ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಶೀಘ್ರದಲ್ಲೇ ಮತ್ತೊಂದು ಚಾಲಕ ರಹಿತ ಮೆಟ್ರೋ ಸೇವೆ ಆರಂಭ

|
Google Oneindia Kannada News

ನವದೆಹಲಿ, ನವೆಂಬರ್ 15: 2020 ರ ಡಿಸೆಂಬರ್‌ನಲ್ಲಿ ದೇಶದ ಮೊಟ್ಟ ಮೊದಲ ಚಾಲಕ ರಹಿತ ಮೆಟ್ರೋ ಸೇವೆಯನ್ನು ಜಾರಿಗೆ ತಂದ ದೆಹಲಿ ಮೆಟ್ರೋ ರೈಲು ನಿಗಮ ಈಗ ಮತ್ತೊಂದು ಮಾರ್ಗದಲ್ಲೂ ಚಾಲಕ ರಹಿತ ರೈಲು ಸೇವೆಯನ್ನು ಪರಿಚಯಿಸಲು ಸಿದ್ಧವಾಗಿದೆ. ದೆಹಲಿ ಮೆಟ್ರೋ ರೈಲು ನಿಗಮವು (ಡಿಎಂಆರ್‌ಸಿ) 2021ರ ಅಂತ್ಯದ ವೇಳೆಗೆ ಪಿಂಕ್ ರೈಲಿನಲ್ಲಿ 'ಚಾಲಕ ರಹಿತ' ರೈಲು ಸೇವೆಗಳನ್ನು ಪರಿಚಯಿಸುವ ಸಾಧ್ಯತೆಯಿದೆ. ಪ್ರಸ್ತುತ ದೆಹಲಿ ಮೆಟ್ರೋ ರೈಲು ನಿಗಮ(ಡಿಎಂಆರ್‌ಸಿ) 37 ಕಿಮೀ ಮೆಜೆಂಟಾ ಲೈನ್‌ನಲ್ಲಿ ಚಾಲಕ ರಹಿತ ಮೆಟ್ರೋ ನಿಲ್ದಾಣವನ್ನು ಒಳಗೊಂಡಿದೆ.

ಆದರೆ ಪಿಂಕ್ ಲಿಂಕ್‌ನಲ್ಲಿ ಚಾಲಕ ರಹಿತ ಕಾರ್ಯಾಚರಣೆಯನ್ನು ಪರಿಚಯಿಸುವುದರೊಂದಿಗೆ, ಭಾಗವು ವಿಶ್ವದ ಅತಿ ಉದ್ದದ ಮೆಟ್ರೋ ನೆಟ್‌ವರ್ಕ್ ಆಗಲಿದೆ. ಟೈಮ್ಸ್ ಆಫ್ ಇಂಡಿಯಾ (TOI) ಪ್ರಕಟಿಸಿದ ವರದಿಯ ಪ್ರಕಾರ, DMRC ಅಧಿಕಾರಿಗಳು ಸಿಗ್ನಲಿಂಗ್ ಕೆಲಸವನ್ನು ಪೂರ್ಣಗೊಳಿಸಿದ್ದಾರೆ ಮತ್ತು ಮೆಟ್ರೋ ರೈಲು ಸುರಕ್ಷತೆ (CMRS)ಯ ಬಗ್ಗೆ ಆಯುಕ್ತರು ಈ ವಾರದ ವೇಳೆಗೆ ಗಮನವಾಗುವ ರೈಲಿನ (UTO) ಕಾರಿಡಾರ್ ಸುರಕ್ಷತೆಯನ್ನು ಪರಿಶೀಲಿಸುತ್ತಾರೆ.

ಮೆಟ್ರೋ ರೈಲು ಸುರಕ್ಷತಾ ಆಯುಕ್ತರಿಂದ ಸುರಕ್ಷತಾ ಕ್ರಮದ ನಂತರವೇ ರೈಲು ಕಾರ್ಯಾಚರಣೆ (UTO) ಆರಂಭವಾಗಿತ್ತದೆ. ಇದು ವರ್ಷದ ಅಂತ್ಯದ ವೇಳೆಗೆ ಪ್ರಾರಂಭವಾಗುವ ನಿರೀಕ್ಷೆಯಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ 58.4 ಕಿಮೀ ಉದ್ದದ ಗುಲಾಬಿ ಮಾರ್ಗದಲ್ಲಿ ಚಾಲಕ ರಹಿತ ರೈಲು ಸಂಚಾರ ಆರಂಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

Another driverless metro service to be launched soon in Delhi

ಪಿಂಕ್ ಲೈನ್‌ನಲ್ಲಿ ಚಾಲಕರಹಿತ ರೈಲು ಕಾರ್ಯಾಚರಣೆ ಪ್ರಾರಂಭವಾದ ನಂತರ DMRC ಯ ಒಟ್ಟು ಚಾಲಕರಹಿತ ದೂರವು ಸುಮಾರು 96 ಕಿ.ಮೀ. ಆಗಲಿದೆ. ಇದಕ್ಕೂ ಮೊದಲು, ದೇಶದ ಮೊದಲ ಚಾಲಕ ರಹಿತ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು 2020 ರ ಡಿಸೆಂಬರ್ 28 ರಂದು 37 ಕಿಮೀ ಮೆಜೆಂಟಾ ಲೈನ್‌ನಲ್ಲಿ (ಜನಕಪುರಿ ಪಶ್ಚಿಮದಿಂದ ಬೊಟಾನಿಕಲ್ ಗಾರ್ಡನ್) ಸೇವೆಗೆ ಚಾಲನೆ ನೀಡಿದರು. 37-ಕಿಮೀ ಮೆಜೆಂಟಾ ಲೈನ್ ಜನಕಪುರಿ ಪಶ್ಚಿಮ ಮತ್ತು ಬೊಟಾನಿಕಲ್ ಗಾರ್ಡನ್ ಮೆಟ್ರೋ ನಿಲ್ದಾಣಗಳನ್ನು ಸಂಪರ್ಕಿಸುತ್ತದೆ.

ದೆಹಲಿ ಮೆಟ್ರೋ ಚಾಲಕ ರಹಿತ ರೈಲನ್ನು ಆರಂಭದಲ್ಲಿ ದ.ಕೊರಿಯಾದಿಂದ ಆಮದು ಮಾಡಿದೆ. ಅಲ್ಲಿನ ಹುಂಡೈ ರೊಟೊಮ್‌ ಕಂಪನಿ ಚಾಲಕ ರಹಿತ ರೈಲಿನ ವಿನ್ಯಾಸ, ತಂತ್ರಜ್ಞಾನಗಳನ್ನು ತಯಾರು ಮಾಡಿದೆ. ಕಳೆದ ವರ್ಷವೇ ಗುಜರಾತಿನ ಮುಂದ್ರಾ ಬಂದರಿನ ಮೂಲಕ 6 ರೈಲ್ವೇ ಕೋಚ್‌ಗಳು ದೆಹಲಿಗೆ ಬಂದು ತಲುಪಿದ್ದವು. ಒಪ್ಪಂದ ಪ್ರಕಾರ ಒಟ್ಟು 20 ರೈಲುಗಳನ್ನು ಹ್ಯುಂಡೈ ಕಂಪನಿ ತಯಾರು ಮಾಡಿದೆ. ಸುಮಾರು 60 ರೈಲುಗಳನ್ನು ಬೆಂಗಳೂರು ಮೂಲದ ಬಿಇಎಮ್‌ಎಲ್‌ ತಯಾರು ಮಾಡಲಿದೆ.

Another driverless metro service to be launched soon in Delhi

ವಿಮಾನ ನಿಲ್ದಾಣ ಎಕ್ಸ್ ಪ್ರೆಸ್ ಮಾರ್ಗದಲ್ಲಿ ಸಂಪೂರ್ಣ ಕಾರ್ಯಾಚರಣೆಗೆ ಬರುವ ರಾಷ್ಟ್ರೀಯ ಸಮಾನ ಚಲನಶೀಲತೆ ಕಾರ್ಡ್ ಸೇವೆಯು ದೇಶದ ಯಾವುದೇ ಭಾಗದಲ್ಲಿ ನೀಡಲಾಗಿರುವ ರೂಪೇ ಡೆಬಿಟ್ ಕಾರ್ಡ್ ಹೊಂದಿರುವವರಿಗೆ ವಿಮಾನ ನಿಲ್ದಾಣ ಎಕ್ಸ್ ಪ್ರೆಸ್ ಮಾರ್ಗದಲ್ಲಿ ಆ ಕಾರ್ಡ್ ಬಳಸಿ ಸಂಚರಿಸಲು ಅವಕಾಶ ಕಲ್ಪಿಸುತ್ತದೆ. 2014ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಕನಸನ್ನು ಮೊದಲ ಮೆಟ್ರೋ ರೈಲು ಸೇವೆಯ ಮೂಲಕ ನಮ್ಮ ಸರ್ಕಾರ ನನಸಾಗಿಸಿತು. ಅಂದು 5 ನಗರಗಳಲ್ಲಿ ಆರಂಭವಾದ ಮೆಟ್ರೋ ಸೇವೆ ಇಂದು 18 ನಗರಗಳಿಗೆ ವಿಸ್ತರಿಸಿದೆ. 2025ರ ವೇಳೆಗೆ 25 ನಗರಗಳಿಗೆ ವಿಸ್ತರಿಸಲಿದೆ ಎಂದು ಮೋದಿ ಹೇಳಿದರು.

Another driverless metro service to be launched soon in Delhi

ಇತರ ಮೆಟ್ರೋ ರೈಲುಗಳಿಗಿಂತಲೂ ಚಾಲಕ ರಹಿತ ರೈಲು ಹೆಚ್ಚು ಪರಿಸರ ಸ್ನೇಹಿಯಾಗಿದೆ. ಶೇ.10ರಷ್ಟು ಕಡಿಮೆ ವಿದ್ಯುತ್‌ ಬಳಕೆ ಮಾಡುತ್ತಿದೆ. ಜೊತೆಗೆ ವೇಗವೂ ಹೆಚ್ಚು. ಗರಿಷ್ಠ 95 ಕಿ.ಮೀ. ವೇಗದ ವರೆಗೆ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದ್ದು, ದೆಹಲಿ ಮೆಟ್ರೋ ವೇಗವನ್ನು ಗರಿಷ್ಠ 85 ಕಿ.ಮೀ.ಗೆ ನಿಗದಿ ಮಾಡಿದೆ.

English summary
The Delhi Metro Rail Corporation(DMRC) is likely to introduce the ‘driverless’ train services on its longest corridor Pink City by the end of the year 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X