ಮೋದಿ ಎಚ್ಚರಿಕೆ ನಂತರ ಸಾಧ್ವಿ ಕ್ಷಮೆಯಾಚನೆ
ನವದೆಹಲಿ, ಡಿ.2: ನಿಮಗೆ ಶ್ರೀರಾಮಭಕ್ತರ (ಬಿಜೆಪಿ) ಸರ್ಕಾರ ಬೇಕೋ ಅಥವಾ ಅಕ್ರಮ ಸಂತಾನದವರ (ಸೋನಿಯಾ-ಕಾಂಗ್ರೆಸ್) ಸರ್ಕಾರ ಬೇಕೋ ಎಂಬುದನ್ನು ನೀವೇ ನಿರ್ಧರಿಸಿ ಎಂದು ವಿವಾದಿತ ಹೇಳಿಕೆ ನೀಡಿದ್ದ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಅವರು ಮಂಗಳವಾರ ಕ್ಷಮೆಯಾಚಿಸಿದ್ದಾರೆ. ಪ್ರಧಾನಿ ನರೇಂದ್ರಮೋದಿ ಅವರು ಸಾಧ್ವಿಗೆ ಎಚ್ಚರಿಕೆ ನೀಡಿದ ಬಳಿಕ ಈ ಬೆಳವಣಿಗೆ ಕಂಡು ಬಂದಿದೆ.
ಪ್ರಧಾನಿ ನರೇಂದ್ರ ಮೋದಿ ಸಂಪುಟದ ರಾಜ್ಯ ಸಚಿವೆ ಸಾಧ್ವಿನಿರಂಜನ್ ಜ್ಯೋತಿ ಅವರು ಪಾತ್ರೆ ಮಾರಾಟ ಮಾಡುತ್ತಿದ್ದ ಸೋನಿಯಾ ಅಳಿಯ ವಾದ್ರ ಅದು ಹೇಗೆ ಕೋಟ್ಯಾಧೀಶನಾದ ಎಂದು ಪ್ರಶ್ನಿಸಿದ್ದರು.
ನಾವೆಲ್ಲ ಶ್ರೀರಾಮಚಂದ್ರನ ಸಂತಾನ(ಮಕ್ಕಳು). ಹಿಂದೂ, ಮುಸ್ಲಿಂ, ಕ್ರೈಸ್ತ ಎಲ್ಲರೂ ಅವನ ಮಕ್ಕಳೇ. ಈ ತತ್ವದಲ್ಲಿ ನಂಬಿಕೆ ಇಲ್ಲದವರೆಲ್ಲರೂಭಾರತ ಬಿಟ್ಟು ತೊಲಗಬಹುದು ಎಂದು ತಮ್ಮ ಚುನಾವಣಾ ಭಾಷಣದಲ್ಲಿ ಹೇಳುವ ಮೂಲಕ ಮೋದಿಗೆ ಇರುಸು ಮುರುಸು ಉಂಟು ಮಾಡಿದ್ದರು.
ನರೇಂದ್ರ ಮೋದಿಯವರು ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದಾರೆ. ಅವರನ್ನು ಬೆಂಬಲಿಸಿ. ಅದರ ಬದಲು ಭ್ರಷ್ಟಾಚಾರದಲ್ಲಿ ಮುಳುಗಿರುವವರಿಗೆ ಮತ ಹಾಕಬೇಡಿ. ರಾಮನಲ್ಲಿ ನಂಬಿಕೆ ಇಟ್ಟಿರುವವರಿಗೆ ಮತ ನೀಡಬೇಕೋ ಅಥವಾ ರಾಮನಲ್ಲಿ ನಂಬಿಕೆಯಿಲ್ಲದ ಪಾಮರರಿಗೆ ಮತ ನೀಡಬೇಕೋ ಎಂಬುದು ನಿಮ್ಮ ನಿರ್ಧಾರಕ್ಕೆ ಬಿಟ್ಟಿದ್ದು ಎಂದು ಸಾಧ್ವಿ ಜ್ಯೋತಿ ಭಾಷಣ ಮಾಡಿದ್ದರು.

ಬಿಜೆಪಿ ಸಮರ್ಥನೆ: ವಿವಾದಿತ ಹೇಳಿಕೆ ನೀಡಿದ ಬಳಿಕ ಸಚಿವೆ ನಿರಂಜನ್ ಜ್ಯೋತಿ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡು, ರಾಷ್ಟ್ರವನ್ನು ಕೊಳ್ಳೆ ಹೊಡೆದು ವಿದೇಶಿ ಬ್ಯಾಂಕ್‌ಗಳಲ್ಲಿ ಹಣ ಇಟ್ಟಿರುವವರು, ದೇಶದ ಜನರನ್ನು ವಂಚಿಸಿದವರನ್ನು ಏನೆಂದು ಕರೆಯಬೇಕು ಎಂಬುದನ್ನು ನೀವೇ ಹೇಳಿ ಎಂದು ಮಾಧ್ಯಮಗಳ ಮೇಲೆ ಹರಿಹಾಯ್ದಿದ್ದರು.
ಸಾಧ್ವಿ ನಿರಂಜನ್ ಜ್ಯೋತಿ ಅವರು ಮೊದಲ ಬಾರಿಗೆ ಸಂಸದರಾಗಿದ್ದಾರೆ. ಅವರಿಗೆ ಇನ್ನೂ ಹೇಗೆ ಮಾತನಾಡಬೇಕು ಎಂಬುದರ ಅರಿವಿಲ್ಲ, ಬಾಯಿ ತಪ್ಪಿನಿಂದ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ಪ್ರತಿಕ್ರಿಯಿಸಿತ್ತು.
ಮೋದಿ ಸಂಪುಟದ ಸಚಿವರ ಪೈಕಿ 5 ಸಚಿವರು ಮಾತ್ರ 1 ಕೋಟಿ ರು.ಗೂ ಕಡಿಮೆ ಗಳಿಕೆ ಹೊಂದಿದ್ದು ಈ ಪೈಕಿ ಅತ್ಯಂತ ಕಡಿಮೆ ಆಸ್ತಿ ಇರುವ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ (37 ಲಕ್ಷ ರು) ಎಂಬುದು ವಿಶೇಷ.[ಕಡಿಮೆ ಆಸ್ತಿ ಹೊಂದಿರುವವರ ವಿವರ]
ಇದಕ್ಕಿಂತಲೂ ಹೊಲಸು ಮಾತುಗಳನ್ನಾಡಲು ಯಾರಿಂದಲೂ ಸಾಧ್ಯವಿಲ್ಲ. ಸಚಿವೆ ನೀಡಿರುವ ಈ ಹೇಳಿಕೆಗಾಗಿ ಅವರು ಸಾರ್ವಜನಿಕರ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿ ಪ್ರತಿಭಟನೆಗೆ ಮುಂದಾಗಿತ್ತು.
-
ಭಾರತದಲ್ಲಿ ಇಂಧನ ಭದ್ರತೆಗೆ ಒತ್ತು, ನಾಗರಿಕರ ಹಿತರಕ್ಷಣೆ ಮೊದಲ ಆದ್ಯತೆ: ಮೋದಿ ನೇತೃತ್ವದಲ್ಲಿ ಸಭೆ, ಹಲವು ಮಹತ್ವದ ತೀರ್ಮಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral












Click it and Unblock the Notifications