ್ ಶಾ ಹಾಗೂ ಅರವಿಂದ್ ಕೇಜ್ರಿವಾಲ್ ಮಹತ್ವದ ಭೇಟಿ

ಮೂರನೇ ಅಲೆ ಈಗಾಗಲೇ ತಾರಕಕ್ಕೇರಿದೆ. ಮೂರನೇ ಬಾರಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದಂತ ಮಾರುಕಟ್ಟೆಗಳನ್ನು ಮುಚ್ಚಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರದ ಬಳಿ ಮನವಿ ಮಾಡುತ್ತಲೇ ಇದ್ದೇವೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ, ಮಾಸ್ಕ್ ಧರಿಸುತ್ತಿಲ್ಲ. ಇದೀಗ ಕೊವಿಡ್ ರಾಜಧಾನಿಯಾಗಿ ದೆಹಲಿ ಮಾರ್ಪಾಡಾಗುತ್ತಿದೆ.

ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಮದುವೆಯಲ್ಲಿ 200 ಮಂದಿ ಭಾಗವಹಿಸಬಹುದು. ಆದರೆ ಮೊದಲಿದ್ದ ನಿಯಮಕ್ಕೆ ತೆರಳಿ ಕೇವಲ 50 ಮಂದಿಗೆ ಮಾತ್ರ ಅವಕಾಶ ನೀಡಬೇಕಿದೆ.

ಲೆಫ್ಟಿನೆಂಟ್ ಗವರ್ನರ್‌ಗೆ ಮನವಿ ಸಲ್ಲಿಸಲಾಗಿದೆ,ಒಪ್ಪಿಗೆಗಾಗಿ ಕಾಯುತ್ತಿದ್ದೇವೆ. ಶೀಘ್ರವೇ ಅನುಮತಿ ನೀಡುತ್ತಾರೆ ಎನ್ನುವ ನಂಬಿಕೆ ಇದೆ. ಶಾಪಿಂಗ್‌ಗೆ ತೆರಳಿದವರು ಸಾಕಷ್ಟು ಮಂದಿ ಮಾಸ್ಕ್ ಧರಿಸುವುದಿಲ್ಲ, ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ.

ಕೊರೊನಾ ಸೋಂಕು ತಮಗೆ ಹರಡುವುದಿಲ್ಲ ಎಂದು ಜನರು ನಂಬಿದ್ದಾರೆ. ಕೊರೊನಾ ಸೋಂಕು ಯಾರಿಗೆ ಹೇಗೆ ಬೇಕಾದರೂ ತಗುಲಬಹುದು ಎಂದರು.ನವೆಂಬರ್ 11 ರಂದು 8593 ಪ್ರಕರಣಗಳು ಪತ್ತೆಯಾಗಿದ್ದವು. ಕಳೆದ ಎರಡು ದಿನಗಳಿಂದ 3500 ಪ್ರಕರಣಗಳು ಕಂಡುಬರುತ್ತಿವೆ.

English summary
Delhi Chief Minister Arvind Kejriwal today said that his government has sought the Centre's go-ahead to allow it to shut for a few days markets that may emerge as COVID-19 hotspots amid a COVID-19 surge in the national capital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X