• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಧಾರ್ ಗೆ ಸಾಂವಿಧಾನಿಕ ಮಾನ್ಯತೆ: ಯಾರು ಏನಂದರು?

|

ನವದೆಹಲಿ, ಸೆಪ್ಟೆಂಬರ್ 26: ಸಾರ್ವತ್ರಿಕ ಗುರುತಿನ ಚೀಟಿಯಾದ ಆಧಾರ್ ಅನ್ನು ಎಲ್ಲಾ ಅಗತ್ಯ ಸೇವೆಗಳಿಗೆ ಕಡ್ಡಾಯ ಮಾಡುವ ಕ್ರಮವನ್ನು ವಿರೋಧಿಸಿ ಸಲ್ಲಿಸಲಾಗಿದ್ದ ಅರ್ಜಿ ತೀರ್ಪನ್ನು ಇಂದು ಸುಪ್ರೀಂ ಕೋರ್ಟ್ ನೀಡಿದೆ.

ಆಧಾರ್ ಸಾಂವಿಧಾನಿಕ ಮಾನ್ಯತೆ ಎತ್ತಿಹಿಡಿದ ಸುಪ್ರೀಂ ಕೋರ್ಟ್ ಆಧಾರ್ ನಂಥ ವಿಶಿಷ್ಟ ಗುರುತಿನ ಚೀಟಿ ಇರುವುದು ಒಳ್ಳೆಯದು ಎಂದು ಹೇಳಿದೆ.

ಸುಪ್ರೀಂ ತೀರ್ಪಿನ ನಂತರ ಯಾವ್ಯಾವುದಕ್ಕೆ ಆಧಾರ್ ಕಡ್ಡಾಯ? ಯಾವುದಕ್ಕೆ ಕಡ್ಡಾಯವಲ್ಲ?

ಆದರೆ ಮೊಬೈಲ್ ನಂಬರ್ ಗೆ, ಬ್ಯಾಂಕ್ ಖಾತೆಗೆ, ಶಿಕ್ಷಣ ಸಂಸ್ಥೆಗಳಲ್ಲಿ ಆಧಾರ್ ಕಡ್ಡಾಯ ಮಾಡುವ ಅಗತ್ಯವಿಲ್ಲ ಎಂಬ ಮಹತ್ವದ ಆದೇಶವನ್ನೂ ಇಂದು ಸುಪ್ರೀಂ ಕೋರ್ಟ್ ನೀಡಿದೆ.

ಐಟಿ ರಿಟರ್ನ್ಸ್ ಸಲ್ಲಿಸಲು, ಬ್ಯಾಂಕ್ ಖಾತೆ ಮತ್ತು ಪ್ಯಾನ್ ನಂಬರ್ ಗೆ ಜೊತೆಗೆ ಆಧಾರ್ ಅನ್ನು ಜೋಡಿಸುವುದನ್ನು ಕಡ್ಡಾಯಗೊಳಿಸಿದೆ.

ಇಂದು ಸುಪ್ರೀಂ ಕೋರ್ಟ್ ನೀಡಿದ 3 ಐತಿಹಾಸಿಕ ತೀರ್ಪುಗಳ ಸುತ್ತ...

ಆಧಾರ್ ಕುರಿತ ಸುಪ್ರೀಂ ಕೋರ್ಟ್ ತೀರ್ಪಿಗೆ ಯಾರೆಲ್ಲ ಹೇಗೆ ಪ್ರತಿಕ್ರಿಯಿಸಿದ್ದಾರೆ, ಕೇಳಿ....

ಅಭಿಷೇಕ್ ಮನು ಸಿಂಘ್ವಿ

ಅಭಿಷೇಕ್ ಮನು ಸಿಂಘ್ವಿ

'ಆಧಾರ್ ಕಾಯ್ದೆಯ ಸೆಕ್ಷನ್ 57 ಅನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ಕ್ರಮ ಸ್ವಾಗತಾರ್ಹ. ಖಾಸಗೀ ಸಂಸ್ಥೆಗಳು ಆಧಾರ್ ಅನ್ನು ಕಡ್ಡಾಯವೆನ್ನುವಂತಿಲ್ಲ ಎಂಬ ತೀರ್ಪು ಬಿಜೆಪಿಗೆ ಕಪಾಳಮೋಕ್ಷ'- ಅಭಿಷೇಕ್ ಮನು ಸಿಂಘ್ವಿ, ಕಾಂಗ್ರೆಸ್ ಮುಖಂಡ

ಡಾ.ಹರ್ಷವರ್ಧನ್

ಡಾ.ಹರ್ಷವರ್ಧನ್

"ಸುಪ್ರೀಂ ಕೋರ್ಟ್ ಆಧಾರ್ ನ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿಹಿಡಿಡಿದ್ದು ಶ್ಲಾಘನೀಯ. ಆಧಾರ್ ಅನ್ನು ಸಾಮಾಜಿಕ ಯೋಜನೆಗಳಿಗೆ, ಆದಾಯ ತೆರಿಗೆಗೆ, ಪಾನ್ ಕಾರ್ಡ್ ಗೆ ಕಡ್ಡಾಯಗೊಳಿಸಿರುವುದು ಸ್ವಾಗತಾರ್ಹ ಕ್ರಮ"- ಡಾ.ಹರ್ಷವರ್ಧನ್, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ, ಬಿಜೆಪಿ ಮುಖಂಡ

ಆಧಾರ್ ಸಾಂವಿಧಾನಿಕ ಮಾನ್ಯತೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

ಸಂಬಿತ್ ಪಾತ್ರಾ

ಸಂಬಿತ್ ಪಾತ್ರಾ

'ಆಧಾರ್ ಗೆ ಸಾಂವಿಧಾನಿಕ ಮಾನ್ಯತೆ ನೀಡಿದ ಸುಪ್ರೀಂ ಕ್ರಮ ನಮಗೆ ಸಿಕ್ಕ ಬಹುದೊಡ್ಡ ಗೆಲುವು. ಅಲ್ಲದೆ, ಆಧಾರ್ ಬಡವರಿಗೆ ಎಲ್ಲಾ ಯೋಜನೆಗಳ ಫಲವೂ ಸಿಗಬೇಕು ಎಂಬ ಕಾರಣಕ್ಕೆ ಸರ್ಕಾರಿ ಯೋಜನೆಗಳಿಗೆ ಆಧಾರ್ ಅನ್ನು ಕಡ್ಡಾಯ ಮಾಡುವ ಕ್ರಮವನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದ್ದು ಸಹ ಸ್ವಾಗತಾರ್ಹ ನಿರ್ಧಾರ' -ಸಂಬಿತ್ ಪಾತ್ರ, ಬಿಜೆಪಿ ಸಾಮಾಜಿಕ ಮಾಧ್ಯಮ ಮುಖ್ಯಸ್ಥ.

ಅರುಣ್ ಜೇಟ್ಲಿ

ಅರುಣ್ ಜೇಟ್ಲಿ

"ಇದೊಂದು ಐತಿಹಾಸಿಕ ತೀರ್ಪು. ಆಧಾರ್ ಪರಿಕಲ್ಪನೆಯನ್ನು ನ್ಯಾಯಾಂಗದ ವಿಚಾರಣೆಯ ನಂತರ ಒಪ್ಪಲಾಗಿದೆ. ನಾವು ಸುಪ್ರೀಂ ಕೋರ್ಟಿನ ಈ ತೀರ್ಪನ್ನು ಸ್ವಾಗತಿಸುತ್ತೇವೆ. ಆಧಾರ್ ಅನ್ನು ತಾನೇ ಪರಿಚಯಿಸಿದ್ದು ಎಂದು ಕಾಂಗ್ರೆಸ್ ಹೇಳಿತ್ತು. ಆದರೆ ಅದನ್ನು ಹೇಗೆ ಜಾರಿಗೆ ತರಬೇಕು ಎಂಬುದು ಅದಕ್ಕೆ ಗೊತ್ತಿರಲಿಲ್ಲ. ಅದು ಅದರ ವೈಫಲ್ಯ. ನಾವದನ್ನು ಜಾರಿಗೆ ತಂದೆವು"- ಅರುಣ್ ಜೇಟ್ಲಿ, ಹಣಕಾಸು ಸಚಿವ

ಮೀಸಲಾತಿ ಕುರಿತ ಸುಪ್ರೀಂ ಆದೇಶ ಸ್ವಾಗತಿಸಿದ ಮಾಯಾವತಿ

ಕಪಿಲ್ ಸಿಬಲ್

ಕಪಿಲ್ ಸಿಬಲ್

'ಆಧಾರ್ ಕಾಯ್ದೆಯ ಸೆಕ್ಷನ್ 57 ಅನ್ನು ರದ್ದುಗೊಳಿಸುವ ಮೂಲಕ ಆಧಾರ್ ನಿಂದ ಸಂಭವಿಸುತ್ತಿದ್ದ ಅಚಾತುರ್ಯಗಳನ್ನು ಸುಪ್ರೀಂ ಕೋರ್ಟ್ ತಪ್ಪಿಸಿದೆ. ಯುಪಿಎ ಸರ್ಕಾರ ಪರಿಚಯಿಸಿದ್ದ ಆಧಾರ್ ನಿಯಮವನ್ನು ಇಂದಿನ ಕೇಂದ್ರ ಸರ್ಕಾರ ತನ್ನ ಅಗತ್ಯಕ್ಕೆ ತಕ್ಕಂತೆ ತಿರುಚಿಕೊಂಡಿತ್ತು. ಈ ತೀರ್ಪಿನಿಂದ ಅದಕ್ಕೆ ಮುಖಭಂಗವುಂಟಾಗಿದೆ'-ಕಪಿಲ್ ಸಿಬಲ್, ಕಾಂಗ್ರೆಸ್ ಮುಖಂಡ

English summary
Supreme Court in its verdict today tells Aadhaar validity is constitutional. Here is leaders reactions about Aadhaar verdict.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X