ಪೆಟ್ರೋಲ್ ಪಂಪ್ ಗಳಿಗೂ ಇನ್ನು ವಾರದ ರಜಾ?!

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ನವದೆಹಲಿ, ಏಪ್ರಿಲ್ 10: ಪೆಟ್ರೋಲ್ ಮತ್ತು ಡಿಸೆಲ್ ಮಾರಾಟದ ಕಮಿಶನ್ ಅನ್ನು ಸರ್ಕಾರ ಹಚ್ಚಿಸದೆ ಇದ್ದಲ್ಲಿ ಮೇ 10 ರ ನಂತರ ಪ್ರತಿ ಭಾನುವಾರ ಪೆಟ್ರೋಲ್ ಪಂಪ್ ಗಳು ವಾರದ ರಜಾ ಪಡೆಯಲಿವೆ! ಅಷ್ಟೇ ಅಲ್ಲ, ದಿನಕ್ಕೆ ಕೇವಲ 8 ಗಂಟೆ ಮಾತ್ರ ಕಾರ್ಯನಿರ್ವಹಿಸಲಿವೆ. ಹಾಗೆಂದು ಪೆಟ್ರೋಲ್ ಪಂಪ್ ನ ಮಾಲೀಕರೇ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಜೊತೆಗೆ ಮೇ 10 ನ್ನು 'ನೋ ಪರ್ಚೇಸ್ ಡೆ' ಎಂದು ಆಚರಿಸುವುದಾಗಿ ಭಾರತೀಯ ಪೆಟ್ರೋಲಿಯಂ ವಿತರಕರ ಒಕ್ಕೂಟ(CPID) ಇಂದು ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ತಿಳಿಸಿದೆ. ಸಭೆಯಲ್ಲಿ ವಿವಿಧ ರಾಜ್ಯಗಳ ಪೆಟ್ರೋಲಿಯಂ ವಿತರಕರು ಭಾಗವಹಿಸಿದ್ದರು.[ಪ್ರತಿದಿನ ಪೆಟ್ರೋಲ್, ಡೀಸೆಲ್ ದರ ಪರಿಷ್ಕರಿಸಲು ಚಿಂತನೆ]

After May 10, Petrol pumps to remain shut on every Sunday

ಕಳೆದ ಏಳು ವರ್ಷಗಳಿಂದ ಡೀಲರ್ಸ್ ಕಮಿಶನ್ ಗೆ ಸಂಬಂಧಿಸಿದಂತೆ ತೈಲ ಮಾರುಕಟ್ಟೆ ಕಂಪೆನಿಗಳು ಯಾವುದೇ ಸೂಕ್ತ ನಿರ್ಣಯಗಳನ್ನು ತೆಗೆದುಕೊಂಡಿಲ್ಲ. ಲೈಟಿಂಗ್, ಮಾನವ ಸಂಪನ್ಮೂಲ ಸೇರಿದಂತೆ ಇನ್ನಿತರೆ ಸೌಲಭ್ಯಕ್ಕೆ ಸಂಬಂಧಿಸಿದಂತೆ ವೆಚ್ಚವಾಗುವ ಹಣದಿಂದಾಗಿ ನಾವು ಹೈರಾಣಾಗಿದ್ದೇವೆ. ಆದ್ದರಿಂದ ಕಮಿಶನ್ ಗೆ ಸಂಬಂಧಿಸಿದಂತೆ ಶೀಘ್ರವೆ ಸೂಕ್ತ ನಿರ್ಣಯ ತೆಗೆದುಕೊಳ್ಳದಿದ್ದಲ್ಲಿ, ನಾವು ವಾರದ ರಜಾ ಪಡೆಯಲಿದ್ದೇವೆ ಎಂದು ಪೆಟ್ರೋಲ್ ಪಂಪ್ ಡಿಲರ್ಸ್ ಎಚ್ಚರಿಸಿದ್ದಾರೆ.[ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಇಳಿಕೆ]

'ಡೀಲರ್ಸ್ ಕಮಿಶನ್ ಗೆ ಸಂಬಂಧಿಸಿದಂತೆ ನಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ತೈಲ ಮಾರುಕಟ್ಟೆ ಕಂಪೆನಿಗಳು ಭರವಸೆ ನೀಡಿದ್ದರಿಂದ ಜನವರಿಯಲ್ಲಿ ನಡೆಯಬೇಕಿದ್ದ ಮುಷ್ಕರವನ್ನು ನಾವು ಹಿಂಪಡೆದಿದ್ದೆವು. ಆದರೆ ಈ ನಾಲ್ಕು ತಿಂಗಳಲ್ಲಿ ಯಾವ ಬದಲಾವಣೆಯೂ ಆಗಿಲ್ಲವಾದ್ದರಿಂದ ಇಂಥ ನಿರ್ಧಾರ ತೆಗೆದುಕೊಂದಿದ್ದೇವೆ' ಎನ್ನುತ್ತಾರೆ ಪೆಟ್ರೋಲ್ ವಿತರಕರ ಸಂಘದ ರವಿ ಶಿಂಧೆ.

ಒಟ್ಟಿನಲ್ಲಿ ಪೆಟ್ರೋಲ್ ಪಂಪ್ ಡೀಲರ್ಸ್ ಗಳ ಬೇಡಿಕೆಗಳು ಈಡೇರದೆ ಇದ್ದಲ್ಲಿ, ವಾರಾಂತ್ಯದ ಹೊತ್ತಿಗೆ ಪೆಟ್ರೋಲ್ ಪಂಪ್ ಗಳ ಮುಂದೆ ವಾಹನಗಳ ನೂಕುನುಗ್ಗಲು ಹೊಸ ಸಮಸ್ಯೆಯಾಗಿ ಪರಿವರ್ತನೆಯಾದರೆ ಅಚ್ಚರಿಯೇನಿಲ್ಲ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The petrol pump owners on Sunday said that if the government doesn't hike dealer's commission they would observe weekly off on every Sunday from May 10. They further said that the petrol pumps will work only for eight hours in a day across the country after May 10. Also, May 10 will be observed as 'No purchase Day'.
Please Wait while comments are loading...