ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಹುಮತ ಕಳೆದುಕೊಂಡ ದೆಹಲಿಯ ಆಪ್ ಸರ್ಕಾರ

|
Google Oneindia Kannada News

ನವದೆಹಲಿ, ಫೆ.10 : ಅಧಿಕಾರಕ್ಕೆಬಂದು ಒಂದು ತಿಂಗಳು ಕಳೆದ ಕೆಲವೇ ದಿನಗಳಲ್ಲಿ ನವದೆಹಲಿಯ ಆಮ್ ಆದ್ಮಿ ಸರ್ಕಾರ ಬಹುಮತ ಕಳೆದುಕೊಂಡಿದೆ. ಆಮ್ ಆದ್ಮಿ ಪಕ್ಷಕ್ಕೆ ಬೆಂಬಲ ನೀಡಿದ್ದ ಪಕ್ಷೇತರ ಶಾಸಕ ರಂಬೀರ್ ಶೊಕೀನ್ ಸೋಮವಾರ ತಮ್ಮ ಬೆಂಬಲ ಹಿಂಪಡೆದಿದ್ದಾರೆ. ಇದರಿಂದ ಸಿಎಂ ಅರವಿಂದ್ ಕೇಜ್ರಿವಾಲ್ ಸರ್ಕಾರ ಸಂಕಷ್ಟಕ್ಕೆ ಸಿಲುಕಿದೆ.

ಅರವಿಂದ್ ಕೇಜ್ರಿವಾಲ್ ಸರ್ಕಾರ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಲು ವಿಫಲವಾಗಿದೆ ಎಂದು ಆರೋಪಿಸಿರುವ ರಂಬೀರ್ ಶೊಕೀನ್ ಬೆಂಬಲ ವಾಪಸ್ ಪಡೆದಿದ್ದಾರೆ. ಉಪ ರಾಜ್ಯಪಾಲ ನಜೀಬ್ ಜಂಗ್ ಅವರನ್ನು ಸೋಮವಾರ ಸಂಜೆ ಭೇಟಿ ಮಾಡಿದ ಅವರು, ಬೆಂಬಲ ವಾಪಸ್ ಪಡೆಯುತ್ತಿರುವುದಾಗಿ ಪತ್ರ ನೀಡಿದ್ದಾರೆ.

arvind kejriwal

ಡಿಸೆಂಬರ್ 4ರಂದು ನಡೆದ ಚುನಾವಣೆಯಲ್ಲಿ 70 ಸದಸ್ಯ ಬಲದ ವಿಧಾನಸಭೆಯಲ್ಲಿ ಆಮ್ ಆದ್ಮಿ ಪಕ್ಷ 28 ಸ್ಥಾನಗಳನ್ನು ಗಳಿಸಿತ್ತು. ಕಾಂಗ್ರೆಸ್ ಪಕ್ಷದ 8, ಒಬ್ಬರು ಜೆಡಿಯು ಮತ್ತು ಒಬ್ಬರು ಪಕ್ಷೇತರ ಶಾಸಕರ ಬಾಹ್ಯ ಬೆಂಬಲದಿಂದ ಸರ್ಕಾರ ರಚನೆ ಮಾಡಿತ್ತು. ಮುಖ್ಯಮಂತ್ರಿಯಾಗಿ ಅರವಿಂದ್ ಕೇಜ್ರಿವಾಲ್ ಅಧಿಕಾರಕ್ಕೇರಿದ್ದರು. [ಕೇಜ್ರಿವಾಲ್ ಸರ್ಕಾರಕ್ಕೆ ಹೊಸ ಸಂಕಷ್ಟ]

ಸದ್ಯದ ಒಬ್ಬರು ಬೆಂಬಲ ವಾಪಸ್ ಪಡೆದಿರುವುದರಿಂದ ಆಮ್ ಆದ್ಮಿ ಪಕ್ಷಕ್ಕೆ ಒಬ್ಬರು ಶಾಸಕರ ಕೊರತೆ ಉಂಟಾಗಿದೆ. ಬಲಾಬಲದ ಪ್ರಕಾರ ಆಮ್ ಆದ್ಮಿ ಪಕ್ಷದ 27 (ಒಬ್ಬರು ಸ್ಪೀಕರ್), ಕಾಂಗ್ರೆಸ್ ಪಕ್ಷದ 8 ಶಾಸಕರು, ಒಬ್ಬರು ಜೆಡಿಯು ಶಾಸಕರು ಸರ್ಕಾರದ ಪರವಾಗಿದ್ದಾರೆ. ಆದ್ದರಿಂದ ಸರ್ಕಾರ ಬಹುಮತಕ್ಕೆ ಒಂದು ಸ್ಥಾನದ ಕೊರತೆ ಉಂಟಾಗಿದೆ.

ದೆಹಲಿ ಸರ್ಕಾರದ ಬಲಾಬಲ

ಆಮ್ ಆದ್ಮಿ ಪಕ್ಷ - 27 (ವಿನೋದ್ ಕುಮಾರ್ ಬಿನ್ನಿ ಉಚ್ಚಾಟನೆ)
ಕಾಂಗ್ರೆಸ್ -8
ಜೆಡಿಯು-1
ಒಟ್ಟು - 36
ಆದರೆ, ಆಮ್ ಆದ್ಮಿ ಪಕ್ಷದ ಒಬ್ಬರು ಶಾಸಕರು ಸ್ಪೀಕರ್ ಆಗಿರುವುದರಿಂದ ಶಾಸಕರ ಒಟ್ಟು ಸಂಖ್ಯೆ 35ಕ್ಕೆ ಕುಸಿದಿದೆ. ಬಹುಮತಕ್ಕೆ 1 ಶಾಸಕರ ಅಗತ್ಯವಿದೆ.

English summary
The Aam Aadmi party government in Delhi has lost majority after lone Independent MLA Rambeer Shokeen withdrawn his support on Monday. Shokeen had been threatening to withdraw support if the Kejriwal government did not fulfill its promises.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X