• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಂಗ್ರೆಸ್‌ ಯುವರಾಜನ ಆಸ್ತಿ 10 ಕೋಟಿ ದಾಟುತ್ತಿಲ್ಲ!

By Srinath
|

ಅಮೇಠಿ, ಏಪ್ರಿಲ್ 14: ಉತ್ತರ ಪ್ರದೇಶದ ಅಮೇಠಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ರಾಹುಲ್ ಗಾಂಧಿ ಅವರ ಆಸ್ತಿಪಾಸ್ತಿಯೂ ಅವರ ತಾಯಿ ರಾಯ್ ಬರೇಲಿಯ ಅಭ್ಯರ್ಥಿ ಸೋನಿಯಾ ಗಾಂಧಿ ಅವರಂತೆ 10 ಕೋಟಿ ರೂ. ಗಡಿ ದಾಟುತ್ತಿಲ್ಲ.

ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಅವರು ಶನಿವಾರ ತಮ್ಮ ಆಸ್ತಿ ವಿವರವನ್ನು ಘೋಷಿಸಿದ್ದಾರೆ. ಕಳೆದ ಐದು ವರ್ಷದಲ್ಲಿ ಅವರ ಆಸ್ತಿ ದುಪ್ಪಟ್ಟಾಗಿದೆ. 2009ರಲ್ಲಿ ಚುನಾವಣೆಗೆ ಸ್ಪರ್ಧಿಸುವಾಗ ಅವರ ಬಳಿ 4.7 ಕೋಟಿ ರೂ ಆಸ್ತಿಯಿತ್ತು. ಈಗ ಅದು 9.4 ಕೋಟಿ ರೂ. ಗೆ ತಲುಪಿದೆ. ಆದರೆ, ಸ್ಥಿರಾಸ್ತಿಗಳ ಸಂಖ್ಯೆ ಕಡಿಮೆಯಾಗುತ್ತಿದೆ.

ತನ್ನ ಬಳಿ ಒಂದು ಕಾರು ಸಹ ಇಲ್ಲ ಎಂದಿರುವ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಸೋದರಿ ಪ್ರಿಯಾಂಕಾ ಗಾಂಧಿ ಜತೆ ದೆಹಲಿಯಲ್ಲಿ ಫಾರ್ಮ್ ಹೌಸ್‌ ಹೊಂದಿದ್ದಾರೆ. ನವದೆಹಲಿಯ ಮೆಹೌಲಿ ಬಳಿಯ ಸುಲ್ತಾನ್‌ ಪುರ ಗ್ರಾಮದಲ್ಲಿರುವ ಈ ಇಂದಿರಾ ಗಾಂಧಿ ಫಾರ್ಮ್ ಹೌಸ್‌ ವಿಸ್ತೀರ್ಣ 4.7 ಎಕರೆ. ಎಕರೆಗೆ 53 ಲಕ್ಷ ರೂ. ಬೆಲೆಯಿದೆ ಎಂದು ರಾಹುಲ್‌ ಘೋಷಿಸಿದ್ದಾರೆ. ಇನ್ನು ತಾವು ಮದುವೆಯಾಗಿಲ್ಲ ಎಂಬುದನ್ನೂ ನಾಮಪತ್ರದಲ್ಲಿ ನಮೂದಿಸಿದ್ದಾರೆ.

ತಾಯಿ ಸೋನಿಯಾರಿಂದ ಸಾಲ ಪಡೆದಿದ್ದಾರೆ:

ಶನಿವಾರ ಅಮೇಠಿಯಿಂದ ನಾಮಪತ್ರ ಸಲ್ಲಿಸುವಾಗ ಆಸ್ತಿ ವಿವರ ನೀಡಿರುವ ರಾಹುಲ್, ತಾಯಿ ಸೋನಿಯಾರಿಂದ 9 ಲಕ್ಷ ರೂ. ಸಾಲ ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ. ಇದಲ್ಲದೆ ಇನ್ನೂ 9 ಲಕ್ಷ ರೂ. ಸಾಲ ಅವರ ಮೇಲಿದೆ.

2012-13ನೇ ಹಣಕಾಸು ವರ್ಷದಲ್ಲಿ ತಮಗೆ 92,46,973 ರೂ. ಆದಾಯ ಬಂದಿದೆ ಎಂದೂ ರಾಹುಲ್‌ ಘೋಷಿಸಿದ್ದಾರೆ. ಅವರ ಕೈಲಿ 35 ಸಾವಿರ ರೂ. ನಗದು ಇದ್ದು, ಮೂರು ಬ್ಯಾಂಕ್‌ ಖಾತೆಗಳಲ್ಲಿ 9,50,575 ರೂ. ಠೇವಣಿಯಿದೆ. ಷೇರು, ಮ್ಯೂಚುವಲ್‌ ಫಂಡ್‌ ಹಾಗೂ ಡಿಬೆಂಚರುಗಳಲ್ಲಿ 1,90,000 ರೂ. ಹೂಡಿಕೆ ಮಾಡಿದ್ದಾರೆ. ಅವರ ಬಳಿ 330 ಗ್ರಾಂ ಚಿನ್ನಾಭರಣವಿದೆ. 6,89,14,673 ರೂ. ನೀಡಿ ಆಸ್ತಿ ಖರೀದಿಸಿರುವುದಾಗಿಯೂ ಹೇಳಿದ್ದಾರೆ.

ಆಸ್ತಿ ಮೌಲ್ಯ ಹೆಚ್ಚಳಕ್ಕೆ ರಿಯಲ್‌ ಎಸ್ಟೇಟ್‌ ಮೌಲ್ಯ ಹೆಚ್ಚಿರುವುದು ಕಾರಣ ಎನ್ನಲಾಗಿದೆ. ಅದೇ ವೇಳೆ, ಅವರು ಹೊಂದಿದ್ದ ಸ್ಥಿರಾಸ್ತಿಗಳ ಸಂಖ್ಯೆ ಕಡಿಮೆಯಾಗಿದ್ದು, ದೆಹಲಿಯ ಮಾಲ್‌ ಗ‌ಳಲ್ಲಿದ್ದ ಎರಡು ಅಂಗಡಿಗಳನ್ನು ಮಾರಾಟ ಮಾಡಿದ್ದಾರೆ. ಜೊತೆಗೆ ಹರ್ಯಾಣದಲ್ಲಿದ್ದ ಕೃಷಿ ಭೂಮಿಯನ್ನೂ ಮಾರಿದ್ದಾರೆ.

English summary
Lok Sabha Election 2014: AICC Vice President Amethi candidate Rahul Gandhi declares his assets within Rs 10 crore. Like his mother and Congress President Sonia Gandhi, Rahul Gandhi also owns assets worth almost Rs 10 crore. In his affidavit filed before the returning officer at Amethi, he has declared movable assets worth Rs 8,07,58,265 and immovable assets worth Rs 1,32,48,284. Income shown for the Financial Year 2012-13 is Rs 92,46,973.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X