ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣ: 2ನೇ ಸ್ಥಾನದಲ್ಲಿ ದೆಹಲಿ

ದೆಹಲಿ ಮೇ 3: ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣ ಈ ವರ್ಷದ ಮಾರ್ಚ್‌ನಲ್ಲಿ ವಿಶ್ವದ ಎರಡನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದೆ ಎಂದು ಅಧಿಕೃತ ಏರ್‌ಲೈನ್ ಗೈಡ್ (ಒಎಜಿ) ವರದಿ ತಿಳಿಸಿದೆ. ಇದು ಪ್ರಯಾಣ ಮತ್ತು ವಾಯುಯಾನ ಕ್ಷೇತ್ರಗಳ ನಿಧಾನಗತಿಯ ಚೇತರಿಕೆ ಸೂಚಿಸುತ್ತದೆ. ಜಾಗತಿಕ ಟ್ರಾವೆಲ್ ಡೇಟಾದಲ್ಲಿ ಯುನೈಟೆಡ್ ಸ್ಟೇಟ್ಸ್‌ನ ಅಟ್ಲಾಂಟಾದಲ್ಲಿರುವ ಹಾರ್ಟ್ಸ್‌ಫೀಲ್ಡ್-ಜಾಕ್ಸನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ವಿಶ್ವದ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಮೊದಲನೇ ಸ್ಥಾನದಲ್ಲಿದೆ. ಫೆಬ್ರವರಿಯಲ್ಲಿ ದೆಹಲಿಯು ಅಟ್ಲಾಂಟಾ ಮತ್ತು ದುಬೈನ ನಂತರ ಮೂರನೇ ಸ್ಥಾನದಲ್ಲಿತ್ತು. ಆದರೀಗ ಮಾರ್ಚ್‌ನಲ್ಲಿ ದೆಹಲಿ ಎರಡನೇ ಸ್ಥಾನಕ್ಕೆ ಬಂದಿದೆ.

OAG ದೇಶೀಯ ಮತ್ತು ಅಂತರಾಷ್ಟ್ರೀಯ ವಲಯಗಳಲ್ಲಿ ವಿಮಾನ ನಿಲ್ದಾಣದಲ್ಲಿ ಬುಕ್ ಮಾಡಲಾದ ಆಸನಗಳ ಸಂಖ್ಯೆಯನ್ನು ಆಧರಿಸಿ ಡೇಟಾವನ್ನು ಲೆಕ್ಕಾಚಾರ ಮಾಡುತ್ತದೆ. ಅದರ ವರದಿಯ ಪ್ರಕಾರ, ದೆಹಲಿ ವಿಮಾನ ನಿಲ್ದಾಣದಿಂದ ಈ ಮಾರ್ಚ್‌ನಲ್ಲಿ 3.61 ಮಿಲಿಯನ್ ಆಸನಗಳನ್ನು ಕಾಯ್ದಿರಿಸಲಾಗಿದೆ. ದುಬೈ ವಿಮಾನ ನಿಲ್ದಾಣದ ವಿಮಾನಗಳಲ್ಲಿ 3.55 ಮಿಲಿಯನ್ ಆಸನಗಳನ್ನು ಕಾಯ್ದಿರಿಸಲಾಗಿದ್ದರೆ, ಅಟ್ಲಾಂಟಾ ವಿಮಾನ ನಿಲ್ದಾಣದ ವಿಮಾನಗಳಲ್ಲಿ 4.42 ಮಿಲಿಯನ್ ಆಸನಗಳನ್ನು ಬುಕ್ ಮಾಡಲಾಗಿದೆ.

ಈ ಅವಧಿಯಲ್ಲಿ ನಾಲ್ಕನೇ ಜನನಿಬಿಡ ವಿಮಾನ ನಿಲ್ದಾಣವೆಂದರೆ ಲಂಡನ್‌ನ ಹೀಥ್ರೂ (3.51 ಮಿಲಿಯನ್ ಆಸನಗಳು) ಮತ್ತು ಐದನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣ ಡಲ್ಲಾಸ್ ಫೋರ್ಟ್ ವರ್ತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ (3.46 ಮಿಲಿಯನ್ ಆಸನಗಳು)ಎಂದು ಒಎಜಿ ಹೇಳಿದೆ.

Delhi airport was world’s 2nd busiest in March- OAG

ಇದೆಲ್ಲದಕ್ಕೂ ಹೋಲಿಸಿದರೆ ಸಾಂಕ್ರಾಮಿಕ ರೋಗಕ್ಕೆ ಮುಂಚಿತವಾಗಿ ದೆಹಲಿ ವಿಮಾನ ನಿಲ್ದಾಣ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣ ಪಟ್ಟಿಯಲ್ಲಿ ಏಪ್ರಿಲ್ 2019 ರಲ್ಲಿ 23ನೇ ಸ್ಥಾನದಲ್ಲಿತ್ತು. ಕೊರೊನಾ ಚೇತರಿಕೆಯ ಬಳಿಕ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ.

ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (AAI) ದತ್ತಾಂಶ ದೆಹಲಿ ವಿಮಾನ ನಿಲ್ದಾಣದಲ್ಲಿ ಅಂತರರಾಷ್ಟ್ರೀಯ ದಟ್ಟಣೆಯು ಫೆಬ್ರವರಿ 2022 ರಲ್ಲಿ 722,431 ಪ್ರಯಾಣಿಕರಿಂದ ಮಾರ್ಚ್ 2022 ರಲ್ಲಿ 983,728 ಪ್ರಯಾಣಿಕರಿಗೆ ಏರಿಕೆಯಾಗಿದೆ ಎಂದು ತೋರಿಸುತ್ತದೆ. ಎಲ್ಲಾ ಕ್ಷೇತ್ರಗಳ ಪುನರಾರಂಭದ ನಂತರ ಮಾರ್ಚ್ 27, 2022 ರಿಂದ ಅಂತರಾಷ್ಟ್ರೀಯ ವಿಮಾನಗಳಲ್ಲಿ ಇದು ಇನ್ನೂ ದೊಡ್ಡ ಜಿಗಿತವನ್ನು ಕಂಡಿದೆ.

Delhi airport was world’s 2nd busiest in March- OAG

ದೇಶೀಯ ದಟ್ಟಣೆಗೆ ಸಂಬಂಧಿಸಿದಂತೆ, ಫೆಬ್ರವರಿಯಲ್ಲಿ ದೆಹಲಿ ವಿಮಾನ ನಿಲ್ದಾಣದಲ್ಲಿ 3,066,121 ಪ್ರಯಾಣಿಕರನ್ನು ನಿರ್ವಹಿಸಲಾಗಿದೆ ಎಂದು AAI ಡೇಟಾ ತೋರಿಸಿದೆ, ಇದು ಮಾರ್ಚ್‌ನಲ್ಲಿ 4,092,583 ಏರಿಕೆಯಾಗಿದೆ.

"ಕೋವಿಡ್ -19 ಸಾಂಕ್ರಾಮಿಕ ಕಾರಣದಿಂದ ವಿಮಾನ ಹಾರಾಟ ನಿಷೇಧಗಳು ಪುನರಾಂಭಗೊಳ್ಳುತ್ತಿದ್ದವು. ಈ ಪ್ರಯಾಣದ ನಿರ್ಬಂಧಗಳು ಸತತ ಎರಡು ವರ್ಷಗಳಿಂದ ಪ್ರಯಾಣ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಆದರೆ ಈಗ, ಪ್ರಪಂಚದಾದ್ಯಂತ ಲಸಿಕೆ ಹಾಕಿದ ಜನರ ಸಂಖ್ಯೆಯಲ್ಲಿ ಹೆಚ್ಚಳದೊಂದಿಗೆ, ಸರ್ಕಾರಗಳು ಪ್ರಯಾಣದ ನಿರ್ಬಂಧಗಳನ್ನು ಸಡಿಲಿಸುತ್ತಿವೆ "ಎಂದು ದೆಹಲಿ ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ (DIAL) ಸಿಇಒ ವಿದೇ ಕುಮಾರ್ ಜೈಪುರಿಯಾರ್ ಹೇಳಿದರು. ಭಾರತ ಸಂಪೂರ್ಣವಾಗಿ ವ್ಯಾಕ್ಸಿನೇಟೆಡ್ ಅಂತರಾಷ್ಟ್ರೀಯ ಪ್ರಯಾಣಿಕರನ್ನು ದೇಶಕ್ಕೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿತು, ಇದು ಉದ್ಯಮಕ್ಕೆ ಮತ್ತಷ್ಟು ಉತ್ತೇಜನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+