ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಗಸ್ಟಾವೆಸ್ಟ್ ಲ್ಯಾಂಡ್ : ಮೈಕೆಲ್ ಭೇಟಿಗೆ ವಕೀಲೆಗೆ ಅನುಮತಿ ಇಲ್ಲ

|
Google Oneindia Kannada News

ನವದೆಹಲಿ, ಡಿಸೆಂಬರ್ 14 : ಅಗಸ್ಟಾವೆಸ್ಟ್ ಲ್ಯಾಂಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ನನ್ನು ಭೇಟಿಯಾಗಲು ಪಟಿಯಾಲಾ ಹೌಸ್ ಕೋರ್ಟ್, ಮೈಕೆಲ್ ನನ್ನು ಪ್ರತಿನಿಧಿಸಲು ಬಂದಿದ್ದ ವಕೀಲೆಗೆ ಅವಕಾಶ ನೀಡಿಲ್ಲ.

ಕ್ರಿಶ್ಚಿಯನ್ ನಿಂದ ಕುಟುಂಬಕ್ಕೆ ಹಣ ಸಂದಾಯ! ಆ 'ಕುಟುಂಬ' ಯಾವುದು? ಕ್ರಿಶ್ಚಿಯನ್ ನಿಂದ ಕುಟುಂಬಕ್ಕೆ ಹಣ ಸಂದಾಯ! ಆ 'ಕುಟುಂಬ' ಯಾವುದು?

ರೋಸ್ ಮೆರಿ ಪ್ಯಾಟ್ರಿಜ್ಜಿ ಅವರು, ತಮ್ಮ ಬಳಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ದಾಖಲೆಗಳಿದ್ದು, ಅವನ್ನು ಕೋರ್ಟಿಗೆ ಪ್ರಸ್ತುತ ಪಡಿಸುವುದಾಗಿ ಹೇಳಿದ್ದಾರೆ. ತಾವು ಇಟಲಿ ಮತ್ತು ಸ್ವಿಟ್ಜರ್ಲೆಂಡ್ ನಲ್ಲಿ ಕ್ರಿಶ್ಚಿಯನ್ ಮೈಕೆಲ್ ನನ್ನು ಕಳೆದ 5 ವರ್ಷಗಳಿಂದ ಪ್ರತಿನಿಧಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಕ್ರಿಶ್ಚಿಯನ್ ಮೈಖೆಲ್ ಪರ ವಕೀಲಿಕೆ; ‌ಜೋಸೆಫ್ ಉಚ್ಚಾಟಿಸಿದ ಕಾಂಗ್ರೆಸ್ ಕ್ರಿಶ್ಚಿಯನ್ ಮೈಖೆಲ್ ಪರ ವಕೀಲಿಕೆ; ‌ಜೋಸೆಫ್ ಉಚ್ಚಾಟಿಸಿದ ಕಾಂಗ್ರೆಸ್

ಆದರೆ, ಅವರು ಮೈಕೆಲ್ ನನ್ನು ಪ್ರತಿನಿಧಿಸಲು ಮತ್ತು ಭೇಟಿಯಾಗಲು ಅವಕಾಶ ನೀಡಬಾರದೆಂದು ಸಿಬಿಐ ವಕೀಲರು ವಾದಿಸಿದ್ದಾರೆ. ರೋಸ್ ಮೆರಿ ಪ್ಯಾಟ್ರಿಜ್ಜಿ ಅವರ ವಿಶ್ವಾಸಾರ್ಹತೆಯ ಬಗ್ಗೆ ತಮಗೆ ಶಂಕೆಯಿದ್ದು, ಬೇಟಿಯಾಗಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದರು.

Agustawestland scam : Court refuses permission to meet Michel

ಸಿಬಿಐ ವಕೀಲರು, ತಮ್ಮ ಬಳಿ ಕ್ರಿಶ್ಚಿಯನ್ ಮೈಕೆಲ್ ವಿರುದ್ಧ ಹಲವಾರು ದಾಖಲೆಗಳಿದ್ದು, ಸಾಕ್ಷಿಯನ್ನು ದೃಢೀಕರಿಸಲು ಇನ್ನೂ ಐದು ದಿನಗಳ ಕಸ್ಟಡಿ ನೀಡಬೇಕೆಂದು ಕೋರಿತ್ತು. ಅಲ್ಲದೆ, ಹೆಚ್ಚಿನ ವಿಚಾರಣೆಗಾಗಿ ಆತನನ್ನು ಮುಂಬೈಗೆ ಕರೆದೊಯ್ಯಲು ಅವಕಾಶ ಮಾಡಿಕೊಡಬೇಕೆಂದೂ ಸಿಬಿಐ ವಕೀಲರು ಕೋರಿದ್ದಾರೆ. ಭಾರತದ ವಕೀಲ ಅಲ್ಜೋ ಕೆ ಜೋಸೆಫ್ ಅವರು ಕೂಡ ಮೈಕೆಲ್ ನನ್ನು ಪ್ರತಿನಿಧಿಸುತ್ತಿದ್ದಾರೆ.

ಅಗಸ್ಟಾ ವೆಸ್ಟ್ ಲ್ಯಾಂಡ್: ಮೈಕಲ್ ಬಂಧನ ಕಾಂಗ್ರೆಸ್‌ಗೆ ಉರುಳಾಗಲಿದೆಯೇ? 10 ಅಂಶಗಳು ಅಗಸ್ಟಾ ವೆಸ್ಟ್ ಲ್ಯಾಂಡ್: ಮೈಕಲ್ ಬಂಧನ ಕಾಂಗ್ರೆಸ್‌ಗೆ ಉರುಳಾಗಲಿದೆಯೇ? 10 ಅಂಶಗಳು

ಬಂಧಿಸಿದರೂ ಅಚ್ಚರಿಯಿಲ್ಲ : ಕ್ರಿಶ್ಚಿಯನ್ ಮೈಕೆಲ್ ಬಗ್ಗೆ ನನಗೆಲ್ಲ ಗೊತ್ತಿರುವುದರಿಂದ ನನ್ನನ್ನು ಬಂಧಿಸಬಹುದೆಂದು ಹೆದರಿಕೆಯಾಗುತ್ತಿದೆ. ನನಗೇನೂ ಕೆಟ್ಟದಾಗುವುದಿಲ್ಲವೆಂದು ನಂಬಿದ್ದೇನೆ. ನಾನು ಭಾರತಕ್ಕೆ ಬಂದಿರುವುದು ಕ್ರಿಶ್ಚಿಯನ್ ಮೈಕೆಲ್ ನಿಗೆ ಸಹಾಯ ಮಾಡಲೆಂದು. ಕ್ರಿಸ್ಮಸ್ ಒಳಗಾಗಿ ನಾನು ವಾಪಸ್ ನನ್ನ ದೇಶಕ್ಕೆ ವಾಪಸ್ ಹೋಗಿ, ಕುಟುಂಬದೊಡನೆ ಇರುತ್ತೇನೆಂದು ನಂಬಿದ್ದೇನೆ ಎಂದು ವಕೀಲೆ ರೋಸ್ ಮೆರಿ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಆಗಸ್ಟಾದಲ್ಲಿ ಮೋದಿಯೇ ಲಾಭ ಪಡೆದಿದ್ದಾರೆ : ಕಾಂಗ್ರೆಸ್ ಪ್ರತ್ಯಾರೋಪಆಗಸ್ಟಾದಲ್ಲಿ ಮೋದಿಯೇ ಲಾಭ ಪಡೆದಿದ್ದಾರೆ : ಕಾಂಗ್ರೆಸ್ ಪ್ರತ್ಯಾರೋಪ

ರಾಜಕಾರಣಿಗಳಿಗೆ ಲಂಚ : ವಿವಿಐಪಿಗಳನ್ನು ಕರೆದೊಯ್ಯುವ ಉದ್ದೇಶದಿಂದ ಭಾರತ ಸರಕಾರ ಮತ್ತು ಇಟಲಿಯ ಅಗಸ್ಟಾ ವೆಸ್ಟ್ ಲ್ಯಾಂಡ್ ಕಂಪನಿಯ ನಡುವೆ 12 ಹೆಲಿಕಾಪ್ಟರ್ ಗಳನ್ನು ಖರೀದಿಸುವ ಒಪ್ಪಂದವಾಗಿತ್ತು. ಇದು ಸಾಕಾರವಾಗಲು ಭಾರತದ ರಾಜಕಾರಣಿ ಮತ್ತು ಅಧಿಕಾರಿಗಳಿಗೆ ಲಂಚ ನೀಡಲೆಂದು ಮೈಕೆಲ್ ಗೆ 225 ಕೋಟಿ ರುಪಾಯಿ ನೀಡಲಾಗಿತ್ತು ಎಂಬುದು ಆರೋಪ.

ಯಾವುದು ಆ ಕುಟುಂಬ? : 36 ಸಾವಿರ ಕೋಟಿ ರುಪಾಯಿಯ ಈ ಹಗರಣದಲ್ಲಿ ಬಂಧಿತನಾಗಿರುವ ಕ್ರಿಶ್ಚಿಯನ್ ಮೈಕೆಲ್ ನ ಅಪ್ಪನಿಗೆ ಹತ್ತಿರವಾಗಿದ್ದ ಭಾರತೀಯ 'ಕುಟುಂಬ'ವೊಂದಕ್ಕೆ ಪರಿಹಾರ ರೂಪವಾಗಿ ಹಣ ನೀಡಿರುವುದಾಗಿ, ಮತ್ತೊಬ್ಬ ದಲ್ಲಾಳಿಗೆ ಬರೆದ ಪತ್ರದಲ್ಲಿ ಕ್ರಿಶ್ಚಿಯನ್ ಮೈಕೆಲ್ ನಮೂದಿಸಿದ್ದ ಎಂಬುದು ಇಟಲಿಯ ಕೋರ್ಟ್ ನಲ್ಲಿರುವ ದಾಖಲೆಯಿಂದ ತಿಳಿದುಬಂದಿದೆ.

English summary
Agustawestland scam : Patiala Court in Delhi has refused permission to his lawyer Rosemary Patrizi to meet the middleman Christian Michel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X