ಆರು ವರ್ಷದ ಬಾಲಕನ ಪ್ರಾಣ ಕಿತ್ತುಕೊಂಡಿತು ಡೆಂಗ್ಯೂ
ನವದೆಹಲಿ, ಸೆಪ್ಟೆಂಬರ್, 15 : ಕಳೆದ ಕೆಲವು ದಿನಗಳ ಹಿಂದೆ ಅವಿನಾಶ್ ಎಂಬ ಮಗು ಡೆಂಗ್ಯೂ ತುತ್ತಾಗಿ ಸಾವನ್ನಪ್ಪಿದ್ದ. ಈಗ ಅದೇ ಕುಟುಂಬಕ್ಕೆ ಸೇರಿದ ಮತ್ತೊಂದು ದಂಪತಿಗಳ ಮಗ ಡೆಂಗ್ಯೂ ಜ್ವರದಿಂದಲೇ ಸಾವನಪ್ಪಿದ ಹೃದಯ ವಿದ್ರಾವಕ ಘಟನೆ ನಗರದಲ್ಲಿ ನಡೆದಿದೆ.
ದೆಹಲಿ ದಕ್ಷಿಣ ವಲಯದ ಶ್ರೀನಿವಾಸಪುರಿಯಲ್ಲಿರುವ ಮನೋಜ್ ಶರ್ಮ ಅವರ ಆರು ವರ್ಷದ ಬಾಲಕ ಅಮನ್ ಎಂಬಾತ ಡೆಂಗ್ಯೂ ಜ್ವರಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾನೆ. ಕಳೆದ ಕೆಲವು ದಿನದ ಹಿಂದೆ ಅದೇ ಕುಟುಂಬದ ಲಕ್ಷ್ಮೀಕಾಂತ್ ಮತ್ತು ಬಬೀತಾ ದಂಪತಿಗಳ ಮಗ ಅವಿನಾಶ್ ಮೃತಪಟ್ಟಿದ್ದನು.[ಮಗನ ಸಾವು ತಾಳದೆ ದಂಪತಿಗಳಿಬ್ಬರ ಆತ್ಮಹತ್ಯೆ]

ಡೆಂಗ್ಯೂ ಜ್ವರಕ್ಕೆ ತುತ್ತಾದ ಅಮನ್ ನನ್ನು ಐದು ಬಾರಿ ಶ್ರೀನಿವಾಸಪುರಿಯ ಸಫ್ದರ್ ಜಂಗ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋದಾಗ ವೈದ್ಯರು ಡೆಂಗ್ಯೂ ಇಲ್ಲ ಎಂದಿದ್ದರು. ಆದರೆ ಶುಕ್ರವಾರ ಅಮನ್ ಸ್ಥಿತಿ ತೀರಾ ಗಂಭೀರವಾಗಿತ್ತು.
ಮಗನ ಸ್ಥಿತಿಯಿಂದ ಕಂಗಾಲಾದ ಪೋಷಕರು ಜೀವನ್, ಮ್ಯಾಕ್ಸ್ ಸಾಕೇತ್ ಮೂಲಚಂದ್ರ ಆಸ್ಪತ್ರೆಯಲ್ಲಿ ದಾಖಲಿಸಲು ನೋಡಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇರದ ಪರಿಣಾಮ ಪುನಃ ಸಾಫ್ ಡಾರ್ಜಂಗ್ ಆಸ್ಪತ್ರೆಗೆ ಕರೆತಂದು ಎರಡು ಮೂರು ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ.
ಆಗ ವೈದ್ಯರು ಅಮನ್ ನ ಪರಿಸ್ಥಿತಿಯಲ್ಲಿ ಕೊಂಚವೂ ಚೇತರಿಕೆ ಕಾಣದ ಪರಿಣಾಮ ಓಕ್ಲಾದ ಹೋಲಿ ಫ್ಯಾಮಿಲೀ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದ್ದಾರೆ. ಮಗುವನ್ನು ಮತ್ತೊಂದು ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಕೊನೆ ಉಸಿರೆಳೆದಿತ್ತು. ಇದರಿಂದ ನೊಂದ ಅಮನ್ ನ ಪೊಷಕರು ಸಫ್ದರ್ ಜಂಗ್ ಆಸ್ಪತ್ರೆ ವಿರುದ್ಧ ದೂರು ದಾಖಲಿಸಿದ್ದಾರೆ.[ಸೊಳ್ಳೆ ಒದ್ದೋಡಿಸುವ ಗಿಡಗಳ ನೆಟ್ಟ ಹಿರಿಯ ನಾಗರಿಕರು]
ಸಾಫ್ ಡಾರ್ಜಂಗ್ ಆಸ್ಪತ್ರೆ ವೈದ್ಯರು ಅಮನ್ ಗೆ ಡೆಂಗ್ಯೂ ಇಲ್ಲವೆಂದು ಸುಳ್ಳು ಹೇಳಿದ್ದಾರೆ. ಅಲ್ಲದೇ ಒಂದು ದಿನ ಸಂಪೂರ್ಣ ಯಾವುದೇ ಚಿಕಿತ್ಸೆ ನೀಡಲಿಲ್ಲ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಕಳೆದ ಕೆಲವು ದಿನದ ಹಿಂದೆ 7 ವರ್ಷದ ಅವಿನಾಶ್ ಎಂಬ ಮಗು ಡೆಂಗ್ಯೂಗೆ ತುತ್ತಾಗಿ ಸಾವನ್ನಪ್ಪಿತ್ತು. ಮಗನ ಸಾವಿನ ನೋವನ್ನು ಅರಗಿಸಿಕೊಳ್ಳದ ಪೋಷಕರು ಆತ್ಮಹತ್ಯೆ ಮಾಡಿಕೊಂಡಿದ್ದರು.
ಕಳೆದ ಒಂದು ವಾರದಲ್ಲಿ ಡೆಂಗ್ಯೂ ಜ್ವರಕ್ಕೆ ಸಂಬಂಧಿಸಿದಂತೆ 613 ಪ್ರಕರಣಗಳು ಬೆಳಕಿಗೆ ಬಂದಿದ್ದು, 1,872 ರೋಗಿಗಳು ಡೆಂಗ್ಯೂನಿಂದ ನರಳುತ್ತಿರುವುದು ಸೆಪ್ಟೆಂಬರ್ 12ರ ವರದಿಯಿಂದ ತಿಳಿದು ಬಂದಿದೆ.












Click it and Unblock the Notifications