ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರ ನೆಲೆ ಮೇಲೆ ದಾಳಿ : ಮೋದಿಯಿಂದ ತುರ್ತು ಸಂಪುಟ ಸಭೆ

|
Google Oneindia Kannada News

Recommended Video

Pulwama : ಮೋದಿಯಿಂದ ತುರ್ತು ಸಂಪುಟ ಸಭೆ | Oneindia Kannada

ನವದೆಹಲಿ, ಫೆಬ್ರವರಿ 26 : ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕ ನೆಲೆಗಳ ಮೇಲೆ ಭಾರತದ ವಾಯು ಸೇನೆ ಮಂಗಳವಾರ ದಾಳಿ ನಡೆಸಿದ ನಂತರ, ವಸ್ತುಸ್ಥಿತಿಯನ್ನು ತಿಳಿಯಲು ನರೇಂದ್ರ ಮೋದಿಯವರು ತುರ್ತು ಸಂಪುಟ ಸಭೆಯನ್ನು ಕರೆದಿದ್ದಾರೆ.

ಭಾರತೀಯ ವಾಯು ಸೇನೆ ಬಾಲಕೋಟ್, ಚಾಕೋಠಿ ಮತ್ತು ಮುಜಫರಾಬಾದ್ ಎಂಬಲ್ಲಿ ಸುಮಾರು 1000 ಕೆಜಿ ಬಾಂಬ್ ಗಳ ಸುರಿಮಳೆಗರೆದಿದೆ ಎಂದು ಹೇಳಲಾಗಿದ್ದು, ಉಗ್ರರ ಭದ್ರತಾ ಕಂಟ್ರೋಲ್ ರೂಂ ಸೇರಿದಂತೆ ಜೈಷ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದ ಹಲವಾರು ತರಬೇತಿ ತಾಣಗಳು ಧ್ವಂಸವಾಗಿವೆ.

ಪುಲ್ವಾಮಾ ಪ್ರತೀಕಾರ LIVE : ಉಗ್ರರ ನೆಲೆಗಳ ಮೇಲೆ ವಾಯುಸೇನೆ ದಾಳಿಪುಲ್ವಾಮಾ ಪ್ರತೀಕಾರ LIVE : ಉಗ್ರರ ನೆಲೆಗಳ ಮೇಲೆ ವಾಯುಸೇನೆ ದಾಳಿ

ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತುರ್ತು ಸಂಪುಟ ಸಭೆಯನ್ನು ಕರೆದಿದ್ದು, ಗೃಹ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವ ಅರುಣ್ ಜೇಟ್ಲಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋವಲ್, ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದಾರೆ.

Air Strike : Meeting of Cabinet Committee on Security underway

ಇದೇ ಸಮಯದಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಶಾಹ್ ಮಹಮೂದ್ ಕುರೇಶಿ ಕೂಡ ಇಸ್ಲಾಮಾಬಾದ್ ನಲ್ಲಿ ತುರ್ತು ಸಭೆಯನ್ನು ಕರೆದಿದ್ದಾರೆ.

ಪುಲ್ವಾಮಾ ದಾಳಿಗೆ ಪ್ರತೀಕಾರ : ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಜವಾನರ ಮೇಲೆ ದಾಳಿ ನಡೆಸಿ 40ಕ್ಕೂ ಹೆಚ್ಚು ಜವಾನರನ್ನು ಹತ್ಯೆಗೈದ ನಂತರ ಪ್ರತೀಕಾರವಾಗಿ ಭಾರತದ ಸರಕಾರ ಭರ್ಜರಿ ತಿರುಗೇಟು ನೀಡಿದೆ.

English summary
Air Strike : Meeting of Cabinet Committee on Security underway. Narendra Modi, Rajnath Singh, Sushma Swaraj, Arun Jaitley, Nirmala Sitharaman, Ajit Doval etc have participated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X