• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜನತಾ ಕರ್ಫ್ಯೂ: ವಾಟ್ಸಾಪ್ ನಲ್ಲಿ ಬರುವ ಸಂದೇಶಗಳೆಲ್ಲ ನಿಜವಲ್ಲ

|

ನವದೆಹಲಿ, ಮಾರ್ಚ್.23: ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯುವ ದೃಷ್ಟಿಯಿಂದ ಭಾನುವಾರ ಜನತಾ ಕರ್ಫ್ಯೂ ಆಚರಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದರು. ಸಂಜೆ 5 ಗಂಟೆ 5 ನಿಮಿಷದವರೆಗೂ ಮನೆಯಲ್ಲಿದ್ದ ಜನರು ನಂತರ ಮನೆಯ ಟೆರೆಸ್ ಮತ್ತು ಕಿಟಕಿ ಬಳಿ ನಿಂತು ಚಪ್ಪಾಳೆ ಹೊಡೆಯಬೇಕು, ಗಂಟೆ ಮತ್ತು ಜಾಗಟೆಯನ್ನು ಬಾರಿಸಬೇಕು ಎಂದು ಕರೆ ನೀಡಿದ್ದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ನೀಡಿದ ಕರೆಗೆ ಓಗೊಟ್ಟು ಪ್ರಮುಖ ನಾಯಕರು ಸೇರಿದಂತೆ ಬಹುತೇಕ ಭಾರತೀಯರು ಅದನ್ನು ಪಾಲಿಸಿದರು. ಅದಾಗಿ ಕೆಲ ನಿಮಿಷಗಳಲ್ಲೇ ಜನರ ವಾಟ್ಸಾಪ್ ಗಳಲ್ಲಿ ಫೋಟೋ ಒಂದು ಹರಿದಾಡಲು ಶುರುವಾಯಿತು.

ಜನತಾ ಕರ್ಫ್ಯೂ ಆಯ್ತು, ಭಾರತೀಯರಿಗೆ ಆರ್ಥಿಕ ನೆರವು ಸಿಗೋದ್ಯಾವಾಗ?

ಭಾರತದ ಚಿತ್ರವು ಭಾನುವಾರ ಸಂಜೆ 5 ಗಂಟೆ 5 ನಿಮಿಷಕ್ಕೆ ಹೇಗಿತ್ತು ಎಂಬುದನ್ನು ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಬಿಡುಗಡೆ ಮಾಡಿತು ಎನ್ನಲಾದ ನಕಲಿ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವಾಟ್ಸಾಪ್ ಸಂದೇಶದ ಹಿಂದಿನ ಮರ್ಮ

ಅಸಲಿಗೆ ಅಮೆರಿಕಾ ಬಾಹ್ಯಾಕಾಶ ಸಂಸ್ಥೆಯು ಭಾರತಕ್ಕೆ ಸಂಬಂಧಿಸಿದಂತೆ ಯಾವುದೇ ಚಿತ್ರವನ್ನು ಬಿಡುಗಡೆ ಮಾಡಿಲ್ಲ. ಆದರೆ, ಭಾರತದಲ್ಲಿ ಚಪ್ಪಾಳೆ ಮತ್ತು ಗಂಟೆಯ ಗುರುತುಗಳು ಇರುವ ಚಿತ್ರವನ್ನು ನಾಸಾ ಹೆಸರಿನಲ್ಲಿ ಹರಿ ಬಿಡಲಾಗುತ್ತಿದೆ. ವಾಟ್ಸಾಪ್ ಗ್ರೂಪ್ ಗಳಲ್ಲಿ ಇಂತಹ ಚಿತ್ರಗಳು ಹರಿದಾಡುತ್ತಿದ್ದು, ಇವೆಲ್ಲ ಸುಳ್ಳು ಎಂಬುದು ಸಾಬೀತಾಗಿದೆ.

ಪ್ರತ್ಯೇಕ ಭಾಗದ ಶಬ್ಧವನ್ನು ಗ್ರಹಿಸುವುದಿಲ್ಲ ನಾಸಾ

ಅಮೆರಿಕಾ ಬಾಹ್ಯಾಕಾಶ ಸಂಸ್ಥೆಯು ಪ್ರತ್ಯೇಕವಾಗಿ ವಿಶ್ವದ ಒಂದು ಭಾಗದಲ್ಲಿ ಕೇಳುವ ಶಬ್ದವನ್ನು ಗ್ರಹಿಸಲು ಸಾಧ್ಯವಿಲ್ಲ. ವೈಜ್ಞಾನಿಕವಾಗಿ ಭೂಮಿಯಲ್ಲಿ ಉಂಟಾಗುವ ಶಬ್ದವನ್ನು ಗ್ರಹಿಸಬಹುದೇ ವಿನಃ ಒಂದು ಪ್ರತ್ಯೇಕವಾದ ಪ್ರದೇಶದಲ್ಲಿನ ಶಬ್ಧವನ್ನು ಗ್ರಹಿಸಲು ಆಗುವುದಿಲ್ಲ. ಹೀಗಿರುವಾಗ ಭಾರತದಲ್ಲಿ ಉಂಟಾದ ಶಬ್ದವನ್ನು ದಾಖಲಿಸಿಕೊಂಡು, ಪ್ರತ್ಯೇಕ ಚಿತ್ರವನ್ನು ನಾಸಾ ಹೇಗೆ ತಾನೇ ಬಿಡುಗಡೆ ಮಾಡುವುದಕ್ಕೆ ಸಾಧ್ಯವಾಗುತ್ತದೆ.

ನಾಸಾ ಬಳಿ ಯಾವುದೇ ಅಧಿಕೃತ ಮಾಪನವಿಲ್ಲ

ಅಮೆರಿಕಾ ಬಾಹ್ಯಾಕಾಶ ಸಂಸ್ಥೆಯ ಬಳಿ ಅಲೆಗಳ ವೇಗವನ್ನು ಪತ್ತೆ ಮಾಡುವಂತಾ ಎಸ್ ಡಿ-13 ಎಂಬ ಮಾಪನವಿದೆ. ಇದು ವಿದ್ಯುತ್ಕಾಂತೀಯ ತರಂಗಾಂತರದ ವೇಗವನ್ನು ಪತ್ತೆ ಮಾಡುವುದಕ್ಕೆ ಅನುಕೂಲವಾಗಿ ಇರುತ್ತದೆ. ಆದರೆ, ಇದರಿಂದ ಶಬ್ದವನ್ನು ಕಂಡು ಹಿಡಿಯುವುದಕ್ಕೆ ಸಾಧ್ಯವಿಲ್ಲ. ಆ ರೀತಿಯ ಯಾವುದೇ ಅಧಿಕೃತ ಮಾಪನವು ನಾಸಾ ಬಳಿಯಲ್ಲಿ ಇಲ್ಲ.

ದೀಪಾವಳಿ ವೇಳೆಯಲ್ಲೂ ಇಂಥ ಚಿತ್ರಗಳದ್ದೇ ಸದ್ದು

ಜನತಾ ಕರ್ಫ್ಯೂಗೆ ಸಂಬಂಧಿಸಿದಂತೆ ಇದೀಗ ಭಾರತದ ನಕ್ಷೆಯಲ್ಲಿ ಚಪ್ಪಾಳೆಯ ಗುರುತು ಇರುವ ಚಿತ್ರಗಳು ಹರಿದಾಡುತ್ತಿವೆ. ಇದೇ ರೀತಿ ದೀಪಾವಳಿ ಸಂದರ್ಭದಲ್ಲಿ ಭಾರತದ ನಕ್ಷೆಯೊಳಗೆ ದೀಪದ ಗುರುತು ಇರುವ ಚಿತ್ರವನ್ನು ಅಮೆರಿಕಾ ಬಾಹ್ಯಾಕಾಶ ಸಂಸ್ಥೆಯೇ ಬಿಡುಗಡೆ ಮಾಡಿತು ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಾರೆ. ಇದು ಒಂದು ವರ್ಷದ ಕಥೆಯಲ್ಲ. ಬದಲಿಗೆ ಪ್ರತಿವರ್ಷ ಇಂಥ ನಕಲಿ ಸಂದೇಶಗಳು ಮತ್ತು ಚಿತ್ರಗಳು ವಾಟ್ಸಾಪ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುತ್ತವೆ.

English summary
Coronavirus: After Janata Curfew In India, Some Peoples Send Fake Messages From Whats App.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X