ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ತೀಸ್ತಾ ಸೆಟಲ್ವಾಡ್‌ಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು

|
Google Oneindia Kannada News

ನವದೆಹಲಿ, ಸೆ.02: ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಜೂನ್‌ನಲ್ಲಿ ಆಕೆಯನ್ನು ಗುಜರಾತ್ ಪೊಲೀಸರು ಬಂಧಿಸಿದ್ದರು.

2002ರ ಗುಜರಾತ್ ಗಲಭೆಗೆ ಸಂಬಂಧಿಸಿದ ಪ್ರಕರಣಗಳನ್ನು ದಾಖಲಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದ ಮೇಲೆ ಜೂನ್ 25 ರಿಂದ ತೀಸ್ತಾ ಸೆಟಲ್ವಾಡ್ ಬಂಧನದಲ್ಲಿದ್ದರು.

ಪ್ರಕರಣ ಸಂಬಂಧ ತೀಸ್ತಾ ಗುಜರಾತ್ ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ಆಗಸ್ಟ್ 3 ರಂದು, ಗುಜರಾತ್ ಹೈಕೋಟ್‌ ವಿಚಾರಣೆಯನ್ನು ಆರು ವಾರಗಳ ನಂತರಕ್ಕೆ ಮುಂದೂಡಿತ್ತು. ಇದಕ್ಕೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಮಧ್ಯಂತರ ಜಾಮೀನು ನೀಡಿರುವ ನ್ಯಾಯಾಲಯ, ಆಕೆಯನ್ನು ವಿಚಾರಣೆಗೆ ಒಳಪಡಿಸಲು ಪೊಲೀಸರಿಗೆ ಈಗಾಗಲೇ ಸಾಕಷ್ಟು ಸಮಯ ಸಿಕ್ಕಿದೆ ಎಂದು ಹೇಳಿದೆ.

ನಿಯಮಿತ ಜಾಮೀನು ಕೋರಿರುವ ಆಕೆಯ ಅರ್ಜಿಯ ವಿಚಾರಣೆಯನ್ನು ಗುಜರಾತ್ ಹೈಕೋರ್ಟ್ ಮುಂದುವರಿಸಲಿದೆ.

"ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಹೈಕೋರ್ಟ್ ಮಧ್ಯಂತರ ಜಾಮೀನು ಅರ್ಜಿಯನ್ನು ಪರಿಗಣಿಸಬೇಕಾಗಿತ್ತು" ಎಂದು ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ನೇತೃತ್ವದ ಪೀಠವು ಅಭಿಪ್ರಾಯಪಟ್ಟಿದೆ.

ಜೂನ್ 24 ರ ಸುಪ್ರೀಂ ಕೋರ್ಟ್ ಆಕೆಯ ಮತ್ತು ಜಾಕಿಯಾ ಜಾಫ್ರಿ ಅವರ ಮನವಿಯನ್ನು ವಜಾಗೊಳಿಸಿದ ಕೇವಲ ಎರಡು ದಿನಗಳ ನಂತರ ಅವರನ್ನು ಬಂಧಿಸಲಾಯಿತು. ಗುಜರಾತ್ ಗಲಭೆ ಸಮಯದಲ್ಲಿ ಮುಖ್ಯಮಂತ್ರಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿಯವರನ್ನು ತಪ್ಪಿನಿಂದ ಮುಕ್ತಗೊಳಿಸಿದ ವಿಶೇಷ ತನಿಖಾ ತಂಡವನ್ನು ಪ್ರಶ್ನಿಸಿದ್ದರು.

Activist Teesta Setalvad granted interim bail from Supreme Court

2002ರ ಗಲಭೆ ಪ್ರಕರಣಗಳನ್ನು ದಾಖಲಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪ ಆಕೆಯ ಮೇಲಿದೆ, ಆದರೆ ಪೊಲೀಸರು ಯಾವ ದಾಖಲೆಗಳನ್ನು ನಿರ್ದಿಷ್ಟಪಡಿಸಿಲ್ಲ ಎಂದು ತೀಸ್ತಾ ಪರ ವಕೀಲರು ಹೇಳಿದರು.

ಜಾಮೀನು ಮಂಜೂರು ಮಾಡಿದ ನ್ಯಾಯಾಲಯವು ಶುಕ್ರವಾರ ಆರೋಪಗಳು 2002-12ರ ಅವಧಿಗೆ ಸಂಬಂಧಿಸಿದೆ ಎಂದು ಗಮನಿಸಿದೆ. "ತನಿಖಾ ಸಂಸ್ಥೆಯು ಏಳು ದಿನಗಳ ಕಾಲ ಕಸ್ಟೋಡಿಯನ್ ವಿಚಾರಣೆಯ ಪ್ರಯೋಜನವನ್ನು ಹೊಂದಿದೆ" ಎಂದು ನ್ಯಾಯಮೂರ್ತಿಗಳಾದ ಎಸ್ ರವೀಂದ್ರ ಭಟ್ ಮತ್ತು ಸುಧಾಂಶು ಧುಲಿಯಾ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠ ಹೇಳಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು, ಈ ಪ್ರಕರಣದಲ್ಲಿ ಜಾಮೀನು ನೀಡಲಾಗದ ಯಾವುದೇ ಅಪರಾಧವಿಲ್ಲ. ಅದು ಕೂಡ ಮಹಿಳೆಗೆ ಎಂದು ಗಮನಿಸಿದೆ. ತೀಸ್ತಾ ಸೆಟಲ್ವಾಡ್ ಎರಡು ತಿಂಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದರೂ ಯಾವುದೇ ಆರೋಪಪಟ್ಟಿ ಸಲ್ಲಿಸಿಲ್ಲ ಎಂದು ಈ ಮೊದಲು ನ್ಯಾಯಾಧೀಶರು ಹೇಳಿದ್ದರು.

ಈಗ, ಮಧ್ಯಂತರ ಜಾಮೀನು ನಂತರ ತೀಸ್ತಾ ಸೆಟಲ್ವಾಡ್ ಬಿಡುಗಡೆಯಾಗಲಿದ್ದಾರೆ. ಅವರು ದೇಶ ಬಿಟ್ಟು ಹೋಗದಂತೆ ತಮ್ಮ ಪಾಸ್‌ಪೋರ್ಟ್ ಅನ್ನು ಸಲ್ಲಿಸಬೇಕಾಗಿದೆ. ಹೀಗಾಗಿ ಅದಕ್ಕಾಗಿ ಅವರನ್ನು ಸಾಧ್ಯವಾದಷ್ಟು ಬೇಗ ಸಂಬಂಧಪಟ್ಟ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಎಂದು ಪೀಠವು ತೀರ್ಪು ನೀಡಿತು. ಜೊತೆಗೆ ಅವರು ತನಿಖೆಗೆ ಸಹಕರಿಸಬೇಕು ಎಂದು ನ್ಯಾಯಾಧೀಶರು ಹೇಳಿದ್ದಾರೆ.

English summary
Activist Teesta Setalvad granted interim bail by Supreme Court. She was arrested by Gujarat Police in June. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X