ಎಎಪಿಯಿಂದ ವಕ್ತಾರೆ ಅಲ್ಕಾ ಲಾಂಬ ಉಚ್ಚಾಟನೆ

Posted By:
Subscribe to Oneindia Kannada

ನವದೆಹಲಿ, ಜೂನ್ 16: ಆಮ್ ಆದ್ಮಿ ಪಕ್ಷದ ಮುಖಂಡ, ದೆಹಲಿಯ ಮಾಜಿ ಸಾರಿಗೆ ಸಚಿವ ಗೋಪಾಲ್ ರಾಯ್ ಅವರಿಗೆ ಬೆಂಬಲ ಸೂಚಿಸಿದ ಕಾರಣಕ್ಕಾಗಿ ಪಕ್ಷದ ವಕ್ತಾರೆ ಅಲ್ಕಾ ಲಾಂಬ ಅವರನ್ನು ಪಕ್ಷದ ವಕ್ತಾರ ಸ್ಥಾನದಿಂದ ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ.

ಪ್ರೀಮಿಯಂ ಬಸ್ ಸೇವೆ ಹಗರಣದ ತನಿಖೆ ಪಾರದರ್ಶಕವಾಗಿ ನಡೆಯುವ ಉದ್ದೇಶದಿಂಡ ಗೋಪಾಲ್ ರಾಯ್ ಅವರು ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಮಾಜಿ ಸಾರಿಗೆ ಸಚಿವ ಗೋಪಾಲ್ ರಾಯ್ ಅವರಿಗೆ ಅಲ್ಕಾ ಲಾಂಬ ಬೆಂಬಲ ಸೂಚಿಸಿದ್ದರು.

AAP sacks Alka Lamba as party spokesperson for two months

ಆದರೆ, ಗೋಪಾಲ್ ರಾಯ್ ಆರೋಗ್ಯದ ಸಮಸ್ಯೆಯಿಂದಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಆಪ್ ತಿಳಿಸಿತ್ತು. ಆದರೆ ಕೇಜ್ರಿವಾಲ್ ಗೋಪಾಲ್ ರಾಯ್ಗೆ ರಾಜೀನಾಮೆ ನೀಡಲು ಸೂಚಿಸಿದ್ದರು ಎಂದು ಲಾಂಬಾ ತಿಳಿಸಿದ್ದರು.


ಲಂಬಾ ಅವರ ಹೇಳಿಕೆಯಿಂದ ಪಕ್ಷದ ಗೌರವಕ್ಕೆ ಧಕ್ಕೆ ಉಂಟಾಗಿರುವ ಕಾರಣ ಅವರನ್ನು ಪಕ್ಷದ ವಕ್ತಾರೆ ಸ್ಥಾನದಿಂದ ಹೊರಹಾಕಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Aam Aadmi Party leader Alka Lamba was suspended from the post of party spokesperson for two months on Tuesday, after she told reporters that Transport Minister Gopal Rai had been 'relieved' of the portfolio to ensure a fair probe into the Premium Bus Service scheme.
Please Wait while comments are loading...