ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

91 ಕ್ರಿಮಿನಲ್ ಹಿನ್ನೆಲೆಯವರು, 186 ಕೋಟ್ಯಾಧೀಶರಿಗೆ ಸೋಲು

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ ವಿಧಾನಸಭೆಗೆ ಈ ಬಾರಿ ಆಯ್ಕೆಯಾಗಿರುವ ಸದಸ್ಯರ ಹಿನ್ನೆಲೆ ಗೊತ್ತೇ? 24 ಶಾಸಕರು ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ. 44 ಕೋಟ್ಯಧಿಪತಿಗಳು ಈ ಬಾರಿ ಜನಪ್ರತಿನಿಧಿಗಳಾಗಿದ್ದಾರೆ. ದೆಹಲಿ ವಿಧಾನಸಭೆ ಸದಸ್ಯರ ಕ್ರಿಮಿನಲ್ ಹಾಗೂ ಆರ್ಥಿಕ ಹಿನ್ನೆಲೆಯ ಕುರಿತು ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ಎಡಿಆರ್) ಸಂಸ್ಥೆಯು ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ಬಹಿರಂಗಗೊಂಡಿದೆ.

ಚುನಾವಣೆಗೆ ನಿಂತಿದ್ದ 673 ಅಭ್ಯರ್ಥಿಗಳಲ್ಲಿ 91 ಜನ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದರು. 186 ಅಭ್ಯರ್ಥಿಗಳು ತಾವು ಕೋಟ್ಯಧಿಪತಿಗಳು ಎಂದು ಚುನಾವಣೆಗೆ ಮೊದಲೇ ತಿಳಿಸಿದ್ದರು. [ಶಾ, ಮೋದಿ ಮಾಡಿದ ಯಡವಟ್ಟೇನು?]

aap

ಸಮೀಕ್ಷೆಯಲ್ಲಿ ಕಂಡುಬಂದ ಮುಖ್ಯ ಅಂಶಗಳು ಹೀಗಿವೆ...

  • ನೂತನವಾಗಿ ಆಯ್ಕೆಗೊಂಡ ಎಲ್ಲ ಶಾಸಕರ ಸರಾಸರಿ ಮತದ ಹಂಚಿಕೆಯು ಶೇ. 55ರಷ್ಟಿದೆ.
  • ಆಯ್ಕೆಯಾಗಿರುವ 55 (ಶೇ. 79) ಶಾಸಕರು ಶೇ. 50 ಅಥವಾ ಅದಕ್ಕಿಂತ ಹೆಚ್ಚಿನ ಮತ ಹಂಚಿಕೆ ಹೊಂದಿದ್ದಾರೆ.
  • ಅತಿ ಹೆಚ್ಚು ಮತ ಹಂಚಿಕೆ ಹೊಂದಿರುವ ಶಾಸಕ ಆಮ್ ಆದ್ಮಿಯ ಪ್ರಕಾಶ್. ಅವರು ಡಿಯೋಲಿ ಕ್ಷೇತ್ರದಲ್ಲಿ ಶೇ. 71ರಷ್ಟು ಮತ ಪಡೆದಿದ್ದಾರೆ.
  • ಆಮ್ ಆದ್ಮಿಯ ಕೈಲಾಶ್ ಗಾಹ್ಲೋಟ್ ಅವರು ನಾಜಫ್ಘಡ್ ಕ್ಷೇತ್ರದಲ್ಲಿ ಶೇ. 35ರಷ್ಟು ಮತ ಗಳಿಸಿ ಗೆದ್ದಿದ್ದಾರೆ. [ಮೋದಿ ಗುಲಾಮಗಿರಿಗೆ ಏಟು]
  • ಪ್ರತಿ ಶಾಸಕರು ಸರಾಸರಿ 22ರಷ್ಟು ಮತಗಳ ಅಂತರದಿಂದ ಗೆಲುವು ಸಾಧಿಸಿದಂತಾಗಿದೆ. (ಗೆದ್ದ ಅಭ್ಯರ್ಥಿ ಪಡೆದ ಮತ- ದ್ವಿತೀಯ ಸ್ಥಾನ ಪಡೆದ ಅಭ್ಯರ್ಥಿ ಗಳಿಸಿದ ಮತ/ ಒಟ್ಟು ಮಾನ್ಯಗೊಂಡ ಮತಗಳು)
  • ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದವರು ಸುಲ್ತಾನಪುರ ಮತಕ್ಷೇತ್ರದ ಸಂದೀಪ್ ಕುಮಾರ್. ಅವರು ಶೇ. 56ರಷ್ಟು ಅಂದರೆ 64,439 ಮತಗಳ ಅಂತರದಿಂದ ಗೆದ್ದಿದ್ದಾರೆ.
  • ಅತಿ ಹೆಚ್ಚು ಅಂತರದಿಂದ ಗೆದ್ದವರು ವಿಕಾಸ್‌ಪುರಿ ಕ್ಷೇತ್ರದ ಆಮ್ ಆದ್ಮಿಯ ಮಹೀಂದರ್ ಯಾದವ್. ಅವರು 77,665 ಮತಗಳ ಅಂತರದಿಂದ ಗೆದ್ದಿದ್ದಾರೆ. (ಗೆದ್ದ ಅಭ್ಯರ್ಥಿ ಪಡೆದ ಮತ - ದ್ವಿತೀಯ ಸ್ಥಾನ ಪಡೆದ ಅಭ್ಯರ್ಥಿ ಪಡೆದ ಮತ)
  • ಅತ್ಯಂತ ಕಡಿಮೆ ಸರಾಸರಿ ಅಂತರದಿಂದ ಗೆಲುವು ಸಾಧಿಸಿದವರು ಆಮ್ ಆದ್ಮಿಯ ಕೈಲಾಶ್ ಗಹ್ಲೋಟ್. ಅವರು ನಜಾಫ್ಘರ್ ಕ್ಷೇತ್ರದಲ್ಲಿ ಶೇ. 1ರಷ್ಟು ಅಂದರೆ 1,555 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
  • ದೆಹಲಿ ಚುನಾವಣೆಯಲ್ಲಿ 35,924 (ಶೇ. 0.40ರಷ್ಟು) ನೋಟಾ ಮತಗಳು ಬಿದ್ದಿವೆ.
  • ಅತಿ ಹೆಚ್ಚು ಸರಾಸರಿ ನೋಟಾ ಮತ (ಶೇ. 0.66) ಬಿದ್ದಿರುವುದು ಮಾಡೆಲ್ ಟೌನ್ ಕ್ಷೇತ್ರದಲ್ಲಿ.
  • ಅತಿ ಹೆಚ್ಚು ನೋಟಾ ಮತ ಬಿದ್ದಿರುವುದು ಮಟಿಯಾಲಾ ಕ್ಷೇತ್ರದಲ್ಲಿ ಇಲ್ಲಿ. 1,102 (ಶೇ. 0.47) ನೋಟಾ ಮತಗಳು ಬಿದ್ದಿವೆ.

ಕ್ರಿಮಿನಲ್ ಹಿನ್ನೆಲೆ: ಒಟ್ಟು 70 ಶಾಸಕರಲ್ಲಿ 24 (ಶೇ. 34) ಶಾಸಕರು ತಮಗೆ ಕ್ರಿಮಿನಲ್ ಹಿನ್ನೆಲೆ ಇದೆ ಎಂದು ಘೋಷಿಸಿದ್ದಾರೆ. ಇವರಲ್ಲಿ 23 (ಶೇ. 34ರಷ್ಟು) ಶಾಸಕರು ಆಮ್ ಆದ್ಮಿ ಪಕ್ಷದವರು ಹಾಗೂ ಬಿಜೆಪಿಯ ಓರ್ವ ಶಾಸಕ ಇದ್ದಾರೆ.

ದೆಹಲಿ ವಿಧಾನಸಭೆಯ 70 ಶಾಸಕರಲ್ಲಿ 25 ಜನ (ಶೇ. 36) ತಾವು ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವುದಾಗಿ ತಿಳಿಸಿದ್ದರು. 2008ರ ವಿಧಾನಸಭೆಯಲ್ಲಿ ಈ ಸಂಖ್ಯೆ 29 ಇತ್ತು. ಆದರೆ, ಇವರಲ್ಲಿ ಯಾರೂ ಹತ್ಯೆ, ಹತ್ಯೆಗೆ ಯತ್ನ, ಮಹಿಳೆ ಮೇಲೆ ದೌರ್ಜನ್ಯ ಇತರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿಲ್ಲ. [ಆಪ್ ಗೆಲುವಿನ ಗುಟ್ಟು ಬಯಲು]

ಚುನಾವಣೆಯಲ್ಲಿ ಸೋತವರು : 2015ರ ವಿಧಾನಸಭೆ ಚುನಾವಣೆಯಲ್ಲಿ ನಿಂತಿದ್ದ 673 ಅಭ್ಯರ್ಥಿಗಳಲ್ಲಿ 91 ಜನ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದರು. ಅವರಲ್ಲಿ 60 ಜನ ಹತ್ಯೆ, ಹತ್ಯೆಗೆ ಯತ್ನ ಹಾಗೂ ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣ ಎದುರಿಸುತ್ತಿದ್ದಾರೆ. ಆದರೆ, ಇವರೆಲ್ಲ ಸೋತಿದ್ದಾರೆ. ಅವರಲ್ಲಿ 21 ಕಾಂಗ್ರೆಸ್, 26 ಬಿಜೆಪಿ, 12 ಬಿಎಸ್ಪಿ ಹಾಗೂ ಓರ್ವ ಆಪ್ ಅಭ್ಯರ್ಥಿಗಳು.

ಯಾವುದೇ ಕ್ರಿಮಿನಲ್ ಮೊಕದ್ದಮೆ ಹೊಂದಿರದೆ ಗೆಲುವಿನ ಅವಕಾಶ ಹೊಂದಿದ್ದ ಅಭ್ಯರ್ಥಿಗಳ ಸಂಖ್ಯೆ ಶೇ. 8. ಈ ಸಂಖ್ಯೆ 2013ರಲ್ಲಿ ಶೇ. 7ರಷ್ಟು ಹಾಗೂ 2008ರಲ್ಲಿ ಶೇ. 6ರಷ್ಟು ಇತ್ತು.

ಕ್ರಿಮಿನಲ್ ರೆಕಾರ್ಡ್ ಹೊಂದಿರುವ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆ 2015ರ ಚುನಾವಣೆಯಲ್ಲಿ ಶೇ. 21ರಷ್ಟು ಇತ್ತು. ಈ ಸಂಖ್ಯೆ 2013ರಲ್ಲಿ ಶೇ. 19ರಷ್ಟು ಹಾಗೂ 2008ರಲ್ಲಿ ಶೇ. 26ರಷ್ಟಿತ್ತು.

ಆರ್ಥಿಕ ಹಿನ್ನೆಲೆ : ಪ್ರಸಕ್ತ ವಿಧಾನಸಭೆಯ 70 ಶಾಸಕರಲ್ಲಿ 44 (ಶೇ. 63) ಜನ ಕೋಟ್ಯಧಿಪತಿಗಳು. ಈ ಸಂಖ್ಯೆ 2013ರಲ್ಲಿ 51 (ಶೇ. 73) ಹಾಗೂ 2008ರಲ್ಲಿ 47 (ಶೇ. 69) ರಷ್ಟಿತ್ತು.

ಆಯ್ಕೆಯಾದ 70 ಶಾಸಕರಲ್ಲಿ 11 ಜನ ತಾವು 10 ಕೋಟಿ ರು.ಗಿಂತ ಹೆಚ್ಚು ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ. ಕೋಟಿ ರು.ಗಿಂತ ಹೆಚ್ಚು ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದ 186 ಅಭ್ಯರ್ಥಿಗಳು ಚುನಾವಣೆಯಲ್ಲಿ ಸೋತಿದ್ದಾರೆ.

ಸೋತವರಲ್ಲಿ 51 ಅಭ್ಯರ್ಥಿಗಳು 10 ಕೋಟಿ ರು.ಗಿಂತ ಹೆಚ್ಚು ಆಸ್ತಿ ಹೊಂದಿದ್ದರು. 13 ಜನ 20 ಕೋಟಿ ರು.ಗಿಂತ ಅಧಿಕ ಹಾಗೂ 7 ಜನ 30 ಕೋಟಿ ರು.ಗಿಂತ ಅಧಿಕ ಆಸ್ತಿ ಹೊಂದಿದ್ದರು. ರಾಜೋರಿ ಗಾರ್ಡನ್ ಕ್ಷೇತ್ರದಲ್ಲಿ ಸೋಲನುಭವಿಸಿದ ಮಜಿಂದರ್ ಸಿಂಗ್ ಸಿರ್ಸಾ (ಶಿರೋಮಣಿ ಅಕಾಲಿ ದಳ) ಎಂಬುವರು 239 ಕೋಟಿ ರು. ಆಸ್ತಿ ಹೊಂದಿದ್ದರು. [ಜಾಗೃತ ದೆಹಲಿಗರ ಒಗ್ಗಟ್ಟು]

ಸರಾಸರಿ ಆಸ್ತಿಗಳು : ಈ ಬಾರಿ ಗೆದ್ದಿರುವ ಶಾಸಕರ ಒಟ್ಟು ಸರಾಸರಿ ಆಸ್ತಿ ಮೊತ್ತ 6.29 ಕೋಟಿ ರು. ಆಗುತ್ತದೆ. ಈ ಮೊತ್ತ 2013ರಲ್ಲಿ 10.83 ಕೋಟಿ ರು. ಹಾಗೂ 2008 ರಲ್ಲಿ 2.81 ಕೋಟಿ ರು. ಇತ್ತು.

ಒಟ್ಟು 10 ಶಾಸಕರು ಒಂದು ಕೋಟಿ ರು. ಹಾಗೂ ಅದಕ್ಕಿಂತ ಹೆಚ್ಚಿನ ಸಾಲ ಹೊಂದಿದ್ದಾರೆ. ಇಬ್ಬರು ಶಾಸಕರ ವಾರ್ಷಿಕ ಆದಾಯ ಒಂದು ಕೋಟಿ ರು.ಗಿಂತ ಹೆಚ್ಚಿದೆ. ಐವರು ಶಾಸಕರು ತಮ್ಮ ಆದಾಯ ತೆರಿಗೆ ವಿವರವನ್ನು ಘೋಷಿಸಿಲ್ಲ.

English summary
24 MLAs with pending criminal cases and 44 crorepatis will be part of the new Delhi government. An analysis conducted by the Association for Democratic Reforms (ADR) gives this picture.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X