ಮಾಲಿನ್ಯವೇ ಮಾರಕವಾಗಿದೆಯೇ ದೆಹಲಿಗರ ಲೈಂಗಿಕ ಜೀವನಕ್ಕೆ?

By: ಐಎಎನ್ ಎಸ್
Subscribe to Oneindia Kannada

ದೆಹಲಿ, ನವೆಂಬರ್ 8: ದೆಹಲಿಯ ವಾಯು ಮಾಲಿನ್ಯದ ಪ್ರಮಾಣ ಗಾಬರಿಪಡುವಂಥ ಹಂತ ತಲುಪಿಯಾಗಿದೆ. ಇಲ್ಲಿನ ಜನರ ಲೈಂಗಿಕ ಜೀವನ, ಫಲವಂತಿಕೆ ಮೇಲೆ ಇದು ದುಷ್ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳಿದ್ದಾರೆ. ಮಾಲಿನ್ಯದ ಪರಿಣಾಮವಾಗಿ ದೆಹಲಿಗರ ಲೈಂಗಿಕ ಚಟುವಟಿಕೆಯಲ್ಲಿ ಶೇ 30ರಷ್ಟು ಕಡಿಮೆಯಾಗಿದೆಯಂತೆ.

ಕಳೆದ ಹದಿನೇಳು ವರ್ಷದಲ್ಲೇ ದೆಹಲಿ ವಾಯುಮಾಲಿನ್ಯ ಈ ಪ್ರಮಾಣ ತಲುಪಿರಲಿಲ್ಲ. 'ಕಲುಷಿತ ಗಾಳಿ ದೇಹದ ಹಾರ್ಮೋನ್ ಗಳ ಮೇಲೆ ಪರಿಣಾಮ ಬೀರುತ್ತದೆ. ಭಾರತದಲ್ಲಿ ಶೇ 15ರಷ್ಟು ಪುರುಷರಲ್ಲಿ ಫಲವಂತಿಕೆ ಸಮಸ್ಯೆಯಿದೆ. ಮಹಿಳೆಯರಿಗಿಂತ ಪುರುಷರಲ್ಲೇ ಈ ಸಮಸ್ಯೆಯ ಪ್ರಮಾಣ ಹೆಚ್ಚು' ಎಂದು ನಗರದ ಇಂದಿರಾ ಐವಿಎಫ್ ಅಸ್ಪತ್ರೆ ವೈದ್ಯೆ ಸಾಗರಿಕಾ ಅಗರವಾಲ್ ಹೇಳಿದ್ದಾರೆ.[ದೆಹಲಿ ವಾಯು ಮಾಲಿನ್ಯ: ಮೂರು ದಿನ ಶಾಲೆ ಕಾಲೇಜು ಬಂದ್]

Air pollution in Delhi may affect sex activity

ಗಾಳಿಯಲ್ಲಿರುವ ರಾಸಾಯನಿಕಗಳು ಹಾರ್ಮೋನ್ ಸಮತೋಲನದ ಪರಿಣಾಮ ಬೀರಲಿದ್ದು, ವೀರ್ಯಕ್ಕೆ ವಿಷಕಾರಿಯಾಗಿ ಪರಿಣಮಿಸುತ್ತದೆ. ಜತೆಗೆ ಮಹಿಳೆಯರಲ್ಲಿ ಈಸ್ಟ್ರೋಜನ್ ಪ್ರಮಾಣದಲ್ಲೂ ಕಡಿಮೆಯಾಗುತ್ತದೆ. ಆದ್ದರಿಂದ ಲೈಂಗಿಕ ಜೀವನಕ್ಕೆ ತೊಂದರೆಯಾಗುತ್ತದೆ ಎಂದು ಅವರು ಹೇಳಿದ್ದಾರೆ. ಈ ಸಮಸ್ಯೆ ತಡೆಯಬೇಕು ಅಂದರೆ, ಹೊರಗೆ ಸುತ್ತಾಡುವಾಗ ಮಲ್ಟಿ ಲೇಯರ್ ಫಿಲ್ಟರ್ ಮಾಸ್ಕ್ ಹಾಕಬೇಕು ಅಂತಾರೆ.[ಮಲಿನ ನಗರಿ ದೆಹಲಿ ಜನರ ಬದುಕು, ಬವಣೆ ಕೇಳಿಸಿಕೊಳ್ಳಿ..]

Air pollution in Delhi may affect sex activity

ಮತ್ತೊಬ್ಬ ಐವಿಎಫ್ ತಜ್ಞರು ಹೇಳುವ ಹಾಗೆ, ಇಂಥ ಮಲಿನ ಗಾಳಿ ಸೇವಿಸಿದರೆ ಫಲವಂತಿಕೆ ಸಮಸ್ಯೆ ಇಲ್ಲದ ಪುರುಷರಲ್ಲೂ ವೀರ್ಯಾಣುಗಳ ಸಂಖ್ಯೆ ಕಡಿಮೆ ಆಗುತ್ತದೆ. ಪುರುಷರಲ್ಲಿ ಫಲವಂತಿಕೆ ಕಡಿಮೆ ಮಾಡಲು, ಮಹಿಳೆಯರಲ್ಲಿ ಗರ್ಭಪಾತ ಪ್ರಮಾಣಹೆಚ್ಚಲು ಸದ್ಯಕ್ಕಿರುವ ಮಾಲಿನ್ಯದ ಪ್ರಮಾಣವೇ ಸಾಕು ಎಂದು ಅವರು ಹೇಳಿದ್ದಾರೆ. ಗರ್ಭಿಣಿಯರ ಮೇಲೆ ವಾಯು ಮಾಲಿನ್ಯ ಅತಿ ಹೆಚ್ಚು ಪರಿಣಾಮ ಬೀರುತ್ತದೆ ಎಂದು ರಾಮ್ ಮನೋಹರ್ ಲೋಹಿಯಾದ ವೈದ್ಯೆಯೊಬ್ಬರು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Delhi's worst air quality of the season is a matter of serious concern even for the city's healthy residents as it could affect their sex drive and activity, fertility, experts said.
Please Wait while comments are loading...