Breaking; ಜಹಾಂಗಿರ್‌ಪುರಿಯಲ್ಲಿ ಜೆಸಿಬಿಗಳ ಘರ್ಜನೆ ಆರಂಭ
ನವದೆಹಲಿ, ಏಪ್ರಿಲ್ 20; ಬಿಗಿ ಪೊಲೀಸ್ ಭದ್ರತೆ ಜೊತೆಗೆ ಜಹಾಂಗಿರ್‌ಪುರಿಯಲ್ಲಿ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆಯನ್ನು ದೆಹಲಿ ಮಹಾನಗರ ಪಾಲಿಕೆ ಆರಂಭಿಸಿದೆ. ಜೆಸಿಬಿಗಳ ಸಹಾಯದಿಂದ ಕಟ್ಟಡಗಳನ್ನು ತೆರವುಗೊಳಿಸಲಾಗುತ್ತಿದೆ.
ಬುಧವಾರ ದೆಹಲಿ ಮಹಾನಗರ ಪಾಲಿಕೆ ಅಧಿಕಾರಿಗಳು ದೆಹಲಿ ಪೊಲೀಸರ ಸಹಾಯದಿಂದ ಅಕ್ರಮ ಕಟ್ಟಡಗಳ ತೆರವು ಕಾರ್ಯ ಆರಂಭಿಸಿದ್ದಾರೆ. ಹನುಮ ಜಯಂತಿ ಮೆರವಣಿಗೆ ವೇಳೆ ಶನಿವಾರ ಜಹಾಂಗಿರ್‌ಪುರಿಯಲ್ಲಿ ಗಲಭೆ ನಡೆದಿತ್ತು. ಈ ಹಿನ್ನಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಸುಮಾರು 400 ಪೊಲೀಸರನ್ನು ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಎರಡು ದಿನಗಳ ಕಾಲ ಈ ಕಾರ್ಯಾಚರಣೆ ನಡೆಯಲಿದೆ ಎಂದು ಅಂದಾಜಿಸಲಾಗಿದೆ.

ದೆಹಲಿ ಮಹಾನಗರ ಪಾಲಿಕೆ ಅಧಿಕಾರಿಗಳು ರಸ್ತೆಯ ಮೇಲೆ ನಿರ್ಮಾಣವಾಗಿರುವ ಕೊಳಗೇರಿ ಪ್ರದೇಶ, ಅಂಗಡಿಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಿದ್ದಾರೆ ಎಂದು ಜೆಸಿಬಿ ಚಾಲಕ ಹೇಳಿದ್ದಾನೆ.
ಅಕ್ರಮ ಕಟ್ಟಡಗಳ ತೆರವು ಮತ್ತು ಒತ್ತುವರಿ ತೆರವುಗೊಳಿಸಲು 9 ಜೆಸಿಬಿಗಳು ಆಗಮಿಸಿದ್ದವು. ಪೊಲೀಸ್ ಭದ್ರತೆಯಲ್ಲಿ ತೆರವು ಕಾರ್ಯಾಚರಣೆ ಆರಂಭವಾಗಿತ್ತು. ಆದರೆ ಸುಪ್ರೀಂಕೋರ್ಟ್ ಕಾರ್ಯಾಚರಣೆಗೆ ತಡೆ ನೀಡಿದ ಹಿನ್ನಲೆಯಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಾರೆ.
ಜಹಾಂಗಿರ್‌ಪುರಿಯಲ್ಲಿಅಕ್ರಮ ಕಟ್ಟಡಗಳ ತೆರವು ಕಾರ್ಯ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ತಡೆ ನೀಡಿದೆ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸೂಚನೆ ಕೊಟ್ಟಿದೆ. ಕೋರ್ಟ್ ಗುರುವಾರ ಮತ್ತೆ ಅರ್ಜಿಯ ವಿಚಾರಣೆಯನ್ನು ನಡೆಸಲಿದೆ. ಅಲ್ಲಿಯ ತನಕ ಕಾರ್ಯಾಚರಣೆಗೆ ತಡೆ ಬಿದ್ದಿದೆ.
ಸುಪ್ರೀಂಕೋರ್ಟ್ ಆದೇಶದ ಬಳಿಕ ಮಾತನಾಡಿದ ದೆಹಲಿ ಮೇಯರ್ ರಾಜಾ ಇಕ್ಬಾಲ್ ಸಿಂಗ್, "ನಾವು ಕೋರ್ಟ್ ಆದೇಶವನ್ನು ಗೌರವಿಸುತ್ತೇವೆ. ಗುರುವಾರ ಅರ್ಜಿಯ ವಿಚಾರಣೆ ನಡೆಯಲಿದೆ" ಎಂದು ಹೇಳಿದರು.
#WATCH North Delhi Municipal Corporation conducts anti-encroachment drive in Jahangirpuri in Delhi
— ANI (@ANI) April 20, 2022
The civic body has asked for 400 personnel from Delhi Police to maintain the law & order situation during the drive in the area pic.twitter.com/KViPfwPEqr












Click it and Unblock the Notifications