• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಇಂದು ಮಹತ್ವದ ಸಭೆ

|

ಬೆಂಗಳೂರು, ಆಗಸ್ಟ್‌ 01: ರಾಹುಲ್ ಗಾಂಧಿ ಅವರ ಪರತ್ಯಾಗದಿಂದ ತೆರವಾಗಿರುವ ಅಧ್ಯಕ್ಷ ಸ್ಥಾನಕ್ಕೆ ಮತ್ತೊಬ್ಬರನ್ನು ಆಯ್ಕೆ ಮಾಡುವ ಕಸರತ್ತು ನಡೆಯುತ್ತಲೇ ಇದ್ದು, ಇಂದು ಕಾಂಗ್ರೆಸ್ ಮಹತ್ವದ ಸಭೆ ಸೇರಿದ್ದಾರೆ.

ವಿಶೇಷವೆಂದರೆ ಇಂದಿನ ಸಭೆಯ ನೇತೃತ್ವದಲ್ಲಿ ಎಐಸಿಸಿ ಕಾರ್ಯದರ್ಶಿ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ವಹಿಸಿದ್ದಾರೆ.

ಯಾರಿಗೂ ಬೇಡವಾದ ಎಐಸಿಸಿ ಅಧ್ಯಕ್ಷ ಹುದ್ದೆಗೆ 'ವೈ ನಾಟ್' ಡಿ ಕೆ ಶಿವಕುಮಾರ್? ಯಾರಿಗೂ ಬೇಡವಾದ ಎಐಸಿಸಿ ಅಧ್ಯಕ್ಷ ಹುದ್ದೆಗೆ 'ವೈ ನಾಟ್' ಡಿ ಕೆ ಶಿವಕುಮಾರ್?

ನಿನ್ನೆಯೇ ಈ ಸಭೆಯಲ್ಲಿ ಆಯೋಜಿಸಲಾಗಿತ್ತಾದರೂ ಸಹ ಇಂದಿಗೆ ಸಭೆಯನ್ನು ಮುಂದೂಡಲಾಗಿದೆ. ಖರ್ಗೆ, ಗುಲಾಂ ನಬಿ ಆಜಾದ್ ಸೇರಿದಂತೆ ಹಲವು ಪ್ರಮುಖ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಈ ಸಭೆಯಲ್ಲಿ ಗಾಂಧಿ ಕುಟುಂಬದ ಯಾರೂ ಪಾಲ್ಗೊಂಡಿಲ್ಲ.

ಜುಲೈ 3 ರಂದು ರಾಹುಲ್ ಗಾಂಧಿ ಅವರು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು, ಅಂದಿನಿಂದಲೂ ಹೊಸ ಅಧ್ಯಕ್ಷರ ಆಯ್ಕೆ ಮಾಡುವ ಕಸರತ್ತು ಜಾರಿಯಲ್ಲಿದೆ.

ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ತಡವಾಗುತ್ತಿರುವುದಕ್ಕೆ ಪಕ್ಷದ ಹಿರಿಯ ನಾಯಕರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಶಶಿ ತರೂರ್, ಪಂಜಾಬ್ ಸಿಎಂ ಅಮರೇಂದರ್ ಸಿಂಗ್ ಸೇರಿದಂತೆ ಇನ್ನೂ ಕೆಲವರು ಅಧ್ಯಕ್ಷರ ಆಯ್ಕೆ ಬೇಗ ಆಗಲಿ ಎಂದು ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಯಾರನ್ನಾದರೂ ಬೇಗ ಆಯ್ಕೆ ಮಾಡಿ: ಸಿಂಧಿಯಾಕಾಂಗ್ರೆಸ್ ಅಧ್ಯಕ್ಷರನ್ನಾಗಿ ಯಾರನ್ನಾದರೂ ಬೇಗ ಆಯ್ಕೆ ಮಾಡಿ: ಸಿಂಧಿಯಾ

ಪ್ರಿಯಾಂಕಾ ಗಾಂಧಿ ಅವರ ಹೆಸರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮುನ್ನೆಲೆಯಲ್ಲಿದೆ. ಅಮರಿಂದರ್ ಸಿಂಗ್ ಮತ್ತು ಇನ್ನೂ ಕೆಲವರು ಪ್ರಿಯಾಂಕಾ ಗಾಂಧಿ ಅವರು ಅಧ್ಯಕ್ಷರಾಗಲಿ ಎಂದಿದ್ದಾರೆ. ಆದರೆ ಗಾಂಧಿ ಕುಟುಂಬಕ್ಕೆ ಅಧ್ಯಕ್ಷ ಸ್ಥಾನ ಬೇಡವೆಂದು ರಾಹುಲ್ ಗಾಂಧಿ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

English summary
A very important meeting going on in leadership of AICC secratory KC Venugopal to choose AICC president.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X