ಕಿವುಡನಿಗೆ ಉತ್ತರ ಕೇಳಿಸುವುದಿಲ್ಲ: ರಾಹುಲ್‌ ವಿರುದ್ಧ ಜೇಟ್ಲಿ ವ್ಯಂಗ್ಯ

Recommended Video

      ರಾಹುಲ್ ಗಾಂಧಿಗೆ ಕಿವಿ ಕೇಳಿಸುವುದಿಲ್ಲ..! | Oneindia Kannada

      ನವದೆಹಲಿ, ಡಿಸೆಂಬರ್ 14: ಸುಪ್ರೀಂಕೋರ್ಟ್ ತೀರ್ಪಿನ ಬಳಿಕವೂ ರಫೇಲ್ ಒಪ್ಪಂದದ ಬಗ್ಗೆ ಜಂಟಿ ಸಂಸದೀಯ ಸಮಿತಿ ಸಭೆ ತನಿಖೆಗೆ ಒತ್ತಾಯಿಸುತ್ತಿರುವ ಕಾಂಗ್ರೆಸ್ ವಿರುದ್ಧ ಅರುಣ್ ಜೇಟ್ಲಿ ಕಿಡಿಕಾರಿದ್ದಾರೆ.

      ರಫೇಲ್ ಒಪ್ಪಂದದಲ್ಲಿ ಅವ್ಯವಹಾರ ನಡೆದಿದ್ದು, ಅದರ ಬಗ್ಗೆ ತನಿಖೆ ನಡೆಸಬೇಕು ಎಂದಿರುವ ಕಾಂಗ್ರೆಸ್‌ಅನ್ನು 'ಕಿವುಡನಿಗೆ ಹೇಳಿದ ಉತ್ತರ ಕೇಳಿಸುವುದಿಲ್ಲ' ಎಂದು ವ್ಯಂಗ್ಯವಾಡಿದ್ದಾರೆ.

      ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಜೇಟ್ಲಿ, 'ರಫೇಲ್‌ನಂತಹ ಒಪ್ಪಂದಗಳನ್ನು ಸಂಸದೀಯ ಸಮಿತಿಯ ತನಿಖೆಗೆ ಒಳಪಡಿಸಲು ಸಾಧ್ಯವಿಲ್ಲ. ಇದು ಕಾನೂನಿನ ಅಡಿಯಲ್ಲಿ ಕೋರ್ಟ್‌ನಿಂದ ಮಾತ್ರ ಸಾಧ್ಯ ಎಂದು ಹೇಳಿದರು.

      Arun Jaitley rafale deal deaf will never hear answer congress rahul gandhi

      ರಫೇಲ್ ವಿಚಾರದಲ್ಲಿ ಗದ್ದಲ ಎಬ್ಬಿಸಿದವರೆಲ್ಲರೂ ಸೋತಿದ್ದಾರೆ. ಕಾಂಗ್ರೆಸ್ ಮಾಡಿರುವ ಆರೋಪವು ರಾಷ್ಟ್ರೀಯ ಭದ್ರತೆಗೆ ರಾಜಿಯಾಗುವಂತಹದ್ದಾಗಿದೆ ಎಂದು ತಿಳಿಸಿದರು.

      ಸರ್ಕಾರ ನೀಡಿರುವ ಎಲ್ಲ ಅಂಕಿ ಅಂಶಗಳೂ ನಿಖರವಾಗಿವೆ ಮತ್ತು ಕಾಂಗ್ರೆಸ್ ಸುಳ್ಳು ಮಾಹಿತಿಗಳನ್ನು ನೀಡುತ್ತಿದ್ದಾರೆ. ಸತ್ಯಕ್ಕೆ ಒಂದೇ ದೃಷ್ಟಿ ಇರುತ್ತದೆ, ಆದರೆ ಸುಳ್ಳಿಗೆ ನೂರಾರು ಕಣ್ಣುಗಳು. ಈ ಕಾರಣದಿಂದಲೇ ರಾಹುಲ್ ಗಾಂಧಿ ಅನೇಕ ಅಂಕಿ ಅಂಶಗಳನ್ನು ನಮೂದಿಸಿದ್ದಾರೆ ಎಂದು ಲೇವಡಿ ಮಾಡಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+