ರಯಾನ್ ಶಾಲೆ ವಿದ್ಯಾರ್ಥಿ ಹತ್ಯೆ: ಪ್ರಾಂಶುಪಾಲ ಸೇರಿ 4 ಬಂಧನ

Posted By:
Subscribe to Oneindia Kannada

ನವದೆಹಲಿ, ಸೆಪ್ಟೆಂಬರ್ 8: ಗುರುಗ್ರಾಮದ ರಿಯಾನ್ ಶಾಲೆಯಲ್ಲೇ ನಡೆದಿರುವ 2ನೇ ತರಗತಿ ವಿದ್ಯಾರ್ಥಿಯಾಗಿದ್ದ ಪ್ರದ್ಯುಮನ್ ಠಾಕೂರ್ (7) ವಿದ್ಯಾರ್ಥಿಯ ಕೊಲೆ ದೇಶಾದ್ಯಂತ ತೀವ್ರ ಆತಂಕ ಹುಟ್ಟಿಸಿದೆ.

ಶುಕ್ರವಾರ (ಸೆ. 8) ಬೆಳಗ್ಗೆ ಎಂದಿನಂತೆ ಶಾಲೆಗೆ ಬಂದಿದ್ದ ಪ್ರದ್ಯುಮನ್, ಶಾಲೆಯ ಶೌಚಾಲಯದಲ್ಲಿ ಶವವಾಗಿ ಸಿಕ್ಕಿದ್ದ. ಆತನನ್ನು ಕತ್ತು ಸೀಳಿ ಕೊಲೆಗೈಯ್ಯಲಾಗಿತ್ತು. ಆತನ ಮೃತದೇಹದ ಬಳಿ ಹತ್ಯೆಗೆ ಬಳಸಲಾಗಿರುವ ಚಾಕುವೂ ಲಭ್ಯವಾಗಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಶಾಲೆಯ ಪ್ರಾಂಶುಪಾಲ, ಶವವನ್ನು ಮೊದಲು ನೋಡಿದ ಶಾಲಾ ಬಸ್ ನ ಡ್ರೈವರ್ ಹಾಗೂ ಕೆಲವಾರು ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಪೋಷಕರಿಂದ ದಾಂಧಲೆ

ವಾಟ್ಸಾಪ್ ನಲ್ಲಿ ಈ ಸುದ್ದಿ ಹರಡುತ್ತಿದ್ದಂತೆ ಶಾಲೆಯ ಮುಂದೆ ಭಾರೀ ಪ್ರಮಾಣದಲ್ಲಿ ಜಮಾಯಿಸಿದ ಜನರು ಶಾಲೆಯ ಒಳಗೆ ನುಗ್ಗಿ ಪೀಠೋಪಕರಣಗಳನ್ನು ಕಿತ್ತೆಸೆದು ದಾಂಧಲೆ ಮಾಡಿದರು. ಕಿಟಕಿಗಳ ಗಾಜು ಒಡೆದುಹಾಕಿದರು. ಆಗ ಶಾಲೆಗೆ ಧಾವಿಸಿದ ಪೊಲೀಸ್ ಸಿಬ್ಬಂದಿಯು ಪ್ರತಿಭಟನಾಕಾರರನ್ನು ಹೊರಹಾಕಿದರು.

ಆದರೂ, ಗೇಟ್ ನ ಮುಂದೆ ನಿಂತ ಜನರು ಶಾಲೆಯ ಆಡಳಿತ ಮಂಡಳಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರದ್ಯುಮನ್ ಸಾವಿಗೆ ನ್ಯಾಯ ಸಿಗಬೇಕೆಂದು ಒತ್ತಾಯಿಸಿದರು.

9 year old student found dead in Gurugram School toilet

ಏತನ್ಮಧ್ಯೆ, ಕೊಲೆ ಪ್ರಕರಣದ ತನಿಖೆ ಕೈಗೊಂಡಿರುವ ಪೊಲೀಸರು ಶಾಲೆ ಹಾಗೂ ಸುತ್ತಲಿನ ಕಟ್ಟಡಗಳ ಸಿಸಿಟಿವಿಯ ದೃಶ್ಯಾವಳಿಗಳನ್ನು ವಶಪಡಿಸಿಕೊಂಡಿದ್ದಾರೆ.

ಬಾಲಕನ ತಂದೆಯು ಖಾಸಗಿ ಕಂಪನಿಯೊಂದರಲ್ಲಿ ಕ್ವಾಲಿಟಿ ಚೆಕಿಂಗ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದು, ಶುಕ್ರವಾರ ಬೆಳಗ್ಗೆಯೇ ತನ್ನ ಮಗನನ್ನು ಶಾಲೆಗೆ ಡ್ರಾಪ್ ಮಾಡಿ ಮನೆಗೆ ಬಂದಿದ್ದರು. ಹಾಗೆ ಮನೆಗೆ ಬಂದ ಕೆಲವೇ ನಿಮಿಷಗಳಲ್ಲಿ ಮಗನ ಸಾವಿನ ಸುದ್ದಿ ಕೇಳಿ ಆಘಾತಗೊಂಡಿದ್ದಾಗಿ ಅವರ ತಂದೆ ಕಣ್ಣೀರು ಹಾಕಿದ್ದಾರೆ.

ಇತ್ತ, ಪೊಲೀಸರಿಗೆ ಹೇಳಿಕೆ ನೀಡಿರುವ ಶಾಲೆಯ ವಾಹನ ಡ್ರೈವರ್, ಎಲ್ಲಾ ಮಕ್ಕಳೂ ಬೆಳಗಿನ ಪ್ರಾರ್ಥನೆಗಾಗಿ ಸೇರಿದ್ದಾಗ ತಾನು ಶೌಚಾಲಯಕ್ಕೆ ಹೋಗಿದ್ದು, ಆಗ ಬಾಲಕನ ಶವ ನೋಡಿದ್ದಾಗಿ ತಿಳಿಸಿದ್ದಾನೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A 9 year old student found dead in Ryan International School's toilet. Investigation is going on by local police to capture culprit.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ