ಫೋಟೋಗ್ರಾಫರ್ ಗೆ ಗೂಸಾ, ನಟ ಅರ್ಜುನ್ ಮೇಲೆ ಕೇಸ್

Posted By:
Subscribe to Oneindia Kannada

ನವದೆಹಲಿ, ಏಪ್ರಿಲ್ 09: ಬಾಲಿವುಡ್ ನಟ ಅರ್ಜುನ್ ರಾಮ್ ಪಾಲ್ ಅವರ ಮೇಲೆ ಹಲ್ಲೆ ಆರೋಪದ ದೂರು ದಾಖಲಾಗಿದೆ. ದೆಹಲಿಯ ಫೈವ್ ಸ್ಟಾರ್ ಹೋಟೆಲಿನಲ್ಲಿ ಫೋಟೋ ತೆಗೆಯಲು ಯತ್ನಿಸಿದ ಕ್ಯಾಮೆರಾಮ್ಯಾನ್ ಒಬ್ಬರ ಮೇಲೆ ಹಲ್ಲೆ ಮಾಡಿದ ಆರೋಪವನ್ನು ಹೊರೆಸಲಾಗಿದೆ.

ನಟ ಅರ್ಜುನ್ ರಾಮ್ ಪಾಲ್ ಅವರು ದೆಹಲಿಯ ಪಂಚತಾರಾ ಹೋಟೆಲ್ ನ ನೈಟ್ ಕ್ಲಬ್ ನಲ್ಲಿ ಡೀಜೆಂಗ್ ಮಾಡುತ್ತಾ ಖುಷಿಯಿಂದ ಕುಣಿದಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಫೋಟೋಗ್ರಾಫರ್ ಒಬ್ಬರು, ಅನುಮತಿ ಇಲ್ಲದೆ ನಟ ಅರ್ಜುನ್ ಅವರ ಚಿತ್ರ ತೆಗೆಯಲು ಮುಂದಾಗಿದ್ದಾರೆ. ಫೋಟೋ ತೆಗೆದು ಬಿಟ್ಟಿದ್ದಾರೆ.

Actor Arjun Rampal booked for assaulting a cameraman

ಇದನ್ನು ಕಂಡ ಅರ್ಜುನ್ ಕೆಂಡಾಮಂಡಲವಾಗಿ, ಕ್ಯಾಮೆರಾಮ್ಯಾನಿಗೆ ಗೂಸಾ ಕೊಟ್ಟಿದ್ದಾರೆ. ನಂತರ ಬೌನ್ಸರ್ ಗಳು ಫೋಟೋಗ್ರಾಫರ್ ನನ್ನು ಕ್ಲಬಿನಿಂದ ಹೊರಕ್ಕೆ ದಬ್ಬಿದ್ದಾರೆ.

ಬೆಳ್ಳಂಬೆಳ್ಳಗೆ 3.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಪೊಲೀಸರಿಗೆ ದೂರು ನೀಡಲು ಹೋದಾಗ ಮೊದಲಿಗೆ ಸ್ವೀಕರಿಸಲಿಲ್ಲ. ಕೊನೆಗೂ ಹಲ್ಲೆ ಪ್ರಕರಣ ದಾಖಲಾಗಿದೆ ಎಂದು ಪೆಟ್ಟು ತಿಂದ ವ್ಯಕ್ತಿ ಎಎನ್ ಐ ಗೆ ತಿಳಿಸಿದ್ದಾರೆ.

ಇತ್ತೀಚೆಗೆ ಆಗ್ರಾದಲ್ಲಿ ಶೂಟಿಂಗ್ ನಿರತ ಸಂಜಯ್ ದತ್ ಅವರು ಕೂಡಾ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದನ್ನು ಸ್ಮರಿಸಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A complaint has been filed against Actor Arjun Rampal for allegedly assaulting the complainant while he was taking photos in a five-star hotel in Delhi.
Please Wait while comments are loading...