ದೆಹಲಿ: ಲೋಕಸಭೆಗೆ 6 ಅಭ್ಯರ್ಥಿಗಳನ್ನು ಘೋಷಿಸಿದ AAP

ನವದೆಹಲಿ, ಮಾರ್ಚ್ 02: ಮುಂಬರುವ ಲೋಕಸಭಾ ಚುನಾವಣೆಗೆ ದೆಹಲಿಯ 7 ಕ್ಷೇತ್ರಗಳಲ್ಲಿ 6 ಕ್ಕೆ ತನ್ನ ಅಭ್ಯರ್ಥಿಗಳನ್ನು ಆಮ್ ಆದ್ಮಿ ಪಕ್ಷ ಘೋಷಿಸಿದೆ.

ಆಮ್ ಆದ್ಮಿ ಪಕ್ಷದೊಂದಿಗೆ ಮೈತ್ರಿ ಇಲ್ಲ ಎಂದು ಕಾಂಗ್ರೆಸ್ ಖಚಿತ ಪಡಿಸಿದ ನಂತರ AAP ಸಂಚಾಲಕ ಗೋಪಾಲ್ ರೈ ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಿದರು.

ಪಶ್ಚಿಮ ದೆಹಲಿ ಕ್ಷೇತ್ರವನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಕ್ಷೇತ್ರಗಳಲ್ಲೂ AAP ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಕಳೆದ ತಿಂಗಳು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ AAP ಮುಖಂಡ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, 'ನಾವು ಕಾಂಗ್ರೆಸ್ ಜೊತೆ ಮೈತ್ರಿಗೆ ಪರಯತ್ನಿಸಿದ್ದೆವು. ಆದರೆ ಅವರೇ ಮೈತ್ರಿಗೆ ಸಿದ್ಧವಿಲ್ಲ' ಎಂದಿದ್ದರು. ಈ ಬೆಳವಣಿಗೆಯ ನಂತರ ಮತ್ತೊಮ್ಮೆ ಆಮ್ ಆದ್ಮಿ ಪಕ್ಷ ಕಾಂಗ್ರೆಸ್ ಜೊತೆ ಮಾತುಕತೆಗೆ ಪ್ರಯತ್ನಿಸಿತ್ತಾದರೂ ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಶೀಲಾ ದೀಕ್ಷಿತ್ ಯತ್ನಕ್ಕೆ ತಣ್ಣೀರೆರೆಚಿದ ಪರಿಣಾಮ AAP ಸ್ವತಂತ್ರವಾಗಿ ಚುನಾವಣೆಗೆ ಸ್ಪರ್ಧಿಸಲಿದೆ.

ಅಭ್ಯರ್ಥಿಗಳು ಯಾರ್ಯಾರು?

ಅಭ್ಯರ್ಥಿಗಳು ಯಾರ್ಯಾರು?

ದೆಹಲಿಯ ಏಳು ಲೋಕಸಭಾ ಕ್ಷೇತ್ರಗಳಲ್ಲಿ AAP ಅಭ್ಯರ್ಥಿಗಳನ್ನು ಘೋಷಿಸಿದ್ದು, ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ.

ಪೂರ್ವ ದೆಹಲಿ- ಅತಿಶಿ
ವಾಯುವ್ಯ ದೆಹಲಿ-ಗುಗ್ಗನ್ ಸಿಂಗ್

ದಕ್ಷಿಣ ದೆಹಲಿಗೆ ಯಾರು ಅಭ್ಯರ್ಥಿ?

ದಕ್ಷಿಣ ದೆಹಲಿಗೆ ಯಾರು ಅಭ್ಯರ್ಥಿ?

ದಕ್ಷಿಣ ದೆಹಲಿ -ರಾಘವ್ ಚಧಾ
ಈಶಾನ್ಯ ದೆಹಲಿ - ದಿಲೀಪ್ ಪಾಂಡೆ
ಚಾಂದಿನಿ ಚೌಕ್- ಪಂಕಜ್ ಗುಪ್ತಾ
ನವದೆಹಲಿ- ಬೃಜೇಷ್ ಗೋಯಲ್

2014 ರ ಲೋಕಸಭಾ ಚುನಾವಣೆ

2014 ರ ಲೋಕಸಭಾ ಚುನಾವಣೆ

2014 ರ ಲೋಕಸಭಾ ಚುನಾವಣೆಯಲ್ಲಿ ದೆಹಲಿಯ ಏಳು ಕ್ಷೇತ್ರಗಳಲ್ಲಿ ಏಳನ್ನೂ ಬಿಜೆಪಿ ಗೆದ್ದುಕೊಂಡಿತ್ತು. ಬಿಜೆಪಿಯಿಂದ ಚಾಂದಿನಿ ಚೌಕ್ ಕ್ಷೇತ್ರದಿಂದ ಡಾ.ಹರ್ಷ ವರ್ಧನ್, ಮನೋಜ್ ತಿವಾರಿ(ಈಶಾನ್ಯ ದೆಹಲಿ), ಮಹೈಶ್ ಗಿರಿ (ಪೂರ್ವ ದೆಹಲಿ), ಮೀನಾಕ್ಷಿ ಲೇಖಿ (ನವದೆಹಲಿ), ಉದಿತ್ ರಾಜ್(ವಾಯುವ್ಯ ದೆಹಲಿ), ಪ್ರವೇಶ್ ವರ್ಮಾ (ಪಶ್ಚಿಮ ದೆಹಲಿ), ರಮೇಶ್ ಬಿಧುರಿ (ದಕ್ಷಿಣ ದೆಹಲಿ) ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು.

ಕಳೆದ ಚುನಾವಣೆಯಲ್ಲಿ AAP ಯಿಂದ ಸ್ಪರ್ಧಿಸಿದ್ದವರು

ಕಳೆದ ಚುನಾವಣೆಯಲ್ಲಿ AAP ಯಿಂದ ಸ್ಪರ್ಧಿಸಿದ್ದವರು

ಕಳೆದ ಲೋಕಸಭಾ ಚುನಾವಣೆಯಲ್ಲಿ AAP ಕಣಕ್ಕಿಳಿಸಿದ್ದ ಯಾವ ಅಭ್ಯರ್ಥಿಗಳನ್ನೂ ಈ ಬಾರಿ ಕಣಕ್ಕಿಳಿಸದಿರುವುದು ಅಚ್ಚರಿಯ ವಿಷಯವಾಗಿದೆ. ಕಳೆದ ಚುನಾವಣೆಯಲ್ಲಿ ಚಾಂದಿನಿ ಚೌಕ್ ಕ್ಷೇತ್ರದಿಂದ ಅಶುತೋಷ್, ಆನಂದ್ ಕುಮಾರ್(ಈಶಾನ್ಯ ದೆಹಲಿ), ರಾಜ್ ಮೋಹನ್ ಗಾಂಧಿ (ಪೂರ್ವ ದೆಹಲಿ), ಆಶಿಶ್ ಕೇತಾನ್ (ನವದೆಹಲಿ), ರಾಖಿ ಬಿರ್ಲಾ(ವಾಯುವ್ಯ ದೆಹಲಿ), ಜರ್ನೈಲ ಸಿಂಗ್ (ಪಶ್ಚಿಮ ದೆಹಲಿ), ದೇವೇಂದ್ರ ಶೆರಾವತ್ (ದಕ್ಷಿಣ ದೆಹಲಿ) ಅವರನ್ನು ಎಎಪಿ ಕಣಕ್ಕಿಳಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+