• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಭಿನಂದನ್ ಪ್ರಬುದ್ಧ ಪೈಲಟ್ ಆಗಿದ್ದು UPA ಅವಧಿಯಲ್ಲಿ: ಖುರ್ಷಿದ್

|

ನವದೆಹಲಿ, ಮಾರ್ಚ್ 04: 'ಅಭಿನಂದನ್ ಅವರು ಪ್ರಬುದ್ಧ ಪೈಲಟ್ ಆಗಿದ್ದು ಯುಪಿಎ ಅಧಿಕಾರಾವಧಿಯಲ್ಲಿ' ಎನ್ನುವ ಮೂಲಕ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಹೊಸ ವಿವಾದವೊಂದಕ್ಕೆ ಮುನ್ನುಡಿ ಬರೆದಿದ್ದಾರೆ.

ಪ್ರಾಣ ಒತ್ತೆ ಇಡಲೂ ಸಿದ್ಧರಾಗಿ ದೇಶಕ್ಕಾಗಿ ಹೋರಾಡುವ ಸೈನಿಕರನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುವ ನೀವು ಮನುಷ್ಯರಾ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೈಹಿಕ ಹಲ್ಲೆ ಇಲ್ಲದಿದ್ದರೂ ಮಾನಸಿಕ ಕಿರುಕುಳ ಅನುಭವಿಸಿದ್ದೇನೆ : ಅಭಿನಂದನ್

"ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಿಗೆ ಅಭಿನಂದನೆಗಳು. ಅವರು 2014 ರಲ್ಲಿ ವಿಂಗ್ ಕಮಾಂಡರ್ ಆಗಿ, ಯುಪಿಎ ಅವಧಿಯಲ್ಲಿ ಪ್ರಬುದ್ಧ ಪೈಲಟ್ ಆಗಿದ್ದು ಹೆಮ್ಮೆಯ ವಿಷಯ" ಎಂದು ಖುರ್ಷಿದ್ ಹೇಳಿದ್ದರು.

ಮಿಗ್ 21 ಬೈಸನ್ ಯುದ್ಧ ವಿಮಾನದ ಪೈಲಟ್ ಅಭಿನಂದನ್ ವರ್ಧಮಾನ್ ಅವರು ಫೆಬ್ರವರಿ 27ರಂದು ಪಾಕ್ ಸೇನೆಯ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದಲ್ಲದೆ, ಇತರ ವಿಮಾನಗಳನ್ನು ಹಿಮ್ಮೆಟ್ಟಿಸುವ ಸಮಯದಲ್ಲಿ ಪಾಕ್ ಸೇನೆಯ ವಶಕ್ಕೆ ಸಿಕ್ಕಿದ್ದರು. ಅವರನ್ನು ಕೂಡಲೇ ಬಿಟ್ಟುಬಿಡುವಂತೆ ಭಾರತ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಿದ ಕಾರಣ ಪಾಕಿಸ್ತಾನ ಅವರನ್ನು ಬಿಡುಗಡೆ ಮಾಡಲು ಒಪ್ಪಿ, ಮಾರ್ಚ್ 1 ರಂದು ವಾಘಾ ಗಡಿಯ ಮೂಲಕ ಅವರು ಮರಳಿ ತಾಯ್ನೆಲ ಭಾರತಕ್ಕೆ ಬಂದಿದ್ದರು.

English summary
Former union minister and Congress leader Salman Khurshid said IAF pilot Abhinandan Varthaman "matured" as a fighter pilot during the UPA rule, The comment becomes controversial now
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X