ಅಮಿತ್ ಶಾಗೆ ಮತ್ತೆ ಅಧ್ಯಕ್ಷ ಪಟ್ಟ, ಸಂಭ್ರಮದಲ್ಲಿ ಅಡ್ವಾಣಿ ಪಾಲ್ಗೊಂಡಿಲ್ಲ!

Posted By:
Subscribe to Oneindia Kannada

ನವದೆಹಲಿ, ಜ. 24: ಬಿಜೆಪಿ ಕಚೇರಿಯಲ್ಲಿ ಸಂಭ್ರಮದ ವಾತಾವರಣ ಕಂಡು ಬಂದಿದ್ದು, ನಿರೀಕ್ಷೆಯಂತೆ ಅಮಿತ್ ಶಾ ಅವರು ಮತ್ತೊಂದು ಅವಧಿಗೆ ಭಾರತೀಯ ಜನತಾ ಪಕ್ಷ(ಬಿಜೆಪಿ) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹಿರಿಯ ನಾಯಕರಾದ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಅವರ ಅನುಪಸ್ಥಿತಿ ಮಾತ್ರ ಎದ್ದು ಕಾಣುತ್ತಿತ್ತು.[ದಕ್ಷಿಣ ಭಾರತದಲ್ಲಿ ಕಮಲ ಅರಳಿಸಿ: ಅಮಿತ್ ಶಾ]

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಿರಿಯ ಬಿಜೆಪಿ ನಾಯಕರು ಅಮಿತ್ ಶಾ ಅವರ ಹೆಸರನ್ನು ಅಧ್ಯಕ್ಷ ಸ್ಥಾನಕ್ಕೆ ಪ್ರಸ್ತಾಪಿಸಿದರು. ಜೆಪಿ ನಡ್ಡಾ, ಅನಂತ್ ಕುಮಾರ್, ಎಂ ವೆಂಕಯ್ಯ ನಾಯ್ಡು, ವಸುಂಧರಾ ರಾಜೇ, ರಘುಬರ್ ದಾಸ್, ಶಿವರಾಜ್ ಸಿಂಗ್ ಚೌಹಾನ್ ಮತ್ತಿತ್ತರರು ಅನುಮೋದನೆಗೊಳಿಸಿದರು.

Amit Shah re-elected BJP president

51ವರ್ಷ ವಯಸ್ಸಿನ ಅಮಿತ್ ಶಾ ಅವರು ಮೋದಿ ಅವರ ಬಲಗೈ ಬಂಟರಾಗಿ ಬಿಜೆಪಿ ಯನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು. ರಾಜನಾಥ್ ಸಿಂಗ್ ರಿಂದ ತೆರವಾದ ಸ್ಥಾನಕ್ಕೆ ಆಯ್ಕೆಯಾದ ಶಾ ಅವರು ಅಧ್ಯಕ್ಷರಾಗಿ ಜುಲೈ 2014ರಿಂದ ಅಧಿಕಾರ ನಡೆಸುತ್ತಾ ಬಂದಿದೆ. ಈಗ ಪೂರ್ಣಾವಧಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.[ಯಡಿಯೂರಪ್ಪ ರಾಜ್ಯಾಧ್ಯಕ್ಷರಾಗಲಿ, ಶಾಗೆ ಆಗ್ರಹ]

ಮಹಾರಾಷ್ಟ್ರ, ಜಾರ್ಖಂಡ್, ಹರ್ಯಾಣ, ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾದ ಅಮಿತ್ ಶಾ ಅವರು ದೆಹಲಿ ಹಾಗೂ ಬಿಹಾರದಲ್ಲಿ ಸೋಲು ಕಂಡರು. ಈ ವರ್ಷದಲ್ಲಿ ಸುಮಾರು ಐದು ರಾಜ್ಯಗಳ ಚುನಾವಣೆಗೆ ಬಿಜೆಪಿ ಸಿದ್ಧವಾಗಬೇಕಿದೆ.[ಬಿಜೆಪಿ ಈಗ ವಿಶ್ವದಲ್ಲೇ ನಂಬರ್ 1]

ಇದರ ಜೊತೆಗೆ 2019ರ ಲೋಕಸಭೆ ಚುನಾವಣೆಯನ್ನು ಮೋದಿ ನೇತೃತ್ವದಲ್ಲಿ ಎದುರಿಸಬೇಕಿದೆ. ಜನವರಿ 28ರಂದು ಅಮಿತ್ ಶಾ ಅಧ್ಯಕ್ಷತೆಯಲ್ಲಿ ಬಿಜೆಪಿ ಸಂಸದೀಯ ಸಭೆ ನಡೆಯಲಿದೆ. (ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BJP chief Amit Shah became the party President again today. Top party leaders led by Prime Minister Narendra Modi, a bevy of Union ministers and chief ministers of BJP-ruled states proposed his name for the party president’s post during the nomination process.
Please Wait while comments are loading...