Get Updates
Get notified of breaking news, exclusive insights, and must-see stories!

Breaking; ಅಜಿತ್ ಧೋವಲ್ ಮನೆಗೆ ನುಗ್ಗಲು ಯತ್ನಿಸಿದ ವ್ಯಕ್ತಿ

ನವದೆಹಲಿ, ಫೆಬ್ರವರಿ 16; ಕಾರಿನಲ್ಲಿ ಅಜಿತ್ ದೋವಲ್ ನಿವಾಸಕ್ಕೆ ನುಗ್ಗಲು ಪ್ರಯತ್ನ ನಡೆಸಿದ ವ್ಯಕ್ತಿಯನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಪರಿಚಿತ ವ್ಯಕ್ತಿಯ ವಿಚಾರಣೆಯನ್ನು ಸಿಬ್ಬಂದಿಗಳು ನಡೆಸುತ್ತಿದ್ದಾರೆ.

ಬುಧವಾರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ದೆಹಲಿಯ ನಿವಾಸಕ್ಕೆ ಕಾರಿನಲ್ಲಿ ನುಗ್ಗಲು ಅಪರಿಚಿತ ವ್ಯಕ್ತಿ ಪ್ರಯತ್ನ ನಡೆಸಿದ್ದಾನೆ. ಆಗ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಸಿಬ್ಬಂದಿ ಆತನನ್ನು ತಡೆದಿದ್ದಾರೆ.

ವೇಗವಾಗಿ ಕಾರಿನಲ್ಲಿ ಬಂದು ಬುಧವಾರ ಬೆಳಗ್ಗೆ ಅಜಿತ್ ದೋವಲ್ ನಿವಾಸಕ್ಕೆ ನುಗ್ಗಲು ವ್ಯಕ್ತಿ ಪ್ರಯತ್ನ ಮಾಡಿದ್ದಾನೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್‌ಗೆ ಸಚಿವರ ಶ್ರೇಣಿಯ ಭದ್ರತೆ ಇದ್ದು, ದೆಹಲಿ ಪೊಲೀಸರು ಅವರ ಮನೆ ಭದ್ರತೆಗೆ ನಿಯೋಜನೆಗೊಂಡಿದ್ದಾರೆ.

An Unknown Person Tries To Enter NSA Ajit Dovals Residence

ಅಪರಿಚಿತ ವ್ಯಕ್ತಿಯನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೆಹಲಿ ಪೊಲೀಸ್ ವಿಶೇಷ ವಿಭಾಗದ ಸಿಬ್ಬಂದಿಗಳು ವ್ಯಕ್ತಿಯ ವಿಚಾರಣೆ ನಡೆಸುತ್ತಿದ್ದಾರೆ. ಯಾರ ಕಾರಿನಲ್ಲಿ ಬಂದಿದ್ದ?, ನಿವಾಸಕ್ಕೆ ನುಗ್ಗಲು ಪ್ರಯತ್ನ ನಡೆಸಿದ್ದು ಏಕೆ? ಎಂದು ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ.

ದೆಹಲಿ ಪೊಲೀಸರಿಂದ ಭದ್ರತಾ ವೈಫಲ್ಯವಾಗಿದೆಯೇ? ಎಂದು ಸಹ ಪೊಲೀಸರು ಮಾಹಿತಿ ಸಂಗ್ರಹ ಮಾಡುತ್ತಿದ್ದು, ದೋವಲ್ ಮನೆಯ ಭದ್ರತೆಗೆ ನಿಯೋಜನೆಗೊಂಡಿದ್ದ ಸಿಬ್ಬಂದಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+