ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಜನರಿಗೆ ಭರ್ಜರಿ ಕೊಡುಗೆ ನೀಡಿದ ಆಪ್ ಸರ್ಕಾರ

|
Google Oneindia Kannada News

ನವದೆಹಲಿ, ಫೆ. 25 : ದೆಹಲಿ ಚುನಾವಣೆಯಲ್ಲಿ ಅಭೂತಪೂರ್ವ ಜಯಗಳಿಸಿ ಅಧಿಕಾರಪಡೆದ ಆಮ್ ಆದ್ಮಿ ಪಕ್ಷ ಜನರಿಗೆ ಭರ್ಜರಿ ಉಡುಗೊರೆ ನೀಡಿದೆ. ಪ್ರತಿ ತಿಂಗಳು 400 ಯುನಿಟ್‌ವರೆಗೆ ವಿದ್ಯುತ್ ಬಳಕೆ ಮಾಡಿದರೆ ಶೇ 50 ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದು ಘೋಷಿಸಿದೆ.

ಬುಧವಾರ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು, ಪ್ರತಿ ತಿಂಗಳು ಬಳಸುವ ವಿದ್ಯುತ್‌ನಲ್ಲಿ 400 ಯೂನಿಟ್ ಬಳಕೆವರೆಗೆ ಶೇ.50ರಷ್ಟು ರಿಯಾಯಿತಿ ನೀಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು. [ಚಿತ್ರಗಳಲ್ಲಿ : ಸಿಎಂ ಆದ ಅರವಿಂದ್ ಕೇಜ್ರಿವಾಲ್]

Manish Sisodia

ಪ್ರತಿ ತಿಂಗಳ 400 ಯೂನಿಟ್ ಬಳಕೆವರೆಗೆ ಶೇ.50ರಷ್ಟು ರಿಯಾಯಿತಿ ನೀಡಲಾಗುತ್ತದೆ. 400 ಯೂನಿಟ್‌ಗಿಂತ ಹೆಚ್ಚಿನ ವಿದ್ಯುತ್ ಬಳಕೆ ಮಾಡಿದರೆ ಪೂರ್ಣದರ ವಿಧಿಸಲಾಗುತ್ತದೆ. ವಿದ್ಯುತ್ ರಿಯಾಯಿತಿಯಿಂದ ಸರ್ಕಾರಕ್ಕೆ ಪ್ರತಿ ತಿಂಗಳು 70 ಕೋಟಿ ರೂಪಾಯಿ ಬೊಕ್ಕಸಕ್ಕೆ ಹೊರೆಯಾಗಲಿದೆ ಎಂದರು. [ಆಮ್ ಆದ್ಮಿ ಪ್ರಣಾಳಿಕೆಯಲ್ಲೇನಿದೆ?]

ಉಚಿತವಾಗಿ ನೀರು : ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳಿಗೆ 20 ಸಾವಿರ ಲೀಟರ್ ನೀರು ಉಚಿತವಾಗಿ ಪೂರೈಸಲಾಗುತ್ತದೆ. ಉಚಿತವಾಗಿ ನೀರಿನ ಕೊಡುಗೆ ನೀಡಲು 20 ಕೋಟಿ ರೂ. ವೆಚ್ಚವಾಗಲಿದೆ.

ಉಚಿತ ನೀರು, ಸಬ್ಸಿಡಿ ವಿದ್ಯುತ್ ಯೋಜನೆಗಳನ್ನು ಮಾರ್ಚ್‌ 1ರಿಂದ ಜಾರಿಗೆ ತರಲಾಗುತ್ತದೆ. ಸರ್ಕಾರದ ಈ ಯೋಜನೆಯಿಂದ ದೆಹಲಿಯ 18 ಲಕ್ಷ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ಉಪ ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.

English summary
Delhi Deputy Chief Minister Manish Sisodia on Wednesday announced that, every household will get 20,000 liters of water at no cost every month, families who use less than 400 units of power per month will get 50 % discount on bills.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X