ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆ ಬಾಗಿಲಿಗೆ ಸರ್ಕಾರಿ ಸೇವೆ: ಎಎಪಿಯ ಹೊಸ ಯೋಜನೆ ಜಾರಿ

By Manjunatha
|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 10: ದೆಹಲಿಯ ಕೇಜ್ರಿವಾಲ್ ಸರ್ಕಾರದ ವಿನೂತನ ಯೋಜನೆ 'ಮನೆ ಬಾಗಿಲಿಗೆ ಸರ್ಕಾರಿ ಸೇವೆ' ಇಂದಿನಿಂದ ಜಾರಿ ಆಗಲಿದೆ.

40 ವಿವಿಧ ಸರ್ಕಾರಿ ಸೇವೆಗಳು ಇಂದಿನಿಂದ ದೆಹಲಿಯ ಜನರ ಮನೆ ಬಾಗಿಲಿಗೆ ತಲುಪಲಿವೆ. ಇಂದು ಈ ಯೋಜನೆಯನ್ನು ಅರವಿಂದ ಕೇಜ್ರಿವಾಲ್ ಅವರು ಉದ್ಘಾಟಿಸಲಿದ್ದಾರೆ.

ಆಶುತೋಷ್ ನಂತರ ಎಎಪಿ ತೊರೆಯಲು ಮುಂದಾದ ಆಶೀಶ್!ಆಶುತೋಷ್ ನಂತರ ಎಎಪಿ ತೊರೆಯಲು ಮುಂದಾದ ಆಶೀಶ್!

ಮದುವೆ ಪ್ರಮಾಣಪತ್ರ, ಆದಾಯ ಪ್ರಮಾಣ ಪತ್ರ, ವಿಳಾಸ ದೃಢೀಕರಣ, ಪಡಿತರ ಚೀಟಿ, ಚಾಲನಾ ಪರವಾನಗಿ, ನೀರಿನ ಸಂಪರ್ಕ, ಇನ್ನೂ ಹಲವು ಸೇವೆಗಳನ್ನು ಇನ್ನು ಮುಂದೆ ದೆಹಲಿಯ ಜನ ಮನೆಯಲ್ಲಿ ಕೂತೇ ಪಡೆಯಬಹುದು. ಹೀಗೆ ಮನೆ ಬಾಗಿಲಿಗೆ ಸೇವೆ ಪಡೆಯಲು ಕೇವಲ 50 ರುಪಾಯಿ ಹೆಚ್ಚಿಗೆ ಪಾವತಿಸಿದರೆ ಸಾಕು.

AAP’s doorstep delivery of services to start from September 10

ಮನೆ ಬಾಗಿಲಿಗೆ ಸರ್ಕಾರಿ ಸೇವೆ ಒದಗಿಸುತ್ತಿರುವುದು, ಸರ್ಕಾರದ ಮಟ್ಟದಲ್ಲಿ ಕ್ರಾಂತಿಕಾರಿ ನಿರ್ಣಯ, ಇದರಿಂಧ ಭ್ರಷ್ಟಾಚಾರಕ್ಕೆ ಭಾರಿ ಪೆಟ್ಟು ಬೀಳುತ್ತದೆ. ಅಲ್ಲದೆ ಸಾಮಾನ್ಯ ಜನಗಳಿಗೆ ಬಹಳ ಉಪಕಾರಿಯಾಗಲಿದೆ ಎಂದು ಕೇಜ್ರಿವಾಲ್ ಅವರು ಕೆಲವು ದಿನಗಳ ಹಿಂದೆ ಟ್ವೀಟ್ ಮಾಡಿದ್ದರು.

ಆಮ್ ಆದ್ಮಿ ಪಕ್ಷ ತೊರೆದ ಹಿರಿಯ ನಾಯಕ ಆಶುತೋಷ್ಆಮ್ ಆದ್ಮಿ ಪಕ್ಷ ತೊರೆದ ಹಿರಿಯ ನಾಯಕ ಆಶುತೋಷ್

ಯಾವುದೇ ಸೇವೆ ಪಡೆಯಲು ವ್ಯಕ್ತಿಯು ಕಾಲ್‌ಸೆಂಟರ್‌ಗೆ ಕರೆ ಮಾಡಿದೆ ಸಾಕು. ಸರ್ಕಾರದ ನಿಯೋಜಿತ ವ್ಯಕ್ತಿಯು ವ್ಯಕ್ತಿಯ ಮನೆಗೆ ಬಂದು ಸಂಬಧಪಟ್ಟ ದಾಖಲೆಗಳನ್ನು ಪಡೆದುಕೊಂಡು, ಪರಿಶೀಲನೆ ನಡೆಸಿ ಮುಂದಿನ ಕ್ರಮ ಜರುಗಿಸುತ್ತಾರೆ.

English summary
AAP's most awaited 'doorstep delivery of government services starts from September 10. Arvind Kejriwal today inaugurating the scheme today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X