• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಊಬರ್, ಓಲಾಗಳು ಸೇವೆ ನಿರಾಕರಿಸುವಂತಿಲ್ಲ: ದೆಹಲಿಯಲ್ಲಿ ಹೊಸ ಕಾಯ್ದೆ

|

ನವದೆಹಲಿ, ಸೆ.29: ಇನ್ನು ಮುಂದೆ ಓಲಾ, ಊಬರ್ ನಂತಹ ಅಪ್ಲಿಕೇಷನ್ ಆಧಾರಿತ ಟ್ಯಾಕ್ಸಿಗಳು ಪ್ರಯಾಣಿಕರು ಹೇಳಿದ ಜಾಗಗಳಿಗೆ ಬರಲು ನಿರಾಕರಿಸಿದರೆ 25 ಸಾವಿರದವರೆಗೆ ದಂಡ ಬೀಳಲಿದೆ.

ಓಲಾ ವಿರುದ್ಧ ಮುಷ್ಕರ ನಡೆಸಲು ಮುಂದಾದ ಚಾಲಕರ ಒಕ್ಕೂಟ

ಅಪ್ಲಕೇಷನ್ ಆಧಾರಿತ ಟ್ಯಾಕ್ಸಿಗಳನ್ನು ಬುಕ್ ಮಾಡಿದ ಬಳಿಕ ನೀವು ಹೇಳೊ ಜಾಗಕ್ಕೆ ಬರಲು ಸಾಧ್ಯವಿಲ್ಲ ಎಂದು ಹೇಳುವ ಹಾಗಿಲ್ಲ, ಇತ್ತೀಚಿ ದಿನಗಳಲ್ಲಿ ಕೆಲವು ಜಾಗಗಳಿಗೆ ಚಾಲಕರು ನಿರಾಕರಿಸುತ್ತಿರುವ ಘಟನೆಗಳು ಹೆಚ್ಚಾಗಿವೆ. ಇಂತಹ ಚಾಲಕರಿಗೆ 25 ಸಾವಿರ ರೂ ವರೆಗೆ ದಂಡ ವಿಧಿಸಲಾಗುತ್ತದೆ.

ಯುವತಿಗೆ ಅಶ್ಲೀಲ ವಿಡಿಯೋ ತೋರಿಸಿದ ಓಲಾ ಚಾಲಕ ಮಿಸ್ಸಿಂಗ್: ಪೊಲೀಸರ ತಲಾಶ್

ದೆಹಲಿ ಸರ್ಕಾರವು ನೂತನ ಸಂಚಾರಿ ನಿಯಮಗಳನ್ನು ಶೀಘ್ರದಲ್ಲಿ ಪರಿಷ್ಕರಣೆಗೊಳಿಸಲಿವೆ ಅದರ ಜತೆಗೆ ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಪ್ರಯಾಣಿಕರ ಮೇಲೆ ದೌರ್ಜನ್ಯ, ಅಸಭ್ಯ ವರ್ತನೆ ಬಗ್ಗೆ ಸಾಕಷ್ಟು ದೂರು ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಾಗುತ್ತಿದೆ.ಒಂದೊಮ್ಮೆ ದೂರು ದಾಖಲಾದರೆ 1 ಲಕ್ಷದವರೆಗೂ ದಂಡ ವಿಧಿಸಲಾಗುತ್ತದೆ.

ಕ್ಯಾಬ್ ಚಾಲಕರಿಂದ ಕಿರುಕುಳ: ಮಹಿಳಾ ಚಾಲಕರಿಗೆ ಹೆಚ್ಚಿದ ಬೇಡಿಕೆ

ಪ್ರಯಾಣಿಕರ ಲಿಂಗ, ಜಾತಿ, ಮತ, ಧರ್ಮ, ರಾಷ್ಟ್ರೀಯತೆ ಅಥವಾ ವೈಕಲ್ಯತೆಗಳ ಮೇಲೆ ತಾರತಮ್ಯ ಮಾಡುವಂತಿಲ್ಲ. ಸಂಚಾರಿ ಇಲಾಖೆ ಸಮೀಪದ ರೂಟ್‌ಗಳಿಗೆ ನಿಗದಿ ಪಡಿಸಿದ ಮೊತ್ತಕ್ಕಿಂತ ಅಧಿಕ ಮೊತ್ತವನ್ನು ಕೇಳುವಂತಿಲ್ಲ. ಈ ನಿಯಮವನ್ನು ಮೀರಿದರೆ ಪರವಾನಗಿ ರದ್ದಾಗಲಿದೆ. ಟ್ರಿಪ್‌/ಸರ್ವಿಸ್‌ ನಿರಾಕರಿಸುವಂತಿಲ್ಲ ಇಂತಹ ಹಲವು ನೂತನ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ.

English summary
Delhi government has proposed an act which will be made mandatory for application based taxis that they couldn't deny the services for any reasons for the passengers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X