ಸಂಪರ್ಕ ಸಮರ್ಥನ ಅಭಿಯಾನಕ್ಕೆ ಚಾಲನೆ ನೀಡಲಿರುವ ಅಮಿತ್ ಶಾ

Recommended Video

      ಸಂಪರ್ಕ್ ಸಮರ್ಥನ್ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ ಅಮಿತ್ ಶಾ | Oneindia Kannada

      ನವದೆಹಲಿ, ಮೇ 29: ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದ ಎನ್ ಡಿಎ ಮೈತ್ರಿ ಸರ್ಕಾರದ ಸಾಧನೆಗಳನ್ನು ಜನರಿಗೆ ಮನದಟ್ಟುಮಾಡುವ ಸಲುವಾಗಿ ಸಮರ್ಥನೆಗಾಗಿ ಸಂಪರ್ಕ್ ಎಂಬ ಅಭಿಯಾನವನ್ನು ಆರಂಭಿಸಲು ಬಿಜೆಪಿ ನಿರ್ಧರಿಸಿದೆ.

      ಈ ಅಭಿಯಾನಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಚಾಲನೆ ನೀಡಲಿದ್ದು, ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ದಲ್ಬಿರ್ ಸಿಂಗ್ ಅವರ ಮನೆಯಿಂದ ಈ ಅಭಿಯಾನ ಆರಂಭವಾಗಲಿದೆ. ಅಮಿತ್ ಶಾ ಅವರು ಖುದ್ದು 50 ಕ್ಕೂ ಹೆಚ್ಚು ಜನರನ್ನು ಭೇಟಿಯಾಗಿ ಬಿಜೆಪಿ ಸರ್ಕಾರದ ಸಾಧನೆಗಳನ್ನು ತಿಳಿಸಿ, ಅರಿವು ಮೂಡಿಸಲಿದ್ದಾರೆ.

      ಅಂತೆಯೇ ಈ ಅಭಿಯಾನದ ಪ್ರಕಾರ ಬಿಜೆಪಿಯ ಪ್ರತಿ ಕಾರ್ಯಕರ್ತನೂ ಕನಿಷ್ಠ ಹತ್ತು ಜನರಿಗೆ ಸರ್ಕಾರದ ಸಾಧನೆಯ ಕುರಿತು ಅರಿವು ಮೂಡಿಸುವಂತೆ ಟಾಸ್ಕ್ ನೀಡಲಾಗಿದೆ. ನಮೋ app ನಲ್ಲಿ ಸಹ ಸಮರ್ಥನೆಗಾಗಿ ಸಂಪರ್ಕ್ ದ ಕುರಿತು ಕೆಲವು ಮಾಹಿತಿಗಳನ್ನು ನೀಡಲಾಗಿದೆ.

      Amit Shah to launch Sampark for Samarthan campaign

      ಮೇ 27 ರಂದು ಬಿಜೆಪಿ ನೇತ್ರತ್ವದ ಎನ್ ಡಿಎ ಮೈತ್ರಿ ಸರ್ಕಾರ, ನಾಲ್ಕು ವರ್ಷಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಸಾಧನೆಗಳ ಕುರಿತು ಜನರಿಗೆ ತಿಳಿಸುವ ಕಾರ್ಯ ನಡೆಯುತ್ತಿದೆ. 2019 ರಲ್ಲಿ ಲೋಕಸಭಾ ಚುನಾವಣೆಯೂ ಇರುವುದರಿಂದ ಈ ಕಾರ್ಯವನ್ನು ಬಿಜೆಪಿನಾಯಕರು ಮುತುವರ್ಜಿಯಿಂದ ಮಾಡುತ್ತಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+