ಹೆಣ್ಣುಮಗುವಿಗೆ ತಂದೆಯಾದ ನಟ, ಬಿಜೆಪಿ ಸಂಸದ ಮನೋಜ್ ತಿವಾರಿ
ನವದೆಹಲಿ, ಡಿಸೆಂಬರ್ 31: ನಟ ಹಾಗೂ ಬಿಜೆಪಿ ಸಂಸದರಾಗಿರುವ ಮನೋಜ್ ತಿವಾರಿ ಬುಧವಾರ ಹೆಣ್ಣುಮಗುವಿಗೆ ತಂದೆಯಾಗಿದ್ದಾರೆ.
ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿರುವ ಮನೋಜ್ ತಿವಾರಿ ಅವರಿಗೆ ಈಗಾಗಲೇ ವಿಚ್ಛೇದಿತ ಪತ್ನಿಯಿಂದ ಹೆಣ್ಣುಮಗುವಿದೆ.
ಮಗುವಿನ ಮೊದಲ ಫೋಟೋವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ. ನನ್ನ ಮನೆಗೆ ಹೊಸ ದೇವತೆ ಆಗಮಿಸಿದ್ದಾಳೆ, ನನಗೆ ಹೆಣ್ಣುಮಗುವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಮನೋಜ್ ತಿವಾರಿ ಕೊನೆಯದಾಗಿ ದೇವ್ರಾ ಭೈಲ್ ದೀವಾನಾಭೋಜ್ ಪುರಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರ 2014ರಲ್ಲಿ ತೆರೆ ಕಂಡಿತ್ತು. 2010ರಲ್ಲಿ ನಡೆದ ಬಿಗ್‌ಬಾಸ್ ಸೀಸನ್ 4ನಲ್ಲಿ ಭಾಗವಹಿಸಿದ್ದರು.
ಕೃಷಿ ಕಾನೂನು ಕುರಿತು ಚರ್ಚಿಸಲು ಇತ್ತೀಚೆಗಷ್ಟೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರನ್ನು ತಮ್ಮ ಮನೆಗೆ ಆಹ್ವಾನಿಸಿದ್ದರು.