ಅತ್ಯಾಚಾರಕ್ಕೆ ಗುರಿಯಾದ 8 ತಿಂಗಳ ಹಸುಳೆಗೆ 3 ಗಂಟೆಗಳ ಶಸ್ತ್ರಚಿಕಿತ್ಸೆ
ನವದೆಹಲಿ, ಜನವರಿ 31: ತನ್ನ ಸಂಬಂಧಿಯಿಂದಲೇ ಅತ್ಯಾಚಾರಕ್ಕೆ ಗುರಿಯಾದ 8 ತಿಂಗಳ ಹಸುಳೆಗೆ ಮೂರು ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಶಸ್ತ್ರ ಚಿಕಿತ್ಸೆ ನಂತರ ಮಗುವೀಗ ಚೇತರಿಸಿಕೊಳ್ಳುತ್ತಿದೆ.
ಮಗುವಿನ ಖಾಸಗಿ ಅಂಗಕ್ಕೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ ಎಂದು ದೆಹಲಿಯ ಕಲವಟಿ ಸರಣ್ ಮಕ್ಕಳ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಇದೀಗ ಮಗುವಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಏತನ್ಮಧ್ಯೆ ಇಂದು ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಏಮ್ಸ್ ನ ಇಬ್ಬರು ವೈದ್ಯರಿಗೆ ಪ್ರಕರಣದ ಮೇಲೆ ನಿಗಾ ಇಡುವಂತೆ ನಿರ್ದೇಶನ ನೀಡಿದೆ. ಜತೆಗೆ ಮಗುವನ್ನು ಏಮ್ಸ್ ಗೆ ವರ್ಗಾವಣೆ ಮಾಡುವ ಬಗ್ಗೆ ಅಥವಾ ಚಿಕಿತ್ಸೆಗೆ ಸಂಬಂಧಿಸಿದಂತೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಸೂಚಿಸಿದೆ.

ಹಸುಳೆ ಮೇಲಿನ ಅತ್ಯಾಚಾರ 'ಗಂಭೀರ ಪ್ರಕರಣ' ಎಂದು ಹೇಳಿರುವ ಸರ್ವೋಚ್ಛ ನ್ಯಾಯಾಲಯ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ. ಜತೆಗೆ ದೆಹಲಿ ಲೀಗಲ್ ಸರ್ವಿಸಸ್ ಅಥಾರಿಟಿಗೆ ಪ್ರಕರಣದಲ್ಲಿ ಸಹಾಯ ಮಾಡುವಂತೆಯೂ ಆದೇಶ ನೀಡಿದೆ.












Click it and Unblock the Notifications