• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವೈದ್ಯನಿಗೇ ಕೊರೊನಾ: ಚಿಕಿತ್ಸೆ ಪಡೆದವರು ಸೇರಿ 800 ಜನ ಕ್ವಾರಂಟೈನ್‌ನಲ್ಲಿ

|

ನವದೆಹಲಿ, ಮಾರ್ಚ್ 26: ದೆಹಲಿಯಲ್ಲಿ ಆಘಾತಕಾರಿ ಕೊರೊನಾ ಘಟನೆಯೊಂದು ನಡೆದಿದೆ. ದೆಹಲಿಯ ಮೌಜ್‌ಪುರ್ ಪ್ರದೇಶದ ಇಡೀ ಸ್ಥಳ ಕ್ವಾರಂಟೈನ್ ಆಗಿ ಮಾಡಲಾಗಿದೆ.

ದೆಹಲಿಯ ಮೊಹಲ್ಲಾ ಕ್ಲಿನಿಕ್‌ವೊಂದರ ಡಾಕ್ಟರ್‌ ಹಾಗೂ ಆತನ ಕುಟುಂಬಕ್ಕೆ ಕೊರೊನಾ ವೈರಸ್ ಪಾಸಿಟಿವ್ ಎನ್ನುವುದು ದೃಢವಾಗಿದೆ. ವೈದ್ಯ, ಆತನ ಪತ್ನಿ ಹಾಗೂ ಮಗಳಿಗೆ ಸೋಂಕು ತಗುಲಿದೆ. ದೆಹಲಿಯ ಈ ವೈದ್ಯ ವಿದೇಶದಿಂದ ಬಂದ ತನ್ನ ಸ್ನೇಹಿತರೊಬ್ಬರನ್ನು ಭೇಟಿ ಮಾಡಿದ್ದರು ಎನ್ನುವ ಶಂಕೆ ವ್ಯಕ್ತವಾಗಿದೆ.

ಗೋವಾದಲ್ಲಿ 3 ಜನರಿಗೆ ಕೊರೊನಾ ಪಾಸಿಟಿವ್

ವೈದ್ಯನಿಂದ ಕುಟುಂಬಕ್ಕೆ ಮಾತ್ರವಲ್ಲದೆ, ಆತನಿಂದ ಚಿಕಿತ್ಸೆ ಪಡೆದ ಜನರಿಗೆ ಹಾಗೂ ಕ್ಲಿನಿಕ್ ಇರುವ ಪ್ರದೇಶದಲ್ಲಿ ವಾಸಮಾಡುತ್ತಿರುವ ಜನರಿಗೆ ಸೋಂಕು ತಗುಲಿರುವ ಸಾಧ್ಯತೆ ಇದೆ. ಹಾಗಾಗಿ ಆ ಪ್ರದೇಶದ ಜನರನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ. 800 ಜನರನ್ನು ಗೃಹ ಬಂಧನದಲ್ಲಿ ಇಡಲಾಗಿದೆ.

ರೋಗ ಗುಣಪಡಿಸುವ ಡಾಕ್ಟರ್‌ಗೆನೇ ಕೊರೊನಾ ಸೋಂಕು ತಗುಲಿದರೆ, ಬಹಳ ಕಷ್ಟವಾಗುತ್ತದೆ. ಅವರಿಂದ ಚಿಕಿತ್ಸೆ ಪಡೆಯಲು ಬಂದ ನೂರಾರೂ ಜನರು ತಮಗೆ ತಿಳಿಯದೆ ಸೋಂಕಿತರು ಆಗುತ್ತಾರೆ.

Live Updates: ಮಧ್ಯಾಹ್ನ 1 ಗಂಟೆಗೆ ನಿರ್ಮಲಾ ಸೀತಾರಾಮನ್ ಭಾಷಣ

ಸದ್ಯ, ಭಾರತದಲ್ಲಿ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು 600ರ ಗಡಿ ದಾಟಿದೆ. ದೆಹಲಿಯಲ್ಲಿ 34 ಪ್ರಕರಣಗಳು ದೃಢವಾಗಿವೆ.

English summary
Coronavirus In India: 800 people who came in contact with a Mohalla (community) clinic doctor who tested positive for coronavirus have been quarantined.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X