Get Updates
Get notified of breaking news, exclusive insights, and must-see stories!

ಸಿಬಿಐ ಮುಖ್ಯಸ್ಥರು ಸೀಜರ್‌ನ ಪತ್ನಿಯಂತೆ, ಸಂಶಯಾತೀತರಾಗಿರಬೇಕು: ಅರುಣ್ ಜೇಟ್ಲಿ

ನವದೆಹಲಿ, ಅಕ್ಟೋಬರ್ 26: 'ಸಿಬಿಐನ ಎಲ್ಲ ಅಧಿಕಾರಿಗಳು, ಅದರಲ್ಲಿಯೂ ಮುಖ್ಯವಾಗಿ ಅತ್ಯುನ್ನತ ಸ್ಥಾನದ ಇಬ್ಬರು ಅಧಿಕಾರಿಗಳು ಸೀಜರ್‌ನ ಹೆಂಡತಿಯಂತೆ. ಅವರು ಎಲ್ಲ ಸಂಶಯಗಳಿಂದಲೂ ಹೊರತಾಗಿರಬೇಕು' ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ ವಿರುದ್ಧ ಸೀಮಿತ ಅವಧಿಯಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಸುಪ್ರೀಂಕೋರ್ಟ್‌ನ ಆದೇಶವನ್ನು ಸ್ವಾಗತಿಸಿದ ಅವರು, ಇದು ಸಕಾರಾತ್ಮಕ ಬೆಳವಣಿಗೆ. ದೇಶದ ಹಿತಾಸಕ್ತಿಗಾಗಿ ಸತ್ಯ ಹೊರಬರಲು ಇದು ಸಹಕಾರಿಯಾಗಲಿದೆ ಎಂದು ಹೇಳಿದರು.

ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ ಅವರನ್ನು ಭ್ರಷ್ಟಾಚಾರದ ಆರೋಪದಡಿ ಕಡ್ಡಾಯ ರಜೆಯ ಮೇಲೆ ತೆರಳುವಂತೆ ಸೂಚಿಸಿದ ಸರ್ಕಾರದ ನಡೆಯನ್ನು ಸಮರ್ಥಿಸಿದರು.

Arun Jaitley said cbi tops like Caesars wife, must be beyond suspicion

ಇತ್ತೀಚಿನ ಬೆಳವಣಿಗೆಗಳು ಸಿಬಿಐನ ಪ್ರತಿಷ್ಠೆಗೆ ಹಾನಿ ಮಾಡಿವೆ. ರಾಷ್ಟ್ರದ ಹಿತಾಸಕ್ತಿಯ ದೃಷ್ಟಿಯಿಂದ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ ಎಂದರು.

ಎರಡು ವಾರದಲ್ಲಿ ತನಿಖೆಗೆ ನಡೆಸುವಂತೆ ಸುಪ್ರೀಂಕೋರ್ಟ್ ನೀಡಿರುವ ಸೂಚನೆ ತನಿಖೆಯನ್ನು ಬಲಗೊಳಿಸಲಿದೆ. ನಿವೃತ್ತ ನ್ಯಾಯಾಧೀಶರ ನೇಮಕ ನ್ಯಾಯಸಮ್ಮತ ತನಿಖೆಯ ಭರವಸೆ ಮೂಡಿಸಿದೆ ಎಂದು ಪ್ರತಿಕ್ರಿಯೆ ನೀಡಿದರು.

16ನೇ ಶತಮಾನದಲ್ಲಿ ಶೇಕ್‌ಸ್ಪಿಯರ್ ರಚಿಸಿದ ಜೂಲಿಯಸ್ ಸೀಜರ್ ನಾಟಕದಲ್ಲಿ ಬರುವ 'ಸೀಜರ್‌ನ ಪತ್ನಿ ಸಂಶಯಾತೀತಳಾಗಿರಬೇಕು' ವಾಕ್ಯವನ್ನು ಜೇಟ್ಲಿ ಇಲ್ಲಿ ಪ್ರಸ್ತಾಪಿಸಿದ್ದಾರೆ. ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳು ಶುದ್ಧಹಸ್ತರಾಗಿರಬೇಕು ಮತ್ತು ಆರೋಪಗಳಿಂದ ಮುಕ್ತರಾಗಿರಬೇಕು ಎಂಬ ಅರ್ಥವನ್ನು ನೀಡುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+